ಅ.2ಕ್ಕೆ ಉತ್ತರ ಕನರ್ಾಟಕ ಬಂದ್: ಜಿಲ್ಲಾ ಪೂರ್ವ ಭಾವಿ ಸಭೆಯಲ್ಲಿ ಕಟ್ಟೇಗೌಡ್ರ ಹೇಳಿಕೆ


ಲೋಕದರ್ಶನ ವರದಿ

ಹಾವೇರಿ27: ಉತ್ತರ ಕನರ್ಾಟಕಕ್ಕೆ ಸಮರ್ಪಕ ನ್ಯಾಯ ಒದಗಿಸುವ ದೃಷ್ಠಿಯಿಂದ ಪ್ರತೇಕ ಉತ್ತರ ಕನರ್ಾಟಕ ರಾಜ್ಯ ರಚಿಸುವಂತೆ ಆಗ್ರಹಿಸಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಆಗಷ್ಟ್ 2 ರಂದು ಹಾವೇರಿ ಜಿಲ್ಲೆ ಬಂದ್ ಕರೆ ನೀಡಲಾಗಿದೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎ.ಎಫ್. ಕಟ್ಟೇಗೌಡ್ರ ತಿಳಿಸಿದರು. 

  ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟ ಅನಿವಾರ್ಯ. ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವದು ಅನಿವಾರ್ಯವಾಗಿದೆ. ಈ ಹೋರಾಟ ಇಂದಿನದಲ್ಲ, ಇದು ಕಳೆದ ಎರಡು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ, ಈ ಹೋರಾಟಕ್ಕೆ ಈಗ ಹೆಚ್ಚಾಗಿದೆ ಎಂದು ತಿಳಿಸಿದರು. 

ಈ ಹೋರಾಟಕ್ಕೆ ಉತ್ತರ ಕನರ್ಾಟಕ ಹೆಬ್ಬಾಗಿಲು ಹಾವೇರಿಯಿಂದ ದೂರದ ಬೀದರ ವರೆಗೆ ಹೆಚ್ಚು ಪ್ರತ್ಯೇಕ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿದೆ. ಹೋರಾಟ ತೀವ್ರತೆ ಮನಗಂಡಿರುವ ಚುನಾಯಿತ ಪ್ರತಿನಿಧಿಗಳು ಈ ಹೋರಾಟವನ್ನು ಎಲ್ಲ ರೀತಿಯಿಂದಲೂ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಏಲ್ಲಿಯವರೆಗೂ ಈ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಾರೋ, ಅಲ್ಲಿಯ ತನಕ ಈ ಹೋರಾಟದ ಉಗ್ರ ಸ್ವರೂಪ ಪಡೆದುಕೊಳ್ಳುತ್ತ ಸಾಗುತ್ತದೆ ಎಂದು ತಿಳಿಸಿದರು. 

ನಂತರ ಹೋರಾಟ ಸಮಿತಿಯ ರಾಜ್ಯಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಉತ್ತರ ಕನರ್ಾಟಕದ ಹೆಬ್ಬಾಗಿಲಾಗಿರುವ ಹಾವೇರಿ ಜಿಲ್ಲೆಯಲ್ಲಿ ಆ.2 ರಂದು ನಡೆಯಲಿರುವ ಬಂದ್ಗೆ ಎಲ್ಲ ಸಂಘಟನೆಗಳ ಅಭೂತಪೂರ್ವ ಬೆಂಬಲ ದೊರೆಯಲಿದ್ದು, ಇದರ ಹಿಂದೆ ಯಾವದೇ ರಾಜಕಾರಣಿಗಳ ಕೈವಾಡವಿಲ್ಲ ಎಂದು ಸ್ಪಷ್ಟ ಪಡಿಸಿದರು.