ಗುವಾಹಟಿ, ಸೆ 7: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಗುವಾಹಟಿಯಲ್ಲಿ ನಡೆಯಲಿರುವ ಎರಡು ದಿನಗಳ ಈಶಾನ್ಯ ಪರಿಷತ್ತಿನ 68ನೇ ಸರ್ವ ಸದಸ್ಯರ ಸಭೆಗೆ ಭಾನುವಾರ ಚಾಲನೆ ದೊರೆಯಲಿದೆ.
ಸಭೆಯಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಪ್ರತಿನಿಧಿಗಳು, ಎನ್ ಇಎಸ್ ನ ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಕ್ಕಿಂ ಸೇರಿದಂತೆ ಅಲ್ಲಿನ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದ್ದು, 2020ರ ಮಾರ್ಚ್ನಲ್ಲಿ ಕೊನೆಗೊಳ್ಳುವ 14ನೇ ಹಣಕಾಸು ಆಯೋಗದ ಅವಧಿಯನ್ನೂ ಮೀರಿದ ಯೋಜನೆಗಳನ್ನು ರೂಪಿಸುವ ನಿರೀಕ್ಷೆಯಿದೆ.