ಮಹಾಲಿಂಗಪುರ 30: ಪ್ರಸ್ತುತ ಅಧಿಕಾರಾವಧಿಯಲ್ಲಿ ನಮ್ಮಿಂದ ಯಾವುದೇ ತರಹದ ಭೂಕಬಳಿಕೆ ಮತ್ತು ಅಕ್ರಮ ನಿವೇಶನ ಹಂಚಿಕೆ ನಡೆದಿರುವುದಿಲ್ಲವೆಂದು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಪುರಸಭೆಯಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೆಂಗೇರಿ ಮಡ್ಡಿ ಬಡಾವಣೆಯ ಸರ್ವೆ ನಂಬರ್ 29/1ರ 3 ಎಕರೆ 06 ಗುಂಟೆ ಪುರಸಭೆ ಮೋಫತ ಗಾಯರಾನ ಜಾಗೆಯನ್ನು ಕೆಲವು ಹಿತಾಸಕ್ತಿಗಳು ಹಣ ಪಡೆದು ನಿವೇಶನಗಳನ್ನು ಮಾಡಿ ಹಂಚುತ್ತಿದ್ದಾರೆ ಎಂಬ ಪ್ರಕರಣ ಕುರಿತಾಗಿ ಕೆಲ ಪುರಸಭೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ನೀಡಿದ ಸದರಿ ಮನವಿಗೆ ಪ್ರತಿಯಾಗಿ ಉತ್ತರಿಸಿ ಅವರು ಮಾತನಾಡಿದರು.
ನಾವು ಪುರಸಭೆಯ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಗತಿಸಿದ್ದು, ಈ ಅಕ್ರಮ ಪ್ರಕರಣ ಹಿಂದಿನ ಅಧಿಕಾರಾವಧಿಯಲ್ಲಿ ನಡೆದಿರಬಹುದು. ಏನೆಯಾಗಲಿ ನಮ್ಮ ಪುರಸಭೆಗೆ ಸಮ್ಮಂಧಿಸಿದ ಸರ್ವೇ ನಂಬರ್ ಜಾಗೆಯಲ್ಲಿಯ ಅನಧಿಕೃತ ಮನೆಗಳನ್ನು ಇವತ್ತೇ ಕಡ್ಡಾಯವಾಗಿ ತೆರವುಗೊಳಿಸಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಅಣಿಯಾಗಲು ಅಧಿಕಾರಿಗಳಿಗೆ ತಿಳಿಸುತ್ತೇನೆ.ಈ ಅಕ್ರಮ ಪ್ರಕರಣದಲ್ಲಿ ಪುರಸಭೆಯ ಯಾವುದೇ ಅಧಿಕಾರಿ ಪಾಲ್ಗೊಂಡಿಲ್ಲ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ಮುಸ್ತಾಕ್ ಚಿಕ್ಕೋಡಿ, ಸುನೀಲ್ ಗೌಡ ಪಾಟೀಲ್, ಅರ್ಜುನ್ ದೊಡಮನಿ, ಲಕ್ಷ್ಮಣ ಮಾಂಗ ಮತ್ತು ಆನಂದ ಬಂಡಿ ಇದ್ದರು.