2021ರ ಜನಗಣತಿಯಲ್ಲಿ ಒಬಿಸಿ ಮಾಹಿತಿ ಸಂಗ್ರಹ

ಲೋಕದರ್ಶನ ವರದಿ

ಸಿರುಗುಪ್ಪ01 :- ಇತರೆ ಹಿಂದುಳಿದ ಜಾತಿ ಒಬಿಸಿಗಳ ಗಣತಿಯನ್ನು ಇದೆ ಮೊದಲ ಬಾರಿಗೆ 2021ರ ಜನಗಣತಿಯಲ್ಲಿ ನಡೆಸಲಾಗುತ್ತದೆ ಎಂದು ಭಾರತ ಸಕರ್ಾರ ಕೆಂದ್ರ ಗ್ರುಹ ಇಲಾಖೆ ನವದೆಹಲಿ ಶುಕ್ರವಾರ ಸ್ಪಷ್ಟ ಪಡಿಸಿದೆ.2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿಧರ್ಾರವು ಮಹತ್ವ ಪಡೆದಿದೆ ಎಂದು ಭಾರತ ಸಕರ್ಾರ ಕ್ಷೆತ್ರ ಪ್ರಚಾರ ನಿದರ್ೆಶನಾಲಯ ವಾತರ್ಾ ಮತ್ತು ಪ್ರಸಾರ ಸಚಿವಾಲಯ ಜನಾಭಿಪ್ರಾಯ ಮುಖಂಡರಾದ ಎ.ಅಬ್ದುಲ್ ನಬಿ ತಿಳಿಸಿದ್ದಾರೆ. 

         ಹಲವು ಒಬಿಸಿ ಸಮುದಾಯಗಳು ಧಿರ್ಘಕಾಲದಿಂದ ಇಂಥದೊಂದು ಬೆಡಿಕೆ ಇಡುತ್ತಲೆ ಬಂದಿದ್ದಾರೆ.1931ರ ಗಣತಿ ಆಧಾರಿಸಿ ಮಂಡಲ್ ಆಯೊಗ ನಿಡಿದ್ದ ಶಿಫಾರಸಿನಲ್ಲಿ ಒಬಿಸಿಗಳಿಗೆ ಶೆ,27 ರಷ್ಟು ಮಿಸಲಾತಿಯನ್ನು ಭಾರತ ಸಕರ್ಾರ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಸಕರ್ಾರ ಘೋಷಿಸಿತ್ತು ಎಂದು ಎ.ಅಬ್ದುಲ್ ನಬಿ ಹೇಳಿದ್ದಾರೆ.