ಸಂತರು ತೋರಿದ ಮಾರ್ಗದಲ್ಲಿ ಜೀವನ ಸಾಗಿಸಬೇಕು: ಪಟೇಲ್

One should lead life on the path shown by saints: Patel

ಸಂತರು ತೋರಿದ ಮಾರ್ಗದಲ್ಲಿ ಜೀವನ ಸಾಗಿಸಬೇಕು: ಪಟೇಲ್ 

ಕೊಪ್ಪಳ 12: ಜಗದ್ಗುರು ಶಂಕರಾಚಾರ್ಯರು ಇಡೀ ಮನುಕುಲಕ್ಕೆ ಮಾನವೀಯತೆಯ ಸಂದೇಶ ನೀಡಿದ್ದಾರೆ, ಸಾಧು ಸಂತರು ತೋರಿದ ಮಾರ್ಗದಲ್ಲಿ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.  ಅವರು ಬುಧುವಾರ ನಗರದ ಮಾತಾ ಹೋಟೆಲನ ಎದುರುಗಡೆ ಇರುವ ರೇಣುಕಾಚಾರ್ಯ ಭವನದಲ್ಲಿ ಏರಿ​‍್ಡಸಿದ ರೇಣುಕಾಚಾರ್ಯರ  ಜಯಂತಿಯೋತ್ಸವ  ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು ಮುಂದುವರಿದು ಮಾತನಾಡಿ ಜಂಗಮರು ಎಲ್ಲಾ ಸಮಾಜದ ಜೊತೆಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ, ಗುರುಗಳ ಸ್ಥಾನದಲ್ಲಿರುವ ಈ ಸಮಾಜ ಎಲ್ಲರಿಗೂ ಸನ್ಮಾರ್ಗ ತೋರುವ ಕೆಲಸ ಮಾಡಬೇಕು ಎಂದ ಅವರು ಜಗದ್ಗುರು ರೇಣುಕಾಚಾರ್ಯರು ರವರ ಆದರ್ಶ ನಾವೆಲ್ಲರೂ ನಮ್ಮ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,  ಸಮಾರಂಭದಲ್ಲಿ ಕೊಪ್ಪಳ ನಗರಸಭೆಯ  ಉಪಾಧ್ಯಕ್ಷರಾದ ಅಶ್ವಿನಿ ಗದಗಿನ ಮಠ ,ಸಮಾಜದ ಹಿರಿಯ ಮುಖಂಡ ವೀರೇಶ್ ಮಹಾಂತಯ್ಯನಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಸ್ವಾಮೀಜಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.