ಪ್ರವಾಹ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಪ್ರವಾಹ ಎದುರಿಸಲು ಸಜ್ಜಾಗಬೇಕು: ಸಚಿವ ಜಾರಕಿಹೊಳಿ

ಚಿಕ್ಕೋಡಿ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರವಾಹ ಕುರಿತು ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆ


ಚಿಕ್ಕೋಡಿ: ಕೊಂಕಣ ಭಾಗದಲ್ಲಿ ಸುರಿದ ಮಳೆಯಿಂದ ಮಹಾರಾಷ್ಟ್ರದ ಎಲ್ಲ ಜಲಾಶಯಗಳು ಭತರ್ಿ ಹಂತದಲ್ಲಿವೆ. ಹೀಗಾಗಿ ಆಗಷ್ಟ ಮತ್ತು ಸಪ್ಟಂಬರ ತಿಂಗಳವರೆಗೆ ಮಳೆಯಾಗುವದರಿಂದ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹರಿದು ಬಂದು ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಾಗಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಅನಾಹುತ ಸಂಭವಿಸದ ಹಾಗೇ ಎಲ್ಲ ಅಧಿಕಾರಿಗಳು ಪ್ರವಾಹ ಎದುರಿಸಲು ಸಜ್ಜಾಗಬೇಕು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರವಾಹದ ಕುರಿತು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ-ಜುಲೈ ತಿಂಗಳಲ್ಲಿ ಸುರಿದ ಮಳೆ ನೀರಿನಿಂದ ಬಹುತೇಕ ಡ್ಯಾಂಗಳು ಭತರ್ಿಯಾಗಿವೆ. ಇನ್ನೂ ಎರಡು ತಿಂಗಳು ಮಳೆ ಆಗುವ ಸಂಭವ ಇರುತ್ತದೆ. ಆದ್ದರಿಂದ ಮಹಾರಾಷ್ಟ್ರದ ಡ್ಯಾಂಗಳಿಂದ ಬರುವ ನೀರಿನಿಂದ ಒಂದು ವೇಳೆ ಪ್ರವಾಹ ಎದುರಾದರೆ ನೆರೆ ಭೀತಿಯನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಂದರು.

ಮಹಾಷ್ಟ್ರದಿಂದ ಬರುವ ನೀರಿನ ಪ್ರಮಾಣದಷ್ಟೇ ಹಿಪ್ಪರಗಿ ಮತ್ತು ಆಲಮಟ್ಟಿಯಿಂದ ಹೊರಬಿಡುತ್ತಿದ್ದಾರೆ. ಆದರೆ ಆಲಮಟ್ಟಿಯ ಜಲಾಶಯದ ಮುಂದುಗಡೆ ಇರುವ ಜನರ ಪರಿಸ್ಥಿತಿ ಕೂಡಾ ನೋಡಿಕೊಂಡು ನೀರು ಬಿಡಬೇಕಾಗುತ್ತದೆ. ನೆರೆ ಭೀತಿ ಎದುರಾಗುವ ಗ್ರಾಮಗಳಲ್ಲಿ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು. ನದಿ ದಡದಲ್ಲಿ ಸೂಕ್ತ ದೋಣಿ ವ್ಯವಸ್ಥೆ, ಗಂಜಿ ಕೇಂದ್ರಗಳ ಸ್ಥಾಪನೆ ಮಾಡುವ ಕುರಿತು ಮೊದಲೇ ಸ್ಥಳ ಪರಿಶೀಲನೆ ಮಾಡಿಕೊಂಡಿರಬೇಕು. ಜನರ ಆರೋಗ್ಯ ಹಾಳಾಗದಂತೆ ಆರೋಗ್ಯ ಇಲಾಖೆ ಔಷಧೋಪಚಾರ, ಮತ್ತು ದನಕರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಕಳೆದ ವರ್ಷಕ್ಕಿಂತ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ ಆಗಿದೆ. ಇದರಿಂದ ರೈತರಿಗೆ ಬಿತ್ತನೆ ಮಾಡಲು ಬೀಜ ಗೊಬ್ಬರ ವಿತರಣೆ ಬಗ್ಗೆ ಮೊದಲು ಆಧ್ಯತೆ ನೀಡಬೇಕು. ನದಿ ದಡದಲ್ಲಿ ಇರುವ ರೈತರ ಜಮೀನುಗಳು ನೀರಿನಲ್ಲಿ ಮುಳುಗಿ ಬೆಳೆ ಹಾನಿಯಾಗಿರುತ್ತದೆ. ಅಂತಹ ರೈತರನ್ನು ಗುತರ್ಿಸಿ ಅವರಿಗೆ ಸರಕಾರದಿಂದ ಸಿಗುವ ಪರಿಹಾರ ನೀಡಬೇಕು ಎಂದು  ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ನದಿ ತೀರದ ಮತ್ತು ಹೆಚ್ಚಾಗಿ ಮಳೆ ಬೀಳುವ ಗ್ರಾಮಗಳ ಶಾಲೆಯ ಗೋಡೆಗಳು ಕುಸಿಯುವ ಸಾಧ್ಯತೆ ಇರುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ ಕೊಠಡಿಗಳ ಬಗ್ಗೆ ಗಮನ ಕೊಡಲು ಆಯಾ ಶಿಕ್ಷಕರಿಗೆ ಸೂಚನೆ ನೀಡಬೇಕು. ಶಾಲಾ ಮೈದಾನದಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿ ಮಕ್ಕಳ ಆರೋಗ್ಯ ಹದಗೆಡುವ ಲಕ್ಷಣಗಳು ಇರುತ್ತವೆ. ಆದ್ದರಿಂದ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಜಿಯಾವುಲ್ಲಾ ಮಾತನಾಡಿ ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದೆ. ರೈತರಿಗೆ ಬಿತ್ತನೆ ಮಾಡಲು ಬೀಜ ಗೊಬ್ಬರ ವಿತರಣೆ ಮಾಡಿದೆ. ಮಳೆಯಿಂದ ಜೀವ ಹಾನಿಯಾದವರಿಗೆ ಸರಕಾರ ಪರಿಹಾರದ ಹಣ ನೀಡಿದೆ. ನದಿ ಭಾಗದ ಹಳ್ಳಿಗಳಲ್ಲಿ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ನದಿಯಲ್ಲಿ ಯಾರು ಇಳಿಯದಂತೆ ಪ್ರತಿ ಸೇತುವೆ ಬಳಿ ಪೊಲೀಸ್ರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಶಾಸಕ ಮಹೇಶ ಕುಮಟೋಳ್ಳಿ, ಜಿ.ಪಂ.ಸಿಇಒ ರಾಮಚಂದ್ರನ್, ಬೆಳಗಾವಿ ಪೊಲೀಸ್ ಕಮೀಷನರ್ ರಾಜಪ್ಪ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಎಸ್ಪಿ ಸುಧೀರಕುಮಾರ ರೆಡ್ಡಿ, ಉಪವಿಭಾಗಾಧಿಕಾರಿ ಗೀತಾ ಕೌಲಗಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.