ವಿಜಯಪುರ 04: ಸಾರ್ವಜನಿಕರಿಂದ ಕುಂದು ಕೊರತೆ ನಿವಾರಣೆ ಕೋರಿ ಬರುವ ದೂರುಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳು ತಕ್ಷಣವೇ ದೂರುಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಭೆ ನಡೆಸಿದ ಅವರು, ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ನಿದರ್ೇಶನದನ್ವಯ ಜಿಲ್ಲೆಯಲ್ಲಿರುವ ವಿವಿಧ ಸಕರ್ಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಸ್ವೀಕರಿಸಲಾಗುವ ಸಾರ್ವಜನಿಕ ದೂರುಗಳಿಗೆ ಸಂಬಂಧಪಟ್ಟಂತೆ ಪ್ರತಿವಾರ ಸಮಸ್ಯೆಗಳಿಗೆ ಸ್ಪಂದಿಸಿ ಇತ್ಯರ್ಥಗೊಳಿಸಬೇಕು. ಪ್ರತಿ ಮಾಹೆ ಜನಸ್ಪಂದನ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದ ಅವರು, ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಳ ನೇತೃತ್ವದಲ್ಲಿಯೂ ಜನಸ್ಪಂದನ ಸಭೆ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಅವರು ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಿವೇಶನಗಳ ಸಮಸ್ಯೆಯನ್ನು ಶೀಘ್ರ ಪರಿಹರಿಸಿಕೊಳ್ಳಬೇಕು. ವಿಶೇಷವಾಗಿ ಶಾಲೆ, ಅಂಗನವಾಡಿ ಕಟ್ಟಡಗಳು ಹಾಗೂ ವಸತಿ ನಿಲಯಗಳಿಗೆ ಅವಶ್ಯಕವಿರುವ ನಿವೇಶನಗಳ ಬಗ್ಗೆ ಸೂಕ್ತ ಪರಿಶೀಲನೆಯೊಂದಿಗೆ ಸಮಸ್ಯೆ ಇತ್ಯರ್ಥಪಡಿಸಬೇಕು. ಯಾವುದಾದರೂ ಕಟ್ಟಡಗಳು ನಿಮರ್ಾಣ ಹಂತದಲ್ಲಿದ್ದಲ್ಲಿ ಅವುಗಳ ಗುಣಮಟ್ಟ ಪರಿಶೀಲಿಸುವ ಜೊತೆಗೆ ಶೀಘ್ರವಾಗಿ ಪೂರ್ಣಗೊಳಿಸಲು ಆಯಾ ನಿಮರ್ಾಣ ಜವಾಬ್ದಾರಿ ಹೊಂದಿರುವ ಏಜೆನ್ಸಿಗಳಿಗೆ ಸೂಚಿಸಲು ತಿಳಿಸಿದರು.
ಜಿಲ್ಲಾವಾರು ವಸತಿನಿಲಯಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳ ಪರಿಶೀಲನೆಗಾಗಿ ಫ್ಯಾಕ್ಟ ಫೈಂಡಿಂಗ್ ಸಮಿತಿ ರಾಜ್ಯ ಮಟ್ಟದಲ್ಲಿ ರಚಿಸಲು ರಾಜ್ಯ ಸಕರ್ಾರ ಉದ್ದೇಶ ಹೊಂದಿದ್ದು, ಅದರ ವರದಿಯನ್ವಯ ವಿವಿಧ ನಿದರ್ೇಶನಗಳನುಸಾರ ಸೂಕ್ತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಅದರಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಇತರೆ ಅವಶ್ಯಕ ಸೌಲಭ್ಯ ಕಲ್ಪಿಸುವಂತೆಯೂ ಸಹ ಸೂಚಿಸಿದ ಅವರು, ಈಗಾಗಲೇ ಕಂಪೌಂಡ್ ಗೋಡೆ, ಆಟದ ಮೈದಾನ ಅಭಿವೃದ್ದಿಗೆ ಗಮನ ನೀಡಲಾಗಿದೆ. 14ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಶಾಲೆಗೆ 50 ಸಾವಿರ ರೂ.ಗಳಂತೆ ಶಾಲಾ ಸುಧಾರಣೆಗೆ ಅನುದಾನ ಲಭ್ಯವಿದ್ದು, ಇದಕ್ಕಾಗಿ 30 ಕೋಟಿ ರೂ.ಗಳ ಕ್ರೀಯಾಯೋಜನೆಗೂ ಸಹ ಈಗಾಗಲೇ ಅನುಮೋದನೆ ನೀಡಿದ್ದು, ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಬರುವ ಅಕ್ಟೋಬರ್ 2ರೊಳಗೆ ಎಲ್ಲ ಶಾಲೆಗಳಿಗೆ ಶೌಚಾಲಯ ಸೌಲಭ್ಯ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಈಗಾಗಲೇ ಶಾಲಾ ಕೊಠಡಿಗಳ ದುರಸ್ತಿಗಾಗಿ ಮತ್ತು ಹೊಸ ಶಾಲಾ ಕೋಣೆಗಳ ನಿಮರ್ಾಣಕ್ಕಾಗಿ 7.5 ಕೋಟಿ ರೂ. ಮಂಜೂರಾಗಿದ್ದು, ಅದರನ್ವಯ ಸೂಕ್ತ ಕ್ರಮದ ಜೊತೆಗೆ ವಿವಿಧ ಶಾಲೆಗಳಿಗೆ ಅವಶ್ಯಕವಿರುವ ಕಂಪೌಂಡ್ ಗೋಡೆ ನಿಮರ್ಾಣಕ್ಕೂ ಗಮನ ನೀಡಲು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯ ಲಭ್ಯವಿರುವ ಜೊತೆಗೆ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಆರೋಗ್ಯ ರಕ್ಷಾ ಸಮಿತಿಗಳ ಮೂಲಕ ನಿರಂತರ ಸಭೆಗಳನ್ನು ನಡೆಸುವ ಜೊತೆಗೆ ಈ ಸಮಿತಿಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಒಟ್ಟಾರೆ ಅಭಿವೃದ್ದಿ ಕಾರ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿ, ಪ್ರತಿ ಹದಿನೈದು ದಿನಕ್ಕೊಮ್ಮೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಉಪಸ್ಥಿತರಿದ್ದರು.