ಈರುಳ್ಳಿ ಬೆಲೆ ಕುಸಿತ ರೈತನ ಕಣ್ಣಲ್ಲಿ ಕಂಬನಿ ಅಪಾರ ನಿರಾಸೆ

ತಾಂಬಾ 1:ಮಳೆ ಕೋರತೆ ಮದ್ಯ ಬಂಪರ್ ಈರುಳ್ಳಿ ಬೆಳೆದ ರೈತ ಬಾರಿ ಖುಷಿಯಲ್ಲಿದ್ದ ಉತ್ತಮ ಬೆಲೆಯ ನಿರೀಕ್ಷೇಯಲ್ಲಿದ್ದ ರೈತರು ದಿಡಿರ ಬೆಲೆ ಕುಸಿದಿದ್ದರಿಂದ ರೈತನ ಕಣ್ಣಲ್ಲಿ ನೀರುಬರುವಂತಾಗಿ ಬಾರಿ ನಿರಾಸೆ ಮುಡಿದೆ.

ಜಿಲ್ಲೆಯಲ್ಲಿ ಮುಂಗಾರು ವೈಪಲ್ಯವಾಗಿದೆ ನೀರಾವರಿ ಪ್ರದೇಶದ ರೈತರು ಅಲ್ಪ ನೀರಿನಲ್ಲು ಬಂಪರ ಈರುಳ್ಳಿ ಬೆಳೆದಿದ್ದಾರೆ ಇದರಿಂದಾಗಿ ಎಕರೆಗೆ 80ರಿಂದ90 ಚಿಲದಂತೆ ಇಳುವರಿಯು ಬಂದಿತ್ತು ಆದರೆ ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೆಲೆಯಿಲ್ಲ ಕಳೆದಬಾರಿ ಕ್ವಿಂಟಲಗೆ ಈರುಳ್ಳಿ 4 ಸಾವಿರದಿಂದ 5ಸಾವಿರದವರೆಗೆ ಮಾರಾಟವಾಗಿತ್ತು ಆದರೀಗ 300 ರೂಪಾಯಿಗೆ ಕುಸಿದಿದ್ದು ರೈತರನ್ನು ಚಿಂತೆಗಿಡು ಮಾಡಿದೆ ಸಾಲ ಸೂಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆಯಿಂದ ಮಾಡಿದ ಖಚರ್ೂ ಸಹ ಸರಿದುಗಿಸುವದು ಕಷ್ಡವಾಗಿದೆ ಇನ್ನೋದೆಡೆ ಹೋರಜಿಲ್ಲೆಗಳ ಈರುಳ್ಳಿ ಸಾಗಿಸಲು ಪ್ರತಿ ಚಿಲಕ್ಕೆ 150ರಿಂದ 200ರೂಗಳು ವಹಿಸಬೇಕಿದೆ ಹೀಗಾಗಿ ಈರಳ್ಳಿ ಮಾರಾಟದಿಂದ ಬಂದ ಹಣ ಸಾಗಾಣಿಗೆ ಸಾಕಾಗುವದಿಲ್ಲ ಎನ್ನುತ್ತಾರೆ ರೈತರು.

ಮುಂಗಾರು ವೈಪಲ್ಯದ ಮದ್ಯೇಯು ಕಷ್ಟ ಪಟ್ಟು ಈರುಳ್ಳಿ ಬೆಳೆದ ಈ ಬಾರಿ ಮತ್ತೆ ನೀರಾಸೆಯಾಗಿದೆ ಕೂಡಲೆ ಸರಕಾರ ಬೆಂಬಲ ಬೇಲೆ ಘೋಷಿಸಬೇಕು ಎಂಬ ರೈತರ ವತ್ತಾಯ ಬೆಲೆ ಕುಸಿತದಿಂದಾಗಿ ಅನಿವಾರ್ಯವಾಗಿ ರೈತರು ಕಟಾವು ಮಾಡುತ್ತಿದ್ದು ಇದರಿಂದ ಗಾತ್ರ ಮತ್ತು ಬೆಲೆ ಸಹಜವಾಗಿ ಕಡಿಮೆಯಾಗಿ ಈರುಳ್ಳಿಯನ್ನು ಯಾರು ಕೇಳುತ್ತಿಲ್ಲ ಸರಕಾರದ ನೀಯಮ ಅನ್ವಯ ಪಸಲ್ ಭೀಮಾ ಯೋಜನೆ ಹಲವು ಪ್ರದೇಶಗಿಗೆ ಆಯಾ ಬೆಳೆಗಳಿಗೆ ತಕ್ಕಂತೆ ಮಾತ್ರ ದೋರೆಯುತ್ತದೆ ಬರ ಪ್ರದೇಶ ಎಂದು ಘೋಷಿಸಿ ಇದು ಅನ್ವಯ ಪಸಲ್ ಭೀಮಾ ಯೋಜನೆಗೆ ರೈತರು ಹಣ ಕಟ್ಟುವದು ವಿರಳ ಇನ್ನು ಪರಿಹಾರ ಪಡೆಯಲು ಹರಸಾಹಸ ಪಡೆಬೇಕೆಂದು ರೈತರು ತಮ್ಮ ಅಳಲು ತೋರಿಕೋಂಡಿದ್ದಾರೆ.

ಉತ್ತಮ ಈರುಳ್ಳಿಗೆ ಗರಿಷ್ಠ ಬೆಲೆ 1100 ರೂ ಪ್ರತಿ ಕ್ವಿಂಟಲ್ಗೆ ಇದ್ದರೆ 2ನೇ ದಜರ್ೇ ಗಡ್ಡೆಗೆ 700ರಿಂದ 800ರೂ ಹಾಗೂ ಕೇಳ ದಜರ್ೇಗೆ 400ರಿಂದ 500ರೂಗೆ ಮಾರಟವಾಗುತ್ತಿರುವದು ರೈತರನ್ನು ಆತಂಖಕಿಡು ಮಾಡಿದೆ ಯಾತಕ್ಕಾದರು ಕೃಷಿ ಮಾಡಬೇಕು ಮಣ್ಣಲ್ಲಿ ಮಣ್ಣಾಗಿ ದುಡಿದರು ಬೆಳೆ ಬಂದಾಗ ದರವಿಲ್ಲದಿದ್ದರೆ ಏನು ಪ್ರಯೋಜನ ಎನ್ನುವದು ರೈತರ ಮನದಾಳದ ನೋವು.

1 ಹೋಲದಲ್ಲಿರುವ ಈರುಳ್ಳಿಯನ್ನು ಕೀಳಿಸುತ್ತಿದ್ದು ಅರ್ಧ ಕೆಟ್ಟು ಹೋಗಿದೆ ಇನ್ನರ್ಧ ಪರವಾಗಿಲ್ಲ ಕೆಜಿ 5 ರಿಂದ 6ರೂ ದಾರಣಿಯಿದೆ ಬೂಮಿಯಲ್ಲೆ ಬಿಟ್ಟರೆ ಗೋಬ್ಬರ ಆಗುವ ಬದಲು ಇನ್ನಷ್ಠ ಮಣ್ಣು ವಿಷಕಾರಿಯಾಗುತ್ತೆ.

  ಬೀರಪ್ಪ ವಗ್ಗಿ ತಾಂಬಾ ರೈತ. 

2 ಸತತ ಬರದಿಂದ ಸುದಾರಿಸಿಕೋಳ್ಳುವದು ಕಷ್ಠವಾಗುತ್ತಿದೆ ಈರುಳ್ಳಿಯಾದರು ಕೈಹಿಡಿಯಲಿದೆ ಎಂಬ ವಿಶ್ವಾಸ ಹುಸಿಯಾಗಿದೆ ಮಾಡಿದ ಖಚರ್ು ಬರುತ್ತಿಲ್ಲ ಇನ್ನೂ ಹೇಚ್ಚಿನ ಪ್ರಾಮಾದಲ್ಲಿ ಈರುಳ್ಳಿ ಬರಿಲಿದೆ ಆ ವೇಳೆ ಇದಕಿಂತ ಬೆಲೆ ಖುಷಿಯುವ ಆತಂಕ ಇದೆ.

ಹೋನ್ನಪ್ಪ ಮ್ಯಾಗೇರಿ ತಾಂಬಾ ರೈತ.