ಪೋಷಣ ಅಭಿಮಾನ ಮಾಸಾಚರಣೆ ಕಾರ್ಯಕ್ರಮ


ಲೋಕದರ್ಶನ ವರದಿ

ಸಿಂದಗಿ 12: ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು ಎಂದು ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿದರು.

ಮಂಗಳವಾರ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ಸಿಂದಗಿ, ತಾಲೂಕಾ ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಸಿಂದಗಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಪೋಷಣ ಅಭಿಮಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಭರ್ಿಣಿಯರು ಪೌಷ್ಠಿಕ ಆಹಾರ ಸೇವನೆ ಮಾಡದೇ ಇರುವುದರಿಂದ ಶೇ10 ಮಕ್ಕಳು ಕಡಿಮೆ ತೂಕವುಳ್ಳ ಮಕ್ಕಳ ಜನನವಾಗುತ್ತಿದೆ. ಆದ್ದರಿಂದ ಗಭರ್ಿಣಿಯರು ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಿ ದೇಶಕ್ಕೆ ಕೊಡುಗೆಯಾಗಿ ನೀಡಿ ಎಂದರು.

ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರು ಮಾತನಾಡಿ, ಕೈಗೆಟಕುವ ದವಸ ಧಾನ್ಯಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಗಭರ್ಿಣಿಯರು, ಬಾಣಂತಿಯರು ದವಸ ಧಾನ್ಯಗಳನ್ನು ಊಟದಲ್ಲಿ ಬಳಸಬೇಕು ಜೊತೆಗೆ ಮಕ್ಕಳಿಗೂ ತಿನ್ನಲಿಕ್ಕೆ ಕೊಡಬೇಕು. ಮಕ್ಕಳಿಗೆ ಪ್ರತಿಷ್ಠೆಗೋಷ್ಕರ ಫಿಝಾ, ಬರ್ಗರ, ಮ್ಯಾಗಿ ಮತ್ತು ಬೇಕರಿ ತಿನಿಸುಗಳನ್ನು ಕೊಡಬೇಕು. ಮೊಳಕೆ ಕಾಳು, ತೊಪ್ಪಲು ಪಲ್ಲೆ ಆಹಾರದಲ್ಲಿ ಹೆಚ್ಚು ಬಳಕೆ ಮಾಡಿ ಎಂದರು.

ಮಕ್ಕಳ ತಜ್ಞೆ ಡಾ.ಸರೋಜಿನಿ ಗಿರೀಶ ಕುಲಕಣರ್ಿ ಅವರು ಪೌಷ್ಠಿಕ ಆಹಾರದ ಮಹತ್ವ ಹಾಗೂ ಪೋಷಕಾಂಶಗಳು ವಿಷಯ ಕುರಿತು ಉಪನ್ಯಾಸ ನೀಡಿ, ನಮ್ಮ ಸೂತ್ತಮುತ್ತಲಿನಲ್ಲಿ ಬೆಳೆಯುವ ಆಹಾರ ಧಾನ್ಯಗಳನ್ನು ಊಟದಲ್ಲಿ ಬಳಕೆ ಮಾಡುವುದರಿಂದ ಸಾಕಷ್ಟು ಪೋಷಕಾಂಶಗಳು ದೊರಕುತ್ತವೆ. ಊಟದಲ್ಲಿ ಹೆಚ್ಚನ ಪ್ರಮಾಣ ನಾರಿನಂಶವಿರುವ ಆಹಾರ ಪದಾರ್ಥ ಬಳಸಿ. ಏಕದಳ ಮತ್ತು ದ್ವಿದಳ ಕಾಳುಗಳನ್ನು ಬಳಕೆ ಮಾಡಬೇಕು. ಸಮತೋಲನ ಆಹಾರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಸ್ತ್ರೀ ರೋಗತಜ್ಞೆ ಡಾ. ಸುನಿತಾ ಚಂದ್ರಶೇಖರ ಹಿರೇಗೌಡರ ಅವರು ಗರ್ಭಸ್ತ್ರೀಯರ ಪೌಷ್ಠಿಕ ಆಹಾರ ಮತ್ತು ತಾಯಿ ಎದೆ ಹಾಲು ಉಣಿಸುವಿಕೆ ವಿಷಯಕುರಿತು ಉಪನ್ಯಾಸ ನೀಡಿ, ಗರ್ಭಸ್ತ್ರೀಯರು ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯಕರ ಮಗು ಜನಿಸುತ್ತದೆ. ಮಗು ಜನಿಸಿದ ನಂತರ ತಾಯಿ ಮಗುವಿಗೆ ತನ್ನ ಎದೆ ಹಾಲು ಉಣಿಸಬೇಕು. ತಾಯಿ ಎದೆ ಹಾಲು ಉತ್ತಮ ಪೌಷ್ಠಿಕ ಆಹಾರವಾಗಿದೆ. ಅಲ್ಲದೆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್.ಗುಣಾರಿ ಅವರು ಮಾತನಾಡಿದರು. ಅಪರ ಸರಕಾರಿ ವಕೀಲ ಎಂ.ಎಸ್.ಪಾಟೀಲ ಕೋರಹಳ್ಳಿ, ವಕೀಲರಾದ ಎಸ್.ಬಿ.ಪಾಟೀಲ ಗುಂದಗಿ, ಮಲ್ಲು ಗತ್ತರಗಿ, ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಮಂಗಳಾ ಗುಡಿ, ಶೈಲಾ ಸ್ಥಾವರಮಠ, ಅನಸೂಬಾಯಿ ಪರಗೊಂಡ, ಜಯಶ್ರೀ ಬಿರಾದಾರ, ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

ಮೇಲ್ವುಚಾರಕಿಯರು, ಗಭರ್ಿಣಿಯರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕತರ್ೆಯರು ಹಾಗೂ ವಿವಿಧ ಅಂಗನವಾಡಿ ಕೇಂದ್ರಗಳಿಂದ ಆಗಮಿಸಿದ ತಾಯಂದಿರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಕೀಲ ಸಂಘದ ಉಪಾಧ್ಯಕ್ಷ ಎಸ್.ಎಸ್.ಸಿಂಗಾಡಿ ಸ್ವಾಗತಿಸಿದರು. ಮಹಾಂತೇಶ ನೂಲಾ ನಿರೂಪಿಸಿದರು. ಮೇಲ್ವಾಚರಕಿ ಭಾಗ್ಯಾ ಜಾಧವ ವಂದಿಸಿದರು.