ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭ

ಲೋಕದರ್ಶನ ವರದಿ

ಘಟಪ್ರಭಾ 13; ಸಮಾಜಿಕ ಸಂಘಟನೆಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜದಲ್ಲಿನ ದರ್ಬಲರ ಏಳ್ಗೆಗೆ ಶ್ರಮಿಸಿಬೇಕೆಂದು ಹುಬ್ಬಳ್ಳಿ-ಧಾರವಾಡ ನಗರ ಯೋಜನಾ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಬಸವರಾಜ ಹಿರೇಮಠ ಹೇಳಿದರು.

ಅವರು ಇತ್ತೀಚಿಗೆ ಸ್ಥಳೀಯ ಜೈಂಟ್ಸ್ ಗ್ರುಪ್ ಆಪ್ ಘಟಪ್ರಭಾ ಇದರ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಮತ್ತು ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ಜೈಂಟ್ಸ್ ಗ್ರುಪ್ ಸಂಸ್ಥೆ 25 ವರ್ಷಗಳಿಂದ ಅನೇಕ ಸಮಾಜಕ್ಕೆ ಉಪಯುಕ್ತ ಕಾರ್ಯ ಮಾಡುತ್ತ, ಆರೋಗ್ಯ, ಶಿಕ್ಷಣ, ಸಂಗೀತ ಹಾಗೂ ಯೋಗ ತರಬೇತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತ ಬಂದಿದೆ ಎಂದು ಹೇಳಿದರು. 

ಬೆಳಗಾವಿ ಮಹೇಶ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಹೇಶ ಜಾಧವ ಮಾತನಾಡಿ, ಸಮಾಜಿಕ ಸಂಸ್ಥೆಗಳು ಸಮಾಜದ ಅವಶ್ಯಕತೆಗಳನ್ನು ಅರಿತು ಸೇವೆ ಮಾಡಿದರೆ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವೆಂದು ಹೇಳಿದರು. 

ಸನ್ 2019ರ ಜೈಂಟ್ಸ್ ಗ್ರುಪ್ ಆಪ್ ಘಟಪ್ರಭಾದ ನೂತನ ಅಧ್ಯಕ್ಷರಾಗಿ ಡಾ.ವಿಲಾಸ ನಾಯಿಕವಾಡಿ, ಉಪಾಧ್ಯಕ್ಷರಾಗಿ ಡಾ.ಎಸ್.ಕೆ.ಕೋಣಿನ(ಇಂಟರನಲ್), ಬಿ.ಎ.ಖೆಮಲಾಪೂರೆ(ಎಕ್ಸಟರನಲ್), ಆಡಳಿತ ನಿದರ್ೇಶಕರಾಗಿ ಆನಂದ ದೇಶಪಾಂಡೆ, ಹಣಕಾಸು ನಿದರ್ೇಶಕರಾಗಿ ಎಸ್.ಕೆ.ಕುರಣಗಿ ಹಾಗೂ  ನಿದರ್ೇಶಕರು ಅಧಿಕಾರ ವಹಿಸಿಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಸ್.ಕಪರ್ೂರಮಠ ವಹಿಸಿದ್ದರು. ವೇದಿಕೆ ಮೇಲೆ ಫೆಡರೆೆಶನ್-6ರ ಅಧ್ಯಕ್ಷ ಮೋಹನ ಸವರ್ಿ, ಯುನಿಟ್ ಡೈರೆಕ್ಟರ್ ಪ್ರವೀಣ ತ್ರಿವೇದಿ, ಎಂ.ಸಿ.ರಾಜನಣ್ಣವರ, ಅರುಣ ಪಾಟೀಲ, ಎಲ್.ಬಿ.ದೊಡಮನಿ, ಎಲ್.ಬಿ.ದೊಡಬಸನ್ನವರ, ಕೆ.ಪಿ.ಕಳ್ಳಿಮಠ ಮುಂತಾದವರು ಉಪಸ್ಥಿತರಿದ್ದರು. ಸಿ.ಬಿ.ಮಠಪತಿ ಸ್ವಾಗತಿಸಿದರು. ಶಿಕ್ಷಕಿ ಉಮಾ ದೊಡಮನಿ ನಿರೂಪಿಸಿ ವಂದಿಸಿದರು.