ಲೋಕದರ್ಶನ ವರದಿ
ಬ್ಯಾಡಗಿ: ಲೊಕೋಪಯೋಗಿ, ಕೃಷಿ ಇಲಾಖೆ, ಅಬಕಾರಿ, ಸಾಮಾಜಿಕ ಅರಣ್ಯ, ಸಣ್ಣನೀರಾವರಿ, ಸಬ್ರಜಿಸ್ಟರ್ ಸೇರಿದಂತೆ ಹಲವು ಇಲಾಖೆಗಳು ಸತತವಾಗಿ ಕೆಡಿಪಿ ಸಭೆಗೆ ಹಾಜರಾಗದೆ ಇರುವದರಿಂದ, ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಯಲ್ಲನಗೌಡ ಕರೆಗೌಡ್ರ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗೆ ಸೂಚಿಸಿದರು.
ತಾ.ಪಂ.ಸಭಾಭವನದಲ್ಲಿ ಮಂಗಳವಾರ ಜರುಗಿದ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಏನು ನಡೆಯುತ್ತದೆ ಎಂಬದು ಜನಪ್ರತಿನಿದಿಗಳಾದ ನಮಗೆ ತಿಳಿಯುತ್ತಿಲ್ಲ. ಸಾಮನ್ಯ ಜನರಿಗೆ ಹೇಗೆ ಸರಕಾರದ ಯೋಜನೆಗಳು ಗೊತ್ತಾಗುತ್ತದೆ. ಪ್ರತಿ ಸಾರಿಯು ಒಂದೊಲ್ಲೊಂದು ಕಾರಣ ನೀಡಿ ಗೈರು ಹಾಜರಾಗದೆ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ಏತ್ತಿ ತೋರಿಸುತ್ತದೆ. ಕೂಡಲೇ ಕಠಿಣ ಕ್ರಮ ಜರುಗಿಸಿ ವರದಿ ನೀಡುವಂತೆ ಆದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿವರ್ಾಹಕ ಅಧಿಕಾರಿ ಅಭಿದ್ ಗದ್ಯಾಳ, ಇಲಾಖೆ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಆರಂಭಿಸಿದ್ದು, ಯಂತ್ರಗಳು ರಿಪೇರಿಗೆ ಲಕ್ಷಗಟ್ಟಲೇ ಹಣ ಖಚರ್ಿನಲ್ಲಿ ತೋರಿಸಲಾಗುತ್ತದೆ. ಆದರೆ ಯಂತ್ರಗಳು ರೀಪೇರಿಯಾಗದೆ ಹಾಗೆಯೆ ಉಳಿದಿದ್ದು, ಗ್ರಾಮಸ್ಥರಿಗೆ ನೀರು ಲಭ್ಯವಾಗುತ್ತಿಲ್ಲ. ಅಲ್ಲದೆ ಕಲ್ಲೇದೆವರ ಗ್ರಾಮದಲ್ಲಿ 2 ರೂ ಬದಲಾಗಿ 5 ರೂಪಾಯಿ ಮಾಡಿದ್ದಾರಂತೆ. ಗ್ರಾಮಸ್ಥರಿಂದ ದೂರುಗಳು ಬಂದಿವೆ ಕೂಡಲೆ ಹೆಚ್ಚಿನ ಹಣ ವಸೂಲಿ ಮಾಡುವದನ್ನು ನಿಲ್ಲಿಸಿ ಎಂದು ತಾ.ಪಂ. ಅಧ್ಯಕ್ಷ ಸವಿತಾ ಸುತ್ತಕೋಟಿ ಗ್ರಾಮೀಣ ಕುಡಿಯು ವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಲ್ಯಾಂಡ ಆಮರ್ಿಇಂಜಿನೀಯರಗೆ ತರಾಟೆ ತಗೆದುಕೊಂಡರು.
ಸಭೆಯಲ್ಲಿದ್ದ ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆಯ ಸೊಪ್ಪಿನಮಠ ಪ್ರತಿಕ್ರಿಯಸಿ, ಸರಕಾರದ ಆದೇಶ ಮೇರೆಗೆ ಏಜನ್ಸಿಯವರು 2 ರಿಂದ 5 ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಜನರಿಗೆ ಹೊರೆಯಾಗದಂತೆ ಲ್ಯಾಂಡ ಆಮರ್ಿಇಂಜಿನೀಯರ ಜೊತೆಗೆ ಚಚರ್ಿಸಿ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ, ತಾಲೂಕಾ ಆರೋಗ್ಯ ಕೇಂದ್ರದಲ್ಲಿ ಬ್ಲೆಡ್ ಟೆಸ್ಟ್ ಹಾಗೂ ಇತರೆ ಟೆಸ್ಟ್ಗಳನ್ನು ಮಾಡಲಿಕ್ಕೆ ಹೆಚ್ಚಿನ ಹಣ ಪಡೆಯುತ್ತಿರೆಂದು ದೂರುಗಳು ಬಂದಿವೆ. ಯಾವ ಟೆಸ್ಟಿಗೆ ಎಷ್ಟು ಹಣ ಪಿಕ್ಷ್ಸ್ ಮಾಡಿದ್ದರಿ. ಅಲ್ಲದೆ ನಿಮ್ಮ ತಾಲೂಕಾಧಿಕಾರಿ ಲಮಾಣಿಯವರು ಸತತ 3 ತಿಂಗಳಿಂದ ಕೆಡಿಪಿ ಸಭೆಗೆ ಬಂದಿಲ್ಲ. ಸರಿಯಾದ ಮಾಹಿತಿ ತಗೆದುಕೊಂಡು ಬನ್ನಿ ಎಂದು ಆರೋಗ್ಯ ಇಲಾಖೆಯವರ ಮೇಲೆ ಹರಿಹಾಯ್ದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆಯ ಹಿರಿಯಕ್ಕನವರ, ಇಲಾಖೆ ನಿಯಮದಂತೆ ಹಣ ಪಿಕ್ಷ್ಸ್ ಮಾಡಿದ್ದೇವೆ. ಯಾವುದೇ ಹೆಚ್ಚಿನ ಹಣ ವಸೂಲಿ ಮಾಡಿಲ್ಲ.
ಬೆಂಗಳೂರಿನಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಗಾರ ಇರುವದರಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತಿ ವಿಭಾಗದ ಅಭಿಯಂತರ ವಾಯ್.ಕೆ.ಮಟಗಾರ, ಶಿಶುಯೋಜನಾಧಿಕಾರಿ ರಾಮಲಿಂಗಪ್ಪ ಅರಳಗುಪ್ಪಿ, ತೋಟಗಾರಿಕೆ ಸಹಾಯಕ ನಿದರ್ೇಶಕಿ ಟಿ.ವಿಜಯಲಕ್ಷ್ಮಿ, ರೇಷ್ಮೇ ವಿಸ್ತಣರ್ಾಧಿಕಾರಿ ಆರ್.ಎಂ.ಪೂಜಾರ, ಪಶುವೈದ್ಯಾಧಿಕಾರಿ ಎಂ.ಗೋಪಿನಾಥ ಸೇರಿದಂತೆ ಇನ್ನಿತರರಿದ್ದರು.