ಶೂನ್ಯ ಬಂಡವಾಳದಿಂದ ಸಾವಯವ ಕೃಷಿ ಸಾಧ್ಯ: ಶಿವಳ್ಳಿ


ಕುಂದಗೋಳ, ಕೂಬಿಹಾಳ 16: ಸಾವಯವ ಕೃಷಿ ರಕ್ಷಣಾತ್ಮಕ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆಗೆ ಅತ್ಯುತ್ತಮ ವಿಧಾನ. ಶೂನ್ಯ ಬಂಡವಾಳದಿಂದ ಸಾವಯವ ಕೃಷಿ ಸಾಧ್ಯವೆಂದು ಕುಂದಗೋಳದ ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.

ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಧಾರವಾಡ, ಕೆ.ಸಿ.ಸಿ. ಬ್ಯಾಂಕ ನಿ, ಧಾರವಾಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕೂಬಿಹಾಳ ಮತ್ತು ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ  65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ "ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಪಾತ್ರ ದಿನದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಾಜಿ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಕಂಡಿದ್ದ ಗ್ರಾಮೀಣ ಅಭಿವೃದ್ದಿಯ ಕನಸು ಇಂದು ನನಸಾಗಬೇಕಿದೆ. ಅದಕ್ಕಾಗಿ ರೈತರಿಗೆ ನೀಡುತ್ತಿರುವ ಬಡ್ಡಿದರದ ಸಾಲ ಸಹಕಾರಿ ವ್ಯವಸ್ಥೆ ಸುದಾರಿಸುವಂತೆ ಮಾಡಿದೆ. ಸರಕಾರವು ಸಹಕಾರ ಸಂಘಗಳ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಈ ಎಲ್ಲಾ ಯೋಜನೆಗಳನ್ನು ಸಮಗ್ರವಾಗಿ ಉಳಿಸಿಕೊಂಡು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದರು. ಅವರು ಮುಂದುವರೆದು ಸಹಕಾರಿ ಸಂಘಗಳಿಗೆ ಸಾಕಷ್ಟು ಸವಾಲುಗಳಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಜಾಗತಿಕರಣ ಹಾಗೂ ಖಾಸಗಿಕರಣಗಳಿಂದ ರಾಷ್ಟ್ರದ ಅಭಿವೃದ್ದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆಯಲ್ಲದೇ ಕೃಷಿ ಚಟುವಟಿಕೆ ಕುಂಟಿತಗೊಳ್ಳುವಂತೆ ಮಾಡಿದೆ. ಹಣ್ಣು, ತರಕಾರಿ ಮತ್ತು ಹಾಲು ಉತ್ಪಾದನೆಯಲ್ಲಿ ಸಾವಯವ ಕೃಷಿ ಅಳವಡಿಸಿದಲ್ಲಿ ಉತ್ತಮ ಆರೋಗ್ಯ ಹೊಂದಲು ಸಾಧ್ಯವೆಂದು ಹೇಳಿದರು.

ಮುಖ್ಯ ಅತಿಥಿಗಳಾದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ  ಬಾಪುಗೌಡ ಡಿ. ಪಾಟೀಲ ಅವರು ಸಹಕಾರ ಸಪ್ತಾಹ ಆಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಸಹಕಾರಿ ಸಂಘಗಳ ಪ್ರಗತಿಯ ಚಿಂತನೆ ಮಾಡುವುದು ಅವಶ್ಯವಾಗಿದೆ. ಸಾವಯವ ಕೃಷಿ ಆಹಾರದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತದೆ. ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆಯನ್ನು ದೊರಕಿಸಿಕೊಡುತ್ತದೆ. ಸಾವಯವ ಕೃಷಿ ವಿಧಾನವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸಹಕಾರ ಸಂಸ್ಥೆಗಳು ಪ್ರಮಖ ಪಾತ್ರವನ್ನು ವಹಿಸಬಲ್ಲವು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆವಹಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕೂಬಿಹಾಳ ಇದರ ಅಧ್ಯಕ್ಷರಾದ ಪಕ್ಕೀರಪ್ಪ ಸಿ. ಅರಳಿಮರದ ಅವರು ಜನಸೇವೆಯಲ್ಲಿ ಸಾರ್ಥಕ ಇತಿಹಾಸವಿರುವ ಈ ಸಹಕಾರ ಕ್ಷೇತ್ರ ತಮ್ಮ ನಿಸ್ವಾರ್ತ, ಪ್ರಾಮಾಣಿಕ ಹಾಗೂ ಶ್ರದ್ಧಾಪೂರ್ವಕ ಸೇವೆ ಸಲ್ಲಿಸುವುದರ ಫಲವಾಗಿ ಸವರ್ಾಂಗೀಣ ಅಭಿವೃದ್ದಿ ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಬೀರಪ್ಪ ಕುರಬರ, ಉಪಾಧ್ಯಕ್ಷ ಮಹಾದೇವಪ್ಪ ಸಿ. ಪೂಜಾರ, ಯೂನಿಯನ್ದ ನಿದರ್ೇಶಕರಾದ ರಾಜಶೇಖರ ಪಟ್ಟೇದ ಉಪಸ್ಥಿತರಿದ್ದು ಮಾತನಾಡಿದರು. 

ಯೂನಿಯನ್ದ ನಿವೃತ್ತ ಸಿಇಓ ಆಯ್.ಎಸ್. ಪಾಟೀಲ ಸ್ವಾಗತಿಸಿದರು. ಆನಂದ ತಳವಾರ ವಂದನಾರ್ಪನೆಯನ್ನು ಮಾಡಿದರು.  ಕೆಐಸಿಎಂ ನಿವೃತ್ತ ಉಪನ್ಯಾಸಕ ಎಂ.ಜಿ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.