ಲೋಕದರ್ಶನ ವರದಿ
ಗಂಗಾವತಿ 31: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕ ಘಟಕದ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ ಸಹಯೋಗದಲ್ಲಿ ಫೆ 2 ರಂದು ರವಿಭಾರ ಬೆಳಗ್ಗೆ 10ಗಂಟೆಗೆ ನಗರದ ಕನ್ನಡಸಾಹಿತ್ಯ ಪರಿಷತ್ ಭವನದಲ್ಲಿ "ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ರಾಷ್ಟ್ರೀಯತೆ ಚಿಂತನೆ ಹಾಗೂ ಭವ್ಯ ಭಾರತದ ಭವಿಷ್ಯ ಕುರಿತು ವಿಷಯದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಬಿ.ವಿ ವಸಂತ ಕುಮಾರರಿಂದ ವಿಶೇಷ ಉಪನ್ಯಾಸ ಜರುಗಲಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲೂಕ ಅಧ್ಯಕ್ಷ ಯಂಕಪ್ಪ ಕಟ್ಟಿಮನಿ, ಸಹ ಸಂಚಾಲಕು ಶ್ರೀನಿವಾಸ ಕುಲಕರ್ಣಿ ತಿಳಿಸಿದ್ದಾರೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯೊಂದಿಗೆ ಅವರು ಮಾತನಾಡಿದರು. ಪರಿಷದ್ ಸ್ವರೂಪ ಮತ್ತು ವ್ಯಾಪ್ತಿ ಅನೇಕ ಸಾಹಿತ್ಯಕ ಚಟುವಟಿಕೆಗಳ ಆಗರವಾಗಿರುವ ಅಚಲ ಭಾರತ ಸಾಹಿತ್ಯ ಪರಿಷದ್ ಇಂದು ದೇಶದ ಎಲ್ಲಾ ಪ್ರಾಂತಗಳಲ್ಲಿ ಕ್ರಿಯಾಶೀಲ ಘಟಕಗಳನ್ನೂಳಗೊಂಡಿದೆ. ಅನನ್ಯತೆ, ಭಾರತ ಸಕಲ ಭಾಷೆಗಳನ್ನು, ಸಾಹಿತ್ಯ ಕೃತಿಗಳನ್ನು ತನ್ನದೆಂದು ತಿಳಿದು ಅದಕ್ಕನುಗುಣವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಅಭಾಸಾಪ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಘಟವು ಗಂಗಾವತಿಯಲ್ಲಿ ಕಳೆದ ಐದಾರು ವರ್ಷಗಳಿಂದ ಹತ್ತಾರು ರೀತಿಯ ಸಾಹಿತ್ಯ ಚಟುವಟಿಕೆಗಳನ್ನು, ಕವಿಗೋಷ್ಟಿಗಳನ್ನು ರಾಷ್ಟ್ರೀಯ ವಿಚಾರಗಳಲ್ಲಿ ಬಿಂಬಿಸುತ್ತಾ ಬಂದಿದೆ. ಇತ್ತೀಚಿಗೆ ಕನರ್ಾಟಕ ಸರ್ಕಾರದಿಂದ ಕನ್ನಡ ಸಾಹಿತ್ಯ ಅಧ್ಯಕ್ಷರಾಗಿರುವ ವಸಂತಕುಮಾರವರು ಗಂಗಾವತಿ ನಗರಕ್ಕೆ ಆಗಮಿಸುತ್ತಿದ್ದು ಫೆ. 2ರಂದು ಅವರು ಉಪನ್ಯಾಸ ನೀಡಲಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡಿವೈಎಸ್ಪಿ ಚಂದ್ರಶೇಖರ, ಕಸಾಪ ತಾಲೂಕಾ ಅಧ್ಯಕ್ಷ ಎಸ್ಬಿ ಗೊಂಡಬಾಳ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಅಶೋಕ ರಾಯ್ಕರ ಉಪಸ್ಥಿತರಿರುತ್ತಾರೆ. ನಗರ ಮತ್ತು ತಾಲೂಕಿನ ಸಾಹಿತಿಗಳು, ಸಾಹಿತ್ಯಾಸಕ್ತರು, ಕಸಾಪ ಸದಸ್ಯರು, ಪತ್ರಕರ್ತರು, ಚಿಂತಕರು, ಉಪನ್ಯಾಸಕರು ಸೇರಿದಂತೆ ಮತ್ತಿತತರು ಆಗಮಿಸಿ ಈ ಉಪನ್ಯಾಸಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ಅಭಾಸಾಪ ತಾಲ್ಲೂಕು ಸಂಚಾಲಕ ನಾಗಪ್ಪ ಬಡಿಗೇರ, ಕಾರ್ಯದಶರ್ಿಯಾದ ಶರಣಪ್ಪ ತಳ್ಳಿ ಇದ್ದರು