ಒನ್ ಟೈಮ್ ಸೆಟಲ್ಮೆಂಟ್ ಅವಧಿ ವಿಸ್ತರಣೆಗೆ ಆಗ್ರಹ

ಲೋಕದರ್ಶನ ವರದಿ

ಕಂಪ್ಲಿ: ರೈತರ ಬ್ಯಾಂಕ್ ಸಾಲ ಒನ್ ಟೈಮ್ ಸೆಟಲ್ಮೆಂಟ್ ಅವಧಿಯನ್ನು ಮಾಚರ್್ 31ರತನಕ ವಿಸ್ತರಿಸುವಂತೆ ಕಿಸಾನ್ ಜಾಗೃತಿ ವಿಕಾಸ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಿ.ಯುಗಂಧರ ನಾಯ್ಡು ಆಗ್ರಹಿಸಿದರು. ಎಸ್ಬಿಐ ಕಂಪ್ಲಿ ಶಾಖೆಯ ಮುಖ್ಯ ವ್ಯವಸ್ಥಾಪಕ ಯೋಗೇಶ್ ಕಕರ್ೇರಾ ಅವರಿಗೆ ಮನವಿ ಪತ್ರ ಸಲ್ಲಿಸಿ, 1997-2009ರ ಒಳಗಿನ ಸಾಲ ಒನ್ ಟೈಮ್ ಸೆಟಲ್ಮೆಂಟ್ ಕಾಲಾವಾಕಾಶ ಜ.31ಕ್ಕೆ ಅಂತ್ಯವಾಗುತ್ತಿದೆ. ಈ ಭಾಗದ ರೈತರು ಸಾಕಷ್ಟು ಆಥರ್ಿಕ ಸಂಕಷ್ಟದಲ್ಲಿದ್ದಾರೆ. ಸಮರ್ಪಕ ಮಳೆ ಇಲ್ಲದೆ ಬೆಳೆ ಇಳುವರಿ ಕುಂಠಿತವಾಗಿದೆ. ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಧಾರಣಿ ಇಲ್ಲದಾಗಿದೆ. ನಿರಂತರ ಬರಗಾಲ ಮತ್ತು ಬೆಳೆನಷ್ಟ, ಮಾರುಕಟ್ಟೆ ಧಾರಣಿ ಕುಸಿತದಿಂದ ರೈತರು ಕಂಗಲಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳೆ ಮಾರಾಟವಾಗದೆ ರಾಸಿಯಲ್ಲಿಯೇ ಉಳಿದಿದೆ. ಈ ದಿಸೆಯಲ್ಲಿ ರೈತರ ಅನುಕೂಲಕ್ಕಾಗಿ ಒನ್ ಟೈಮ್ ಸೆಟಲ್ಮೆಂಟ್ನ್ನು 2019ರ ಮಾಚರ್್ 31ರತನಕ ವಿಸ್ತರಿಸುವಂತೆ ಒತ್ತಾಯಿಸಿದರು ಮನವಿ ಪತ್ರ ಸ್ವೀಕರಿಸಿದ ಎಸ್ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯೋಗೇಶ್ ಕಕರ್ೇರಾ ಮಾತನಾಡಿ, ರೈತರ ಅನುಕೂಲಕ್ಕಾಗಿ ರೈತರು ಸಲ್ಲಿಸಿದ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ರೈತರಾದ ತಿಪ್ಪಯ್ಯಸ್ವಾಮಿ, ಗಂಗಾಧರ, ಯಂಕಪ್ಪ, ಬುಜ್ಜಿಕುಮಾರ್, ಬಿ.ಭೀಮಲಿಂಗಪ್ಪ ಸೇರಿ ಅನೇಕರು ಉಪಸ್ಥಿತರಿದ್ದರು.