ಲೋಕದರ್ಶನ ವರದಿ
ಗೋಕಾಕ: ಮಹಿಳೆಯರು ವೃತ್ತಿಪರ ತರಬೇತಿಗಳನ್ನು ಪಡೆದು ಸ್ವಾವಲಂಭಿಗಳಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ನಗರಸಭಾ ಸದಸ್ಯೆ ಲಕ್ಷ್ಮೀ ದೇಶನೂರ ಹೇಳಿದರು.
ಶನಿವಾರದಂದು ನಗರದ ತಾ.ಪಂ. ಸಭಾ ಭವನದಲ್ಲಿ ಇಲ್ಲಿಯ ಇನ್ಸಿಟೂಟ್ ಆಫ್ ಫ್ಯಾಶನ ಟೆಕ್ನಾಲಜಿಯವರು ಬೆಳಗಾವಿಯ ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆಯಡಿ ಹಮ್ಮಿಕೊಂಡ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಪರ ತರಬೇತಿಗಳನ್ನು ಪಡೆದು ಸ್ವಉದ್ಯೋಗಗಳನ್ನು ಕೈಗೊಂಡು ನೆಮ್ಮದಿ ಜೀವನ ಸಾಗಿಸಬಹುದು. ಇತರ ಸಂಸ್ಥೆಗಳಲ್ಲೂ ಉದ್ಯೋಗಗಳ ಅವಕಾಶಗಳಿವೆ. ಸಕರ್ಾರವು ಸಹಾಯಧನ ನೀಡಿ ಸ್ವಉದ್ಯೋಗ ಮಾಡಲು ಪ್ರೇರಣೆಯನ್ನು ನೀಡುತ್ತಿದ್ದು, ಇವುಗಳ ಸದುಪಯೋಗದಿಂದ ಸ್ವಾಭಿಮಾನಿಗಳಾಗಿ ಜೀವನವನ್ನು ನಡೆಸಿರೆಂದು ಸಲಹೆ ನೀಡಿದರು. ವೇದಿಕೆ ಮೇಲೆ ಸಂಸ್ಥೆಯ ಪ್ರಾಚಾಯರ್ೆ ರೀನಾ ಬಾಣಸಿ, ಶಿಕ್ಷಕಿ ಸುಜಾತಾ ಹಿರೇಮಠ ಹಾಗೂ ಮುಖಂಡ ಬಸವರಾಜ ದೇಶನೂರ ಇದ್ದರು.