ಬಿಸಿಲಸಿದ್ಧೇಶ್ವರ, ಹನುಮಂತ ದೇವರ ಜಾತ್ರೆ ಪ್ರಯುಕ್ತ ಓಕುಳಿ

ಕೆಸರಗೊಪ್ಪ: ದಾಸ, ಶರಣ, ಪುಣ್ಯದ ಬೀಡಾದ ಹನುಮ ಬಸವರುದಿಸಿದ ಹೆಮ್ಮೆಯ ಕರುನಾಡಿನ ಭಕ್ತಿಯ ಜೀವಸೆಲೆಯ ತವರೂರಾದ ಪುಣ್ಯ ಕ್ಷೇತ್ರ ಕೆಸರಗೊಪ್ಪ ಇಲ್ಲಿ ಹೇರಳವಾಗಿ ಬೆಲ್ಲ, ಸಕ್ಕರೆ, ಗೋಧಿ, ಮೆಕ್ಕೆಜೋಳ, ಜೋಳ, ಇನ್ನೂ ಹಲವಾರು ತರಹದ ಉತ್ಪಾದನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಮೊಸರು, ಬೆಣ್ಣೆ, ಕಾಯಿಪಲ್ಲೆ ಹಲವಾರು ಪಟ್ಟಣಗಳ ಜನತೆಗೆ ಅಚ್ಚುಮೆಚ್ಚು. ಈ ಪುಣ್ಯ ಕ್ಷೇತ್ರಕ್ಕೆ ಮಹಾತ್ಮರ ಆಶೀರ್ವಾದವಾಗಿದೆ.

  ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸುಕ್ಷೇತ್ರ ಕೆಸರಗೊಪ್ಪ ಗ್ರಾಮದಲ್ಲಿ ಶ್ರೀ ಬಿಸಿಲಸಿದ್ಧೇಶ್ವರ ಹಾಗೂ ಹನುಮಂತ ದೇವರ ಓಕುಳಿ ಪ್ರಯುಕ್ತವಾಗಿ ಜಾತ್ರೆಯು ಮೇ 7 ರಿಂದ 9 ರವರೆಗೆ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾನಮಠ ಮಹಾಲಿಂಗಪುರ ಇವರ ಸಾನಿಧ್ಯದಲ್ಲಿ ಜರುಗುವುದು.

   ಜಾತ್ರಾ ಮಹೋತ್ಸವದ ಅನೇಕ ಕಾರ್ಯಕ್ರಮಗಳು ಜರುಗುವವು. ಅದರಲ್ಲಿ ಮೇ 7 ರಂದು ಮುಂಜಾನೆ 8 ಗಂಟೆಗೆ ಗ್ರಾಮದೇವರ ರುದ್ರಾಭಿಷೇಕ ಹಾಗೂ ಹನಮಂತ ದೇವರ ಕೊಂಡ ಪೂಜೆ, ಮೇ 8 ರಂದು ಮುಂಜಾನೆ 8 ರಿಂದ 10 ಗಂಟೆಯವರೆಗೆ 101 ಗ್ರಾಮದ ಹಿಳೆಯರಿಂದ ಕುಂಭ ಮೇಳ ನಡೆಯುವುದು. ಹಾಗು ಇದರ ನಂತರ ಆಧ್ಯಾತ್ಮಿಕ ವೇದಾಂತ ಪ್ರವಚನ ಮಹಾಮಂಗಲ ಕಾರ್ಯಕ್ರಮ ನಂತರ ಸದ್ಭಕ್ತರಿಗೆ ಅನ್ನಸಂತರ್ಪಣೆ ಜರುಗುವುದು. 

ಮಧ್ಯಾಹ್ನ 3 ಗಂಟೆಗೆ ನಡು ಓಕುಳಿ ಸಂಜೆ 7 ಕ್ಕೆ ತುಂಬಿದ ತೇರನ್ನು ಸಾವಿರಾರು ಭಕ್ತರು ಎಳೆದು ತಮ್ಮ ಭಕ್ತಿಯನ್ನು ಪ್ರಕಟಿಸುವರು. 

  ಈ ಮಧ್ಯೆ ವಾದ್ಯವೃಂದಗಳು, ಡೊಳ್ಳಿನ ಪದ, ಭಜನಾ ಪದ, ನರ್ತಕರು, ಗಾಯಕರು ಇನ್ನೂ ಹಲವಾರು ತರಹದ ಮನರಂಜನೆ ಕಾರ್ಯಕ್ರಮಗಳು ಜರುಗಿ ಈ ತೇರಿನ ಸೊಬಗನ್ನು ಹೆಚ್ಚಿಸುವವು. 

ಮೇ 9 ರಂದು ಮುಂಜಾನೆ 7 ಗಂಟೆಗೆ ಅಗ್ನಿ ಪೂಜೆ ಮಧ್ಯಾಹ್ನ 2 ಗಂಟೆಗೆ ಕಡೆ ಓಕುಳಿ, ಜಂಗಿ ನಿಕಾಲಿ ಕುಸ್ತಿಗಳು, ಸಂಜೆ 6 ಗಂಟೆಗೆ ಮಹಾಲಿಂಗಪುರ ಹಾಗೂ ಕೆಸರಗೊಪ್ಪದ ಪ್ರಸಿದ್ಧ ಕರಡಿ ಮದಾರಸಿ ನಡೆಯುವುದು. 

  ಇದರ ಮಧ್ಯೆ ಪಲ್ಲಕ್ಕಿ ಉತ್ಸವ ಹಾಗೂ ಬಿಸಿಲಸಿದ್ಧೇಶ್ವರರ ರಥವನ್ನು ಪರತ ದೇವಸ್ಥಾನಕ್ಕೆ ವಿಜೃಂಭಣೆಯಿಂದ ಸದ್ಭಕ್ತರು ಬರಮಾಡಿಕೊಳ್ಳುವವರು. 

  ರಾತ್ರಿ 10-30 ಕ್ಕೆ ಸಿಡಿದೆದ್ದ ಶಿವಶಕ್ತಿ ಅಥರ್ಾತ್ ರೈತನ ಬಾಳು ಕಣ್ಣೀರಿನ ಗೋಳು ಎಂಬ ರೈತನ ಜೀವನ ಆಧಾರಿತ ನಾಟಕ ಜನರನ್ನು ಮನರಂಜಿಸಲು ಜರುಗಿ ಬರುವುದು.