ಶಿರಸಂಗಿ 27: ಸಮೀಪದ ಕಲ್ಲಾಪುರ ಗ್ರಾಮದ ಕಲ್ಮೇಶ್ವರ ರಂಗ ಮಂಟಪದಲ್ಲಿ ಎಳ್ಳ ಅಮವಾಸ್ಯೆ ಅಂಗವಾಗಿ ಕಲ್ಮೇಶ್ವರ ಟ್ರಸ್ಟ್ ಕಮೀಟಿ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತ ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಯುವ ಮುಖಂಡ ಈರಯ್ಯ ಶಿವಪ್ಪಯ್ಯನಮಠ ಉದ್ಘಾಟಿಸಿದರು. ದೇವಸ್ಥಾನದ ಅಧ್ಯಕ್ಷ ಫಕೀರಪ್ಪ ಓಗಳಾಪೂರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಪಂಚಪ್ಪ ಹುಬ್ಬಳ್ಳಿ, ಬಸಪ್ಪ ಅಳಗೋಡಿ, ಗದಿಗೆಪ್ಪಾ ಕುಂಬಾರ, ಶಿವಾನಂದ ಹಾಲೋಳ್ಳಿ, ಹನುಮಂತ ಪೂಜಾರ, ವಿ.ವಿ. ವೀರನಗೌಡ್ರ, ಸಿಕಂದರ ನೂಲಗಿ, ಮಹಾದೇವಪ್ಪ ಮೆನಸಿನಕಾಯಿ ಸೇರಿದಂತೆ ಮತ್ತಿತರು ಇದ್ದರು.