ಜನೋಪಯೋಗಿ ಕಾರ್ಯಕ್ಕೆ ಸಿಕ್ಕ ಅವಕಾಶ: ಸಚಿವ ಕಾರಜೋಳ

ಲೋಕದರ್ಶನವರದಿ

ಮುಧೋಳ: ಶಿರೋಳ ಗ್ರಾಮಕ್ಕೆ ಬರುವದೆಂದರೆ ಹೆಣ್ಣು ಮಗಳು ತವರು ಮನೆಗೆ ಬಂದಷ್ಟು ನನಗೆ ಸಂತೋಷವಾಗುತ್ತದೆ, ಶಿರೋಳ ಗ್ರಾಮಸ್ಥರು ನನ್ನ ಮೇಲೆ ಇಟ್ಟಂತ ಪ್ರೀತಿ, ವಿಶ್ವಾಸ ನಾನೆಂದೂ ಮರೆಯಲು ಸಾದ್ಯವಿಲ್ಲ, 16ತಿಂಗಳು ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾಗಿತ್ತು ಆದರೆ ಸರಕಾರ ರಚನೆಗೆ ಬೇಕಾದ ಸಂಖ್ಯಾಬಲದ ಕೊರತೆಯಿಂದಾಗಿ ಸರಕಾರ ರಚನೆಯಾಗಿಲ್ಲ, ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ನಮ್ಮ ಅಧಿಕಾರಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಲು ನಮಗೊಂದು ಅವಕಾಶ ಸಿಕ್ಕಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

   14ನೇ ಹಣಕಾಸು ಯೋಜನೆಯಡಿ ರು.1.50ಲಕ್ಷ ವೆಚ್ಚದಲ್ಲಿ ಶಿರೋಳ ಗ್ರಾಮದಲ್ಲಿ ನಿಮರ್ಿಸಲಾದ ನೂತನ ಬಸ್ ನಿಲ್ದಾಣ ಉದ್ಘಾಟನೆ, ಸಮಾಜ ಕಲ್ಯಾಣ ಇಲಾಖೆಯ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆಯ ಅನುದಾನದಡಿ ರು.10 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿಮರ್ಿಸಲಾದ ಡಾ.ಆಂಬೇಡ್ಕರ ಸಮುದಾಯ ಭವನ ಉದ್ಘಾಟನೆ,ಸಣ್ಣ ನೀರಾವರಿ ಇಲಾಖೆಯ 2018-19ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ರೂ 31,50 ಲಕ್ಷ ವೆಚ್ಚದಲ್ಲಿ ಬ್ರಿಡ್ಜ ಕಂ ಬ್ಯಾರೇಜ್ ಉದ್ಘಾಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್ಐಡಿಎಫ್ ಯೋಜನೆಯಡಿ ರು.9.30ಲಕ್ಷ ವೆಚ್ಚದಲ್ಲಿ ಚಿಂಚಲಿ ತೋಟದ ಅಂಗನವಾಡಿ ಕೇಂದ್ರದ ಉದ್ಘಾಟನೆ, ಅಪ್ರವಾಸೋಧ್ಯಮ ಇಲಾಖೆಯ ಬಂಡವಾಳ ವೆಚ್ಚ ಯೋಜನೆಯಡಿ ರೂ.50ಲಕ್ಷ ವೆಚ್ಚದಲ್ಲಿ ನೂತನ ಯಾತ್ರಿ ನಿವಾಸ ಉದ್ಘಾಟನೆ.

     ಶಿಕ್ಷಣ ಇಲಾಖೆಯ 2016-17ನೇ ಸಾಲಿನ ಎಸ್.ಸಿ ಮತ್ತು ಟಿಎಸ್ಪಿ ಅನುದಾನದಡಿ ಸರಕಾರಿ ಪ್ರೌಢ ಶಾಲೆಯ ನೂತನ ನಾಲ್ಕು ಕೋಣೆಗಳ ಉದ್ಘಾಟನೆಗೊಳಿಸಿದ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ನೆರೆ ಹಾವಳಿಯಿಂದ ಸಾಕಷ್ಟು ಜನರು ಸಂಕಷ್ಟ ಅನುಭವಿಸಿದ್ದಾರೆ,ಅಷ್ಟೇ ಅಲ್ಲ ಜಲಪ್ರವಾಹದಿಂದ ಸಾವಿರಾರು ಎಕರೆ ಬೆಳೆನಾಶವಾಗಿದೆ, 

         ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸರಕಾರ ಸಕಲ ಸಿದ್ದತೆ ಮಾಡಿಕೊಂಡಿದೆ ಕಾರಣ ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಬಿಜೆಪಿ ಸರಕಾರ ರೈತಪರವಾಗಿದ್ದು ರೈತರ ಹಿತಕಾಪಾಡುವಲ್ಲಿ ಸರಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ,ಯಾರೂ ಆತಂಕ ಪಡಬಾರದು ಎಂದರು.

       ತಾ.ಪಂ ಅಧ್ಯಕ್ಷ ತಿಮ್ಮಣ್ಣ      ಬಟಕುಕರ್ಿ,ರನ್ನ ಶುಗರ್ಸ ಚೇರಮನ್ ಆರ್.ಎಸ್.ತಳೇವಾಡ, ಕಲ್ಲಪ್ಪ ಸಬರದ, ನಾಗಪ್ಪ ಅಂಬಿ, ಕುಮಾರ ಹುಲಕುಂದ,ಗ್ರಾಮದ ಪ್ರಮುಖರಾದ ಕಲ್ಲಪ್ಪ ಕಡಗದ,ಕರಿಯಪ್ಪ ಲಾಯನ್ನವರ, ಸದಾಶಿವ ಮಡ್ಡೆಪ್ಪಗೋಳ, ಸುರೇಶ ಢವಳೇಶ್ವರ, ಯಶವಂತ ಘೋರ್ಪಡೆ, ಕಾಡಪ್ಪ ದೇಸಾಯಿ, ಕಾಡಪ್ಪ ಕಡಪಟ್ಟಿ, ಬಸಪ್ಪ ವಾಲಿಮರದ, ಗಂಗಪ್ಪ ಉಳ್ಳಾಗಡ್ಡಿ ಸೇರಿದಂತೆ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು.