ಲೋಕದರ್ಶನ ವರದಿ
ರಾಯಬಾಗ 22: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಆಥರ್ಿಕವಾಗಿ ಸಬಲರನ್ನಾಗಿ ಮಾಡುವುದರೊಂದಿಗೆ ಅಸಂಘಟಿತ ಮತ್ತು ಕೃಷಿ ವಲಯಗಳನ್ನು ಬಲಿಷ್ಠಗೊಳಿಸಿದೆ ಎಂದು ಕ್ಷೇ.ಧ.ಗ್ರಾ.ಯೋ.ಚಿಕ್ಕೋಡಿ ಜಿಲ್ಲಾ ನಿದರ್ೇಶಕ ಕೃಷ್ಣಾ ಟಿ. ಹೇಳಿದರು.
ಶುಕ್ರವಾರ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಪದ್ಮವಿಭೂಷಣ ಡಾ.ವಿರೇಂದ್ರ ಹೆಗ್ಗಡೆಅವರ ಮಾರ್ಗದರ್ಶನದಲ್ಲಿ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ರಾಯಬಾಗ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಡ ಹುಬ್ಬರವಾಡಿ ವಲಯಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಹಾಗೂ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಧೈರ್ಯತುಂಬಿ, ಅವರ ವ್ಯಕ್ತಿತ್ವವನ್ನು ಬೆಳೆಸಿ, ಅವರಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ಧರ್ಮಸ್ಥಳ ಸಂಘ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.
ಸಾನಿಧ್ಯವನ್ನು ವಹಿಸಿ ಮಾತನಾಡಿದ ಭೆಂಡವಾಡ ರೇವಣಸಿದ್ಧೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಶ್ರೀಗಳು, ಗ್ರಾಮೀಣ ಮಹಿಳೆಯರ ಬಾಳಿಗೆ ಬೆಳಕಾಗಿರುವ ಧರ್ಮಸ್ಥಳ ಸಂಘವು ಸರಕಾರ ಮಾಡದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇಂದು ಬ್ಯಾಂಕ್ನವರು ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ಸಂಘಗಳಿಗೆ ಸಾಲ ನೀಡಲು ಮುಂದೆ ಬರುವುದಕ್ಕೆ ಕ್ಷೇ.ಧ.ಗ್ರಾಮೀಭಿವೃದ್ಧಿ ಯೋಜನೆಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಶೋಭಾ ಬಬಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಶಿವಪುತ್ರ ಪಟ್ಟಣಶೆಟ್ಟಿ, ಗ್ರಾ.ಪಂ.ಸದಸ್ಯ ಸಿದ್ರಾಮ ಪೂಜೇರಿ, ಸುರೇಶ ಚೌಗಲಾ, ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ಎಸ್.ಎಸ್.ಪಾಟೀಲ, ಸಂಗಪ್ಪ ಬೆನ್ನಾಳೆ, ಅದಂಸಾಹೇಬ ನದಾಫ, ಅಪ್ಪು ಬಾನೆ, ವಿನೋದ ಪೋತದಾರ, ಸದಾಶಿವ ಹುಂಜ್ಯಾಗೋಳ ಸೇರಿದಂತೆ ಸ್ವಸಹಾಯ ಸಂಘಗಳ ಒಕ್ಕೂಟದಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಪುರಂದರ ಪೂಜಾರಿ ಸ್ವಾಗತಿಸಿದರು, ವಲಯ ಮೇಲ್ವಿಚಾರಕ ಬಸವರಾಜ ನಿರೂಪಿಸಿ, ವಂದಿಸಿದರು. ಬೆಳಿಗ್ಗೆ ಗ್ರಾಮದಲ್ಲಿ ಸುಮಂಗಲೆಯರ ಕುಂಭಮೇಳ ಜರುಗಿತು.ನಂತರ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಬಳಿಕ ನೂತನಒಕ್ಕೂಟದ ಪದಾಧಿಕಾರಿಗಳಿಗೆ ಪದಗ್ರಹಣ ಪತ್ರಗಳನ್ನು ನೀಡಲಾಯಿತು.