ವಿಶ್ವ ಅರ್ಥೈಟಿಸ ದಿನಾಚರಣೆ ಉದ್ಘಾಟನೆ

ಲೋಕದರ್ಶನ ವರದಿ

ಬೆಳಗಾವಿ 17:  ಅಧಿಕ ಬೊಜ್ಜು ಹೊಂದಿರುವ ಆಧುನಿಕ ಮಾನವನ ಒಟ್ಟು ಜೀವಿತಾವಧಿಯ ಸುಮಾರು 40 ವರ್ಷಗಳ ನಂತರ ಶೇ. 1ರಷ್ಟು ಜನರು ವಿವಿಧ ರೀತಿಯ ಸಂಧಿವಾತಗಳಿಂದ ಬಳಲುತ್ತಾರೆ. ಪ್ರತಿದಿನ ರೋಗಿಯ ಪ್ರಾಣ ಹಿಂಡುವ ವ್ಯಾದಿಗೆ ಮಂಗಳ ಹಾಡಲು ಹಲವು ಉಪಾಯಗಳಿವೆ ಎಂದು ಕೆಎಲ್ಇ ಅಕಾಡೆಮಿ ಹೈಯರ ಎಜುಕೇಶನ & ರಿಸರ್ಚನ ಕುಲಪತಿ ಡಾ. ವಿವೇಕ ಸಾವೋಜಿ ಅವರು ತಿಳಿಸಿದರು.

ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಅರ್ಥೈಟಿಸ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಂಧಿವಾತವು ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೇ ಕಾಣಿಸಿಕೊಳ್ಳುವ ರೋಗವು ಬಾಲ್ಯಾವಸ್ಥೆಯಲ್ಲಿ ಅಪರೂಪವಲ್ಲ. ನಿಗದಿತ ಸಮಯದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಸಂಧಿನ ತೊಂದರೆ, ಬಗೆಳವಣಿಗೆ ಕುಂಠಿತ, ಮಾನಸಿಕ ಅಸ್ವಸ್ಥತೆಗಳಿಗೆ ಎಡೆಮಾಡಿ ಕೊಡುವದಲ್ಲದೇ ಬೆನ್ನುಹುರಿ ವ್ಯಾದಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿದರ್ೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಸಂಧಿವಾತವು ರೋಗವಲ್ಲ. ಆದರೆ ಇದು ವಿವಿಧ ರೋಗಗಳ ತವರೂರು. ಬಹಳಷ್ಟು ರೋಗಗಳಲ್ಲಿ ಸಂಧಿನ ಪಾತ್ರ ಅತ್ಯಧಿಕ. ವಾಯು ಸಂಧಿವಾತ (ರ್ಯುಮ್ಯಾಟಾಯ್ಡ), ಎಲುಬು ಸಂಧಿವಾತ( ಅಸ್ಟಿಯೋ) ಸಣ್ಣ ಸಂಧಿನ ಸಂಧಿವಾತ( ಗೌಟ) ಬೆನ್ನೆಲುಬು ಸಂಧಿವಾತ(ಸ್ಪಾಂಡಿಲೈಟಿಸ್) ಹೀಗೆ ವಿವಿಧ ರೀತಿಯ ಸಂಧಿವಾತಗಳಿವೆ. ಖೀವು ಸಾಮಾನ್ಯವಾಗಿದ್ದು, ರಕ್ತನಾಳ ಹಾಗೂ ಸ್ನಾಯು ಕಾಯಿಲೆ ಗಂಭೀರವಾದವುಗಳು. ಸಂಪೂರ್ಣ ಗುಣಮುಖವಾಗದ ರೋಗಕ್ಕೆ ನೋವು ನಿವಾರಕ ಔಷಧಿಯೇ ಆಧಾರ ಎಂದು ವಿವರಿಸಿದರು.

ಎಲಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ಶೈಲೇಶ ಉದಪುಡಿ ಅವರು, ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಸಂದರ್ಬದಲ್ಲಿ ಡಾ. ಪಿ ಹೊಗಾಡೆ, ಡಾ. ಸುಧಾ ರೆಡ್ಡಿ, ಡಾ. ಕಿರಣ ಪಾಟೀಲ, ಡಾ. ಎಸ್ ಕೆ ಸೈದಾಪೂರ, ಡಾ. ಆರ್ ಬಿ ಉಪ್ಪಿನ, ಡಾ. ರವಿ ಜತ್ತಿ, ಡಾ. ದಿನೇಶ ಕಾಳೆ, ಡಾ. ಎಸ್ ಸಿ ಸಾಣಿಕೊಪ್ಪ, ಡಾ ಸಮೀರ ಹಾವೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು