65ನೇ ವನ್ಯ ಪ್ರಾಣಿಗಳ ಸಪ್ತಾಹ ಉದ್ಘಾಟನೆ

ಲೊಕದರ್ಶನ ವರದಿ

ಗೋಕಾಕ: ಪರಿಸರದಲ್ಲಿ ಹುಟ್ಟಿ ಪರಿಸರವನ್ನು ನಾಶ ಮಾಡುತ್ತಾ ಬದುಕುತ್ತಿರುವ ಮಾನವ, ಪಕೃತಿ ವಿಕೋಪಗಳನ್ನು ಎದುರಿಸುತ್ತಿದ್ದಾನೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ ಹೇಳಿದರು.

ಅವರು ಗುರುವಾರದಂದು ನಗರದ ಅರಣ್ಯ ಇಲಾಖೆಯ ಸಸ್ಯೋದ್ಯಾನದಲ್ಲಿ ಅರಣ್ಯ ಇಲಾಖೆಯಿಂದ ಏರ್ಪಡಿಸಲಾದ 65ನೇ ವನ್ಯ ಪ್ರಾಣಿಗಳ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ನಾಗರೀಕತೆಯ ಹೆಸರಿನಲ್ಲಿ ಕಾಡನ್ನು ಕಡಿದು ಕಾಂಕ್ರೀಟ ನಾಡನ್ನಾಗಿ ಪರಿವತರ್ಿಸುತ್ತಿರುವುದಿಂದ ಪರಿಸರ ನಾಶವಾಗಿ ಪ್ರಕೃತಿ ವಿಕೋಪಗಳ ಜರುಗಿ ತನ್ನನ್ನು ತಾನೆ ಅನಾಹುತಗಳನ್ನು ಆಹ್ವಾನಿಸಿ ಸಂಕಟಕ್ಕೀಡಾಗುತ್ತಿದ್ದಾನೆ. 

ಪರಿಸರ ಸಮತೋಲನ ರಕ್ಷಣೆಗೆ ಕಾಡನ್ನು ಬೆಳೆಸಿ, ವನ್ಯಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕೆಂದು ತಿಳಿಸಿದ ಅವರು ವಿದ್ಯಾಥರ್ಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತರಾಗಿ ಇತರರಲ್ಲೂ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆಯಿಂದ ನಗರದ ವಿವಿಧ ಶಾಲೆಗಳ ವಿದ್ಯಾಥರ್ಿಗಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪಧರ್ೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್.ವಣ್ಣೂರ,  ಪತ್ರಾಂಕಿತ ವ್ಯವಸ್ಥಾಪಕಿ ಶ್ರೀದೇವಿ ಕುರೆಡ್ಡಿ, ಶಿಕ್ಷಣ ಸಂಯೋಜಕ ಬಿ.ಎಮ್.ವಣ್ಣೂರ, ಶಿಕ್ಷಕರಾದ ಟಿ.ಬಿ.ಬಿಲ್ಲ, ಆರ್.ಎಲ್.ಮಿಜರ್ಿ, ಎಮ್.ಎಸ್.ದೊಡ್ಡನ್ನವರ, ಜಿ.ವಾಯ್. ಭಜಂತ್ರಿ ಇದ್ದರು. ಉಪವಲಯ ಅರಣ್ಯಾಧಿಕಾರಿ ಎಸ್.ಎಚ್.ಇಂಗಳಗಿ, ಸ್ವಾಗತಿಸಿ, ವಂದಿಸಿದರು.