ಲೋಕದರ್ಶನ ವರದಿ
ಮುನವಳ್ಳಿ: ಸಮೀಪದ ಮಬನೂರ ಗ್ರಾಮದಲ್ಲಿ ದಿನಾಂಕ : 2-11-2019 ರಂದು ಮುಂಜಾನೆ : 10-00 ಗಂಟೆಗೆ ಇಂಚಗೇರಿ ಸಾಂಪ್ರದಾಯದ ಶ್ರೀ ಸ.ಸ.ಮಾಧವಾನಂದ ಪ್ರಭೂಜಿಯವರ 104 ನೇ ಜಯಂತ್ಯೋತ್ಸವ, ತೊಟ್ಟಿಲು ಪೂಜೆ,ಸಾಮೂಹಿಕ ವಿವಾಹ ಹಾಗೂ ಶ್ರೀ ಸ.ಸ. ಕರೆಪ್ಪ ಮಹಾರಾಜರ ಅಮೃತಶಿಲಾ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಸಾನಿಧ್ಯವನ್ನು ಮುನವಳ್ಳಿಯ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ಇಂಚಗೇರಿಮಠದ ಶ್ರೀ ಪ್ರಭೂಜಿ ಮಹಾರಾಜರು, ಡಾ. ಎ.ಸಿ.ವಾಲಿ ಮಹಾರಾಜರು, ತುಕಾರಾಮ ಮಹಾರಾಜರು ವಹಿಸುವರು ಉದ್ಘಾಟಕರಾಗಿ ಶಾಸಕ ಆನಂದ ಮಾಮನಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ ಜ್ಯೋತಿ ಬೆಳಗಿಸುವರು. ತೊಟ್ಟಿಲು ಪೂಜೆಯನ್ನು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಸುವಣರ್ಾತಾಯಿ ಹೊಸಮಠ ನೆರವೇರಿಸುವರು.
ಅಧ್ಯಕ್ಷತೆಯನ್ನು ಕರೆಪ್ಪ ಬಾಳಪ್ಪ ಮುರಗೋಡ ವಹಿಸುವರು. ಅತಿಥಿಗಳಾಗಿ ರವೀಂದ್ರ ಯಲಿಗಾರ ಪಂಚನಗೌಡ ದ್ಯಾಮನಗೌಡರ ಫಕೀರಪ್ಪ ಹದ್ದನ್ನವರ ಪುಂಡಲೀಕ ಮೇಟಿ ಸೇರಿದಂತೆ ಇತರರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಾಧವಾನಂದರ ಹಾಗೂ ಶ್ರೀ ಕರೆಪ್ಪ ಮಹಾರಾಜರ ಮೂತರ್ಿಯ ಭವ್ಯ ಮೆರವಣಿಗೆ ಜರುಗಲಿದೆ. ಎಂದು ಪ್ರಕಟಣೆ ತಿಳಿಸಿದೆ.