ಲೋಕದರ್ಶನ ವರದಿ
ಇಂಡಿ 30: ಭೀಮಾನದಿಗೆ ನಿಮರ್ಿಸಿದ ಉಮರಾಣಿಹತ್ತಿರದ ಬ್ಯಾರೇಜಿನ ಗೇಟುಗಳು ಹಾಳಾಗಿದ್ದು ನೀರು ನಿಲ್ಲದೇ ಸಂಗ್ರಹಿಸಿದ ನೀರು ಬ್ಯಾರೇಜಿನಲ್ಲಿ ನಿಲ್ಲದೇ ಹರಿದು ಹೋಗುತ್ತದೆ ಹೀಗಾದರೆ ಕೆರೆ ತುಂಬುವ ಯೋಜನೆಯ ಕೆರೆಗಳು ಹೇಗೆ ತುಂಬಬೇಕು ರೈತರ ದನ ಕರುಗಳಿಗೆ ಜನರಿಗೆ ಕುಡಿಯುವ ನೀರು ಎಲ್ಲಿಂದ ಬರಬೇಕು ಅಧಿಕಾರಿಗಳು ಮೊದಲು ಆ ಗೇಟುಗಳನ್ನು ದುರಸ್ತಿಗೊಳಿಸಿ ಸರಿಯಾಗಿ ನೀರು ನಿಲ್ಲುವಂತೆ ಮಾಡಿ ಜನ ಜಾನುವಾರುಗಳಿಗೆ ನೀರು ದೊರಕುವಂತೆ ಮಾಡಿ ಇಲ್ಲದಿದ್ದರೆ ಜನ ಜಾನುವಾರುಗಳಿಗೆ ನೀರಿಲ್ಲದೇ ತೊಂದರೆಯಾಗುತ್ತದೆ ಎಂದು ಇಂಚಗೇರಿ ತಾ.ಪಂ.ಸದಸ್ಯ ಡಾ.ರವಿದಾಸ ಜಾಧವ ಸಭೆಯಲ್ಲಿ ಚಿಕ್ಕ ನೀರಾವರೀ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಅವರು ದಿ.30ರಂದು ತಾ.ಪಂ.ಸಭಾಭವನದಲ್ಲಿ ತಾ.ಪಂ.ಅದ್ಯಕ್ಷ ಸೇಖರ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತವರ್ಷ ಭೀಕರ ಬರಗಾಲವಿದ್ದು ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗಲಿದೆ ಈಗಲೇ ಅಡವಿವಸ್ತಿಗಳಿಗೆ ತೊಂದರೆ ಆರಂಭವಾಗಿದೆ. ಸರಕಾರ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಕೆರೆ ತುಂಬುವ ಯೋಜನೆ ಮಾಡಿದೆ. ಆದರೆ ಕರೆಗಳಿಗೆ ನೀರು ಪೂರೈಸಬೇಕಾದ ಭೀಮಾನದಿಗೆ ಉಮರಾಣಿ ಹತ್ತಿರ ನಿಮರ್ಿಸಿದ ಬ್ಯಾರೇಜು ಗೇಟುಗಳು ಹಾಳಾಗಿ ಹೋಗಿದ್ದು ನೀರು ಸಂಗ್ರಹವಾಗುತ್ತಿಲ್ಲ ಮಹಾರಾಷ್ಟ್ರ ಸರಕಾರ ಆಗಾಗ ಸೋಲಾಪೂರದ ಕುಡಿಯುವ ನೀರಿಗಾಗಿ ನೀರು ಬಿಟ್ಟಾಗ ಈ ಬ್ಯಾರೇಜು ತುಂಬಿ ನೀರು ಸಂಗ್ರಹಿಸಿದರೆ ಕರೆ ತುಂಬುವ ಯೋಜನೆಯಿಂದ ನಮ್ಮ ಭಾಗದ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಆದರೆ ಅಧಿಕಾರಿಗಳು ಮೊದಲು ಗೇಟುಗಳನ್ನು ದುರಸ್ತಿಗೊಳಿಸಿ ನೀರು ನಿಲ್ಲುವಂತೆ ಮಾಡಿ ಇಲ್ಲದಿದ್ದರೆ ಬ್ಯಾರೇಜು ಮಾಡಿ ಏನುಪ್ರಯೋಜನ ಎಂದರು.
ತಾಲೂಕಿನ 32 ಗ್ರಾಮಗಳ ತೋಟದ ವಸತಿಗಳಿಗೆ ಕುಡಿಯುವ ನೀರಿಗಾಗಿ ಟ್ಯಾಂಕರ್ ಗಳ ಮೂಲ ನೀರು ಆರಂಭಿಸಲಾಗಿದೆ. 90 ದಿವಸಗಳು ಪೂರೈಸಿದ ನಂತರ ಮತ್ತೆ ಅವಸ್ಯಕತೆಯನ್ನು ಪರಿಸೀಲಿಸಿ ಟ್ಯಾಂಕರ್ ನೀರು ಮುಂದುವರೆಸಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ತಾ.ಪಂ.ಅಧಿಕಾರಿ ಡಾ. ವಿಜಯಕುಮಾರ ಆಜೂರ ತಿಳಿಸಿದರು.
ಪಂಚಾಯತ್ ರಾಜ್ಯ ಇಂಜನಿಯರಿಂಗ ಅಧಿಕಾರಿ ರಾಜಕುಮಾರ ತೊರವಿ ಸೇರಿದಂತೆ ವಿವಿಧ ಇಲಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾ.ಪಂ.ಅದ್ಯಕ್ಷ ಶೇಖರ ನಾಯಕ್ ತಾ.ಪಂ.ಕಾ.ನಿ.ಅಧಿಕಾರಿ ಡಾ.ವಿಜಯಕುಮಾರ ಆಜೂರ ಹಳ್ಳಿಕೇರಿ ಮುಂತಾದವರು ಉಪಸ್ಥಿತರಿದ್ದರು. ತಾ.ಪಂ.ಅಧಿಕಾರಿ ವಿಜಯಕುಮಾರ ಆಜೂರ ಸ್ವಾಗತಿಸಿದರು. ಹಳ್ಳಿಕೇರಿ ವಂದಿಸಿದರು. ಪೋಟೋ ಕ್ಯಾಪ್ಸನ್ ಇಂಡಿ 29:01 ಎ/ಬಿ: ಗುರುವಾರ ತಾ.ಪಂ.ಸಭಾಭವನದಲ್ಲಿ ತಾ.ಪಂ. ಅದ್ಯಕ್ಷ ಶೇಖರ ನಾಯಕ್ ಅಧ್ಯಕ್ಷತೆಯಲ್ಲಿ ತಾ.ಪಂ.ಸಾಮಾನ್ಯ ಸಭೆ ಜರುಗಿತು.