ಲೋಕದರ್ಶನ ವರದಿ
ಯಲ್ಲಾಪುರ,29 : ಕನ್ನಡ ನಾಡು ನುಡಿಯ ಬಗ್ಗೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳಲ್ಲಿ ಹೆಚ್ಚಿನ ಕಾಳಜಿ ಇರುವುದು ಸಂತಸ. ಹೀಗೆಯೇ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ನಮ್ಮ ನಾಡು ಮತ್ತು ಭಾಷೆಯ ಬಗ್ಗೆ ಪ್ರೀತಿ, ಗೌರವ ಇರಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ಟ ಹೇಳಿದರು.
ಅವರು ಯಲ್ಲಾಪುರ ಸಾರಿಗೆ ಸಂಸ್ಥೆ ಘಟಕದಲ್ಲಿ ಕನ್ನಡ ಕ್ರಿಯಾ ಸಮಿತಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ವರ್ಗದವರಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಿ.ಪಿ.ಐ ಡಾ.ಮಂಜುನಾಥ ನಾಯಕ ಮಾತನಾಡಿ, ಪೊಲೀಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಇಲಾಖೆ ಸಮಯದ ಅಭಾವವಿರುತ್ತದೆ. ಆದರೂ ಈ ನಡುವೆಯೂ ಬಿಡುವು ಮಾಡಿಕೊಂಡು ಇಂಥ ಒಂದು ಸುಂದರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷವಾಗಿದೆ ಎಂದರು.
ಯಲ್ಲಾಪುರ ಸಹಾಯಕ ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ ಉಪಸ್ಥಿತರಿದ್ದರು.
ವಿವಿದ ಕ್ಷೇತ್ರದ ಗಣೇಶ ಬಂಟ, ಭಾಸ್ಕರ ಗಾಂವ್ಕರ, ಡಾ.ನಿರ್ಮಲ ಸಿಂಗಿ, ಗಣಪತಿ ಹೆಗಡೆ, ಯಮುನಾ ನಾಯ್ಕ ಹಾಗೂ ಸೇವೆಯಿಂದ ನಿವೃತ್ತರಾದ ಚಾಲಕ ನೆಮಯ್ಯ.ಪಿ.ಗೌಡ ಇವರನ್ನು ಸನ್ಮಾನಿಸಲಾಯಿತು. ವಿ.ಎನ್.ಹೊನ್ನಾವರ, ಆರ್.ಜಿ.ಶೇಟ್ ಫೋಕಳೆ, ಸಂತೋಷ್.ಬಿ.ಎನ್, ಜೆ.ಡಿ.ದೊಡ್ಮನೆ ಮತ್ತು ಸಾಗರ ನಾಯ್ಕ ಇವರು ಅಭಿನಂದಿತರನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಸಹಾಯಕ ಇಂಜನೀಯರ್ ಎನ್.ಆರ್.ಹೆಗಡೆ ಕನ್ನಡ ನಾಡಿನ ಹಿರಿಮೆಯ ಬಗ್ಗೆ ತಿಳಿಸಿ ತಾವೇ ರಚಿಸಿದ ಒಂದು ಸುಂದರ ಕವನ ವಾಚಿಸಿದರು. ಅಭಿನಂದಿತರಾದ ಗಣೇಶ್ ಬಂಟ, ಭಾಸ್ಕರ್ ಗಾಂವ್ಕರ, ಡಾಕ್ಟರ್ ನಿರ್ಮಲ ಸಿಂಗಿ, ಗಣಪತಿ ಹೆಗಡೆ, ಮತ್ತು ಯಮುನಾ ನಾಯ್ಕ ಮಾತನಾಡಿದರು. ವಿಭಾಗೀಯ ಸಂಚಾರ ಅಧಿಕಾರಿ ಸುರೇಶ ನಾಯಕ ಹಾಗೂ ಘಟಕ ವ್ಯವಸ್ಥಾಪಕ ಸಿ.ವಿ.ಇಟಗಿ ಉಪಸ್ಥಿತರಿದ್ದರು. ಎಂ.ಎನ್.ಭಾಗವತ್ ನಿರೂಪಿಸಿದರು. ಎಂ.ಕೆ.ಪ್ರಧಾನಿ ವಂದಿಸಿದರು.