ಸತತ 3ನೇ ಬಾರಿಗೆ ಅತ್ತುತ್ತಮ ಸಹಕಾರಿ ಪ್ರಶಸ್ತಿ

ಶಾಸಕ ಕಾರಜೋಳರನ್ನು ಮಹಿಳಾ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ರತ್ನಕ್ಕ ತಳೇವಾಡ ಹಾಗೂ ಆಡಳಿತ ಮಂಡಳಿ ಸದಸ್ಯರು

ಲೋಕದರ್ಶನ ವರದಿ

ಮುಧೋಳ 03:  ರಾಜ್ಯದಲ್ಲೇ ಅತ್ಯುತ್ತಮ ಮಹಿಳಾ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮುಧೋಳ ಮಹಿಳಾ ಸೌಹಾರ್ದ ಕ್ರೆಡಿಟ್ ಸೊಸೈಟಿ ನಿ; ಮುಧೋಳ ಸತತ ಮೂರು ಬಾರಿ ರಾಜ್ಯ ಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿ ಪಡೆದು ದಾಖಲೆ ನಿಮರ್ಿಸಿದೆಯೆಂದು ಶಾಸಕ ಹಾಗೂ ರಾಜ್ಯ ವಿ,ಸ, ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಅಭಿಮಾನದಿಂದ ಹೇಳಿದರು. 

ನಗರದ ಹೊರವಲಯದ ಅರಳಿಕಟ್ಟಿ ಸಭಾ ಗೃಹದಲ್ಲಿ ನಡೆದ ಬ್ಯಾಂಕಿನ 5 ನೇ ಸಾಮಾನ್ಯ ಸಭೆಯಲ್ಲಿ ಬ್ಯಾಂಕಿನ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿ.ಪಂ.ಸದಸ್ಯ ಹಾಗೂ ಬ್ಯಾಂಕಿನ ಅದ್ಯಕ್ಷೆ ರತ್ನಕ್ಕ ತಳೇವಾಡರ ನೇತೃತ್ವದ ಆಡಳಿತ ಮಂಡಳಿ ಸದಸ್ಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಮಹಿಳಾ ಬ್ಯಾಂಕ ಅಲ್ಪಾವಧಿಯಲ್ಲೆ ಸುಮಾರು 1600 ಸ್ತ್ರಿ ಶಕ್ತಿ ಸ್ವಸಹಾಯ ಗುಂಪುಗಳಿಗೆ ಆಥರ್ಿಕ ನೆರವು ನೀಡುವ ಮೂಲಕ ಸಾವಿರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಅಲ್ಲದೆ ಹೈನುಗಾರಿಕೆ, ಕೋಳಿ, ಕುರಿ, ಸಾಗಾಣಿಕೆ ಕಾಯಿಪಲ್ಲೆ ಮಾರಾಟ ಹಾಗೂ ಸಾವಯವ ಬೆಳೆ ಮಾರಾಟ ಮುಂತಾದ ಗ್ರಾಮೀಣ ರೈತಾಪಿ ವರ್ಗದವರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರಿ ಗಳಿಗೆ ಸಾಲ ನೀಡಿ ಅವರ ಆಥರ್ಿಕ ಅಭಿವೃದ್ಧಿಗೆ ಸಹಕಾರಿಯಾಗಿದೆಂದು ಕಾರಜೋಳ ತಿಳಿಸಿ, ಮುಂದೆ ಈ ಬ್ಯಾಂಕ ಇನ್ನಷ್ಟು ಅಭಿವೃದ್ಧಿ ಹೊಂದಿ ರಾಜ್ಯದಲ್ಲಿ ಮಾದರಿ ಮಹಿಳಾ ಬ್ಯಾಂಕ ಆಗಲೆಂದು ಶುಭ ಹಾರೈಸಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. 

ಇದೇ ವೇಳೆ ಬ್ಯಾಂಕಿನ ಮಾರ್ಗದಶರ್ಿ ಹಾಗೂ ಹಿರಿಯ ಸಹಕಾರಿ ಧುರೀಣ ಆರ್.ಎಸ್.ತಳೇವಾಡರ ಶಷ್ಠಬ್ದಿ ಪೂರ್ಣ ಸಮಾರಂಭದ ಆಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬ್ಯಾಂಕ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವದಾಗಿ ತಳೇವಾಡ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷೆ ರತ್ನಕ್ಕ ತಳೇವಾಡ ವಹಿಸಿ ಮಾತನಾಡಿ, ಬ್ಯಾಂಕ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯ ಮೇಲೆ ಡಾ. ಪುಷ್ಪಾ ಕಾರಜೋಳ,ಸವೀತಾ ಅರಳಿಕಟ್ಟಿ, ಹೇಮಾ ಬೆನಕಟ್ಟಿ, ಹೇಮ ಪಾಟೀಲ, ಮಂಗಲಾ ಘೋರ್ಪಡೆ  ಎಲ್.ಎಸ್.ತಳೇವಾಡ, ರಾಚಪ್ಪ ಕರೆಹೊನ್ನ, ಶಿವನಗೌಡ ಪಾಟೀಲ ಮುಂತಾದವರಿದ್ದರು. 

    ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ರಶ್ಮಿ ಕಿತ್ತೂರ ಸ್ವಾಗತಿಸಿದರು. ಆರ್.ಎ. ಘಂಟಿ ನಿರುಪಿಸಿದರು, ಸಂಗಮೇಶ ಅಡವಿ ವಂದಿಸಿದರು.