ವಿಜಯಪುರ, 9 : ಕೇಂದ್ರ ಸಕರ್ಾರ ಕಾಮರ್ಿಕ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾಮರ್ಿಕ ಸಂಘಟನೆಗಳು ಗುರುವಾರ ಜೈಲ್ ಭರೋ ಚಳವಳಿ ನಡೆಸಿದವು.
ಪ್ರತಿಭಟನೆಯ ಅಂಗವಾಗಿ ನಗರದ ಗಾಂಧಿವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ನೂರಕ್ಕೂ ಹೆಚ್ಚು ಪ್ರತಿಭಟನಾಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.
ಮೆರವಣಿಗೆಯಲ್ಲಿ ಕನರ್ಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಅಂಗನವಾಡಿ, ನೌಕರರ ಸಂಘ, ಕ.ರಾ.ಗ್ರಾಮ ಪಂಚಾಯತ ನೌಕರರ ಸಂಘ, ಕ.ರಾ.ಅಕ್ಷರ ದಾಸೋಹ ನೌಕರರ ಸಂಘ, ಪಟ್ಟಣ ಪಂಚಾಯತ ನೌಕರರ ಸಂಘ, ಲಾರಿ ಹಮಾಲರ ಸಂಘ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕು ಸಮಿತಿ- ಕನರ್ಾಟಕ, ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಮರ್ಿಕ ಸಂಘಟನೆಯ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸಕರ್ಾರ ಜನವಿರೋಧಿ, ಕಾಮರ್ಿಕ ವಿರೋಧೀ ನೀತಿ ಅನುಸರಣೆ ಮಾಡುತ್ತಿದೆ, ಚುನಾವಣೆ ಪೂರ್ವದಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದ ಪಕ್ಷ ಅಧಿಕಾರಕ್ಕೆ ಬಂಧ ನಂತರ ಎಲ್ಲವನ್ನೂ ಮರೆತು ಕೇವಲ ಕಾಪರ್ೋರೇಟ್ ಹಿತರಕ್ಷಣೆಯ ಕಾರ್ಯವನ್ನು ಮಾತ್ರ ಗಂಭೀರವಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಸಾಕಷ್ಟು ತೊಂದರೆಯಲ್ಲಿದ್ದಾರೆ, ಅವರ ಸಾಲಮನ್ನಾ ಮಾಡಲು ಸಹ ಕೇಂದ್ರ ಸಕರ್ಾರ ಮುಂದಾಗಿಲ್ಲ. ಬದಲಾಗಿ ಉದ್ಯಮಪತಿಗಳ ಲಕ್ಷಾಂತರ ಕೋಟಿ ರೂ.ನಷ್ಟು ಸಾಲವನ್ನು ಮನ್ನಾ ಮಾಡಲು ಆಸಕ್ತಿ ತೋರಿದೆ. ಕಾಮರ್ಿಕರ ಪರವಾದ ಕೆಲವೊಂದು ಕಾನೂನುಗಳನ್ನ ವಿನಾಕಾರಣ ಮಾಪರ್ಾಡು ಮಾಡಿ ಕಾಮರ್ಿಕ ಹಕ್ಕುಗಳನ್ನು ದಮನಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷಾಂತರ ಕೋಟಿ ರೂ. ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ನೀಡುವುದಾಗಿ ಹೇಳಿದ್ದ ಕೇಂದ್ರ ಸಕರ್ಾರ ನಾಲ್ಕು ವರ್ಷ ಕಳೆದರೂ ಸಹ ಈ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ, ಇದು ಜನರಿಗೆ ಮಾಡಿದ ಮೋಸ, ದ್ರೋಹ ಎಂದು ವಾಗ್ದಾಳಿ ನಡೆಸಿದರು.
ರೈತರು ಸೇರಿದಂತೆ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಎಲ್ಲ ಪ್ರಕಾರದ ಸಾಲವನ್ನು ಮನ್ನಾ ಮಾಡಿ ಋಣಮುಕ್ತರನ್ನಾಗಿಸುವದು, ರೈತರು ಬೆಳೆದ ಬೆಳಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಹಾಗು ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಲಾಭಾಂಶ ಸೇರ್ಪಡೆ ಮಾಡಿ ರೈತರಿಗೆ ಬೆಂಬಲ ಬೆಲೆ ರೂಪದಲ್ಲಿ ನೀಡುವ ವ್ಯವಸ್ಥೆ ಕಲ್ಪಿಸುವುದು, ನಿವೇಶನ ಹಾಗೂ ವಸತಿ ರಹಿತರಿಗೆ ಕೂಡಲೇ ಉಚಿತವಾಗಿ ಮನೆ ನೀಡಬೇಕು ಜೊತೆಗೆ ಅವರು ಆಥರ್ಿಕವಾಗಿ ಸಬಲರಾಗಲು ಹೈನುಗಾರಿಕೆ ಮೊದಲಾದ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯ ಧನ ಒದಗಿಸುವುದು, ರೈತರು, ಕೂಲಿಕಾಮರ್ಿಕರಿಗೆ ತಲಾ ಐದು ಸಾವಿರ ರೂ. ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು, ಬೆಳೆ ವಿಮಾ ಯೋಜನೆಯನ್ನು ಇನ್ನಷ್ಟೂ ಸರಳೀಕರಣಗೊಳಿಸಿ ಬೆಳೆ ವಿಮೆಯನ್ನು ರೈತ ಸ್ನೇಹಿಯನ್ನಾಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಾಯಿತು.
ಕಾಮರ್ಿಕ ಮುಖಂಡರಾದ ಅಣ್ಣಾರಾಯ ಈಳಿಗೇರ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಮಳಸಿದ್ಧ ನಾಯ್ಕೋಡಿ, ಸುನಂದಾ ನಾಯಕ, ಭಾರತಿ ವಾಲಿ, ಸುನಂದಾ ನಾಯಕ, ಸರಸ್ವತಿ ಮಠ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಹೀರಾಬಾಯಿ ಹಜೇರಿ, ಅಶ್ವಿನಿ ತಳವಾರ, ಸುಮಿತ್ರ ಘೋಣಸಗಿ, ದಾನಮ್ಮ ಗುಗ್ಗರೆ, ಬಿ.ಪದ್ಮಾವತಿ, ಆರ್.ಸಿ.ಮಠ, ಲಕ್ಷ್ಮೀಂಬಾಯಿ ಕುಂಬಾರ, ರೈತ ಸಂಘದ ಪರಶುರಾಮ ಮಂಟೂರ, ರಾಮಣ್ಣ ಶಿರೋಳ, ಕಾಜುಸಾಬ ಕೋಲಾರ, ಬಸೀರಹ್ಮದ ತಾಂಬೆ, ಮಳಸಿದ್ದ ನಾಯ್ಕೋಡಿ, ಬಸ್ಮಿಲ್ಲಾ ಇನಾಂದಾರ, ಸಂಗು ನಾಲ್ಕಮನ, ಮಲಿಕಸಾಬ ಬಾಗಲಕೋಟ, ರಾಜು ಜಾಧವ, ಸಂಗಪ್ಪ ಸೀತಿಮನಿ, ರಂಗಪ್ಪ ದಳವಾಯಿ, ಇಸಾಕ ಜಮಾದಾರ, ವಿಠ್ಠಲ ಹೊನಮೋರೆ, ರೇಣುಕಾ ಯಂಟಮಾನ,ಎಂ.ಕೆ.ಚಳ್ಳಗಿ, ಲಾಲಸಾಬ ದೇವರಮನಿ, ಸಿದ್ರಾಯ ಬಂಗಾರಿ ಪಾಲ್ಗೊಂಡಿದ್ದರು.