ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದ ಬಗ್ಗೆ ಮಾಹಿತಿಯಿಲ್ಲ: ಗೃಹ ಸಚಿವ ಬೊಮ್ಮಾಯಿ

ಲೋಕದರ್ಶನ ವರದಿ

ಕೊಪ್ಪಳ 13: ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ಫೆ. 10ರಂದು ರಾತ್ರಿ ಸಚಿವರೊಬ್ಬರ ಮಗನ ಕಾರು ಡಿಕ್ಕಿ ಹೊಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿಯಿಲ್ಲ. ಆ ಬಗ್ಗೆ ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಅವರು ಗುರುವಾರದಂದು ಜಿಲ್ಲೆಯ ಗಂಗಾವತಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾರು ಢಿಕ್ಕಿ ಹೊಡೆಸಿದವರು ಯಾರು ಎಂಬುದರ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.   

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬಹಳ ವರ್ಷಗಳಿಂದ ಪೊಲೀಸ್ ನೇಮಕಾತಿಯಾಗಿಲ್ಲ. ಇದರಿಂದ ಪೊಲೀಸ್ರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಬರುವ ಎರಡು ವರ್ಷಗಳಲ್ಲಿ 16 ಸಾವಿರ ಪೊಲೀಸ್ರನ್ನು ನೇಮಕ ಮಾಡಿಕೊಳ್ಳಲಾಗುವುದು. ಮೊದಲ ಹಂತವಾಗಿ ಈ ವರ್ಷದಲ್ಲಿ 6 ಸಾವಿರ ಪೊಲೀಸ್ರನ್ನು ನೇಮಕ ಮಾಡಿಕೊಳ್ಳಲಾಗುವುದು, ಈ ವರ್ಷ 6 ಸಾವಿರ ನೇಮಕ ಮಾಡಿ ಮುಂದಿನ ವರ್ಷ ಉಳಿದದ್ದು ನೇಮಕಾತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು. ಠಾಣೆಗೆ ಬರುವ ಜನರೊಂದಿಗೆ ಬೆರೆತು ಸಮಸ್ಯೆ ಬಗೆ ಹರಿಸಲು ಜನ ಸ್ನೇಹಿ ಪೊಲೀಸ್ ಕಾರ್ಯಕ್ರಮವನ್ನು ಈ ಬಾರಿಯ ಬಜೆಟ್ ನಲ್ಲಿ ಪ್ರಸ್ತಾಪಕ್ಕೆ ಬರಲಿದೆ. ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಪ್ಪಳದ ಡಿಆರ್ ನೇಮಕಾತಿ ಸಮಸ್ಯೆಯಾಗಿದೆ ಅದು ನನ್ನ ಗಮನಕ್ಕೂ ಬಂದಿದೆ.  ಅದೂ ಸಹಿತ ಶೀಘ್ರ ಬಗೆಹರಿಸಲಾಗುವುದು. ಕೊಪ್ಪಳದಲ್ಲಿ ಮರಳು ದಂಧೆ, ಇಸ್ಪೀಟು ಆಟದ ಕುರಿತು ನನಗೂ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದರು. ಅದನ್ನೂ ಮೀರಿಯೂ ಅಕ್ರಮದಲ್ಲಿ ತೊಡಗಿದರೆ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳದ ಬಾಂಗ್ಲಾ ವಲಸಿಗರ ಕುರಿತಂತೆ ಅವರು ಎಲ್ಲಿ ಕೆಲಸ ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಕೈಗಾರಿಕೆಯಲ್ಲಿ ಕೆಲಸ ಮಾಡಲು ಬಂದಿದ್ದಾರೆ. ಇಲ್ಲಿ ಬಂದಿರುವ ಜನರ ಬಗ್ಗೆ ಆಯಾ ಪೊಲೀಸ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದ ಅವರು ಉತ್ತರ ಕನರ್ಾಟಕದ ನೀರಾವರಿ ಯೋಜನೆಗಳ ಕುರಿತು ಈಗಾಗಲೆ ಸಿಎಂ ಯಡಿಯೂರಪ್ಪ ಅವರು ಹಲವು ಸಭೆ ನಡೆಸಿದ್ದಾರೆ. ಕೃಷ್ಣಾ ಯೋಜನೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಎಂ ಅವರು ಹೇಳಿದ್ದಾರೆ. ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ ಅವರು ಖಾತೆಯ ಹೊಣೆ ಹೊತ್ತಿದ್ದಾರೆ. ಈ ಭಾಗದ ನೀರಾವರಿಗೆ ಒತ್ತು ನೀಡಲಾಗುವುದು ಎಂದರಲ್ಲದೆ ಬಸವರಾಜ ರಾಯರಡ್ಡಿ ಅವರು ಈಗ ಕೃಷ್ಣಾ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರದ್ದೆ ಸಕರ್ಾರ 6 ವರ್ಷ ಅಧಿಕಾರದಲ್ಲಿತ್ತಲ್ಲ. ಆಗ ನೀರಾವರಿ ಯೋಜನೆ ಸಾಧ್ಯ ಎಂದು ಹೇಳಿದ್ದರು. ಈಗ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ರಾಯರೆಡ್ಡಿಯವರದ್ದು ಆಗೊಂದು ಮಾತು, ಈಗೊಂದು ಅವರಿಂದ ಬರುತ್ತಿದೆ.  ಅವರು ಅಧಿಕಾರದಲ್ಲಿದ್ದಾಗ ಕೃಷ್ಣಾ ಬಿ ಸ್ಕೀಂ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಇದೀಗ ಕೃಷ್ಣಾ ಬಿ ಸ್ಕೀಂ ಕುರಿತು ಪುಸ್ತಕ ಹೊರತಂದಿರುವುದು ಹಾಸ್ಯಾಸ್ಪದವಾಗಿದೆ ಎಂದರು.ಇನ್ನು ಗಂಗಾವತಿ ತಾಲೂಕಿನ ಬಳಿ 24 ಕೋಟಿ ವೆಚ್ಚದಲ್ಲಿ ನವಲಿ ಜಲಾಶಯದ ಡಿಪಿಆರ್ ಕೈಗೊಳ್ಳಲು ಸಿಎಂ ಅವರು ಆದೇಶ ಮಾಡಿದ್ದಾರೆ ಎಂದರು. ಜಲಾಶಯದಿಂದ 30 ಟಿಎಂಸಿ ಯಷ್ಟು ನೀರು ಹೊರಗೆ ಹೋಗುತ್ತಿದೆ. ಅದನ್ನು ನಿಲ್ಲಿಸಲು ಸಮನಾಂತರ ಜಲಾಶಯ ನಿಮರ್ಿಸಲಾಗುವುದು ಎಂದರು.

ಸರೋಜಿನಿ ಮಹಿಷಿ ವರದಿ ಬಹಳ ವರ್ಷಗಳಿಂದ ಚಚರ್ೆಗೆ ಗ್ರಾಸವಾಗಿದೆ. ಈ ವರದಿಗೆ ಕಾಯಕಲ್ಪ ನೀಡಲು ಸಕರ್ಾರ ಮುಂದಾಗಿದ್ದು,ಈ ಬಗ್ಗೆ ಸಚಿವ ಸುರೇಶಕುಮಾರ್ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಕ್ರಮ ಕೈಗೊಳ್ಳಲಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡು ಕೆಲ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಕೊಪ್ಪಳ ವಿಧಾನಸಭೆ ಕ್ಷೇತ್ರದ ಮುಖಂಡರಾದ ಅಮರೇಶ ಕರಡಿ, ಕೊಪ್ಪಳ ನಗರ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್, ವಿಎಸ್ಎಸ್ಎನ್ ಅಧ್ಯಕ್ಷ ರಾಜಶೇಖರ ಆಡೂರು, ಕೊಪ್ಪಳ ನಗರ ಪ್ರಾಧಿಕಾರ ಸದಸ್ಯರಾದ ನಾಗಭೂಷಣ ಸಾಲಿಮಠ, ಬಸವರಾಜ್ ಭೋವಿ,ಯುವ ಮುಖಂಡ ವಸಂತ ನಾಯಕ ಹೊಸನಿಂಗಪುರು ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.