ಡಿ.10ಕ್ಕೆ ರೈತಸಂಘದಿಂದ ವಿಧಾನಸೌಧ ಮುತ್ತಿಗೆ
ಯರಗಟ್ಟಿ 08 : ಕಬ್ಬಿಗೆ ಬೆಂಬಲ ಬೆಲೆ, ರೈತರಿಗೆ ಬ್ಯಾಂಕ್ ನೋಟಿಸ್ ನೀಡುವುದನ್ನು ನಿಲ್ಲಿಸಲು ಸರ್ಕಾರ ಬ್ಯಾಂಕ್ ಅಧಿಕಾರಿಳಿಗೆ ಸುತ್ತೋಲೆ ಹೊರಡಿಸವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ.10 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಸಭೆಯಲ್ಲಿ ತಿಳಿಸಿದರು.ಜು. 09 ರಿಂದ 20ರ ವರೆಗೆ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ನಿಗದಿಯಾಗಿದ್ದು, ಸರ್ಕಾರದ ಗಮನ ಸೆಳೆಯಲು ಇದು ಸೂಕ್ತ ಸಮಯವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಿಂಧೂರ ತೆಗ್ಗಿ, ತಾಲೂಕಾಧ್ಯಕ್ಷ ಶಿವಲಿಂಗಪ್ಪ ಬಿ.ಪಾಟೀಲ, ವಿವೇಕಾನಂದ ಉಳ್ಳಾಗಡ್ಡಿ, ಗಂಗಮ್ಮ ವಿಭೂತಿ, ಶೋಭಾ ಪಾಟೀಲ, ಶಾಂತವ್ವ ಕೋಟಗಿ, ಮಲ್ಲವ್ವ ಹಿರೇಮಠ, ಸಿದ್ದಪ್ಪ ಪಟ್ಟದಕಲ್ಲ, ಭೀಮವ್ವ ಹೂಗಾರ, ರಮೀಜಾ ಪತ್ತುನಾಯ್ಕರ ಇದ್ದರು.