ಕ್ರೇಡೈ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

New CREDAI office bearers take oath

ವಿಜಯಪುರ 29: ಬೆಂಗಳೂರಿನ ಚಾನ್ಸೇರಿ ಪೆವಿಲಿಯೆನ್ ಸಭಾಂಗಣದಲ್ಲಿ ವಸತಿ ಮತ್ತು ವಾಣಿಜ್ಯ ಭೂಮಿ ಅಭಿವೃದ್ಧಿಗಾಗಿ ಸಂಘಟಿಸಿರುವ ಅಂತರಾಷ್ಟ್ರೀಯ ಕ್ರೇಡೈ ಸಂಸ್ಥೆಯ ಕರ್ನಾಟಕ ರಾಜ್ಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. 

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ, ವಿಧಾನಸಭೆ ಸ್ಪೀಕರ್ ಯು.ಟಿ. ಕಾದರ, ಸಚಿವ ಈಶ್ವರ ಖಂಡ್ರೆ ಮುಂತಾದ ಗಣ್ಯರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಕ್ರೇಡೈ ನೂತನ ಅಧ್ಯಕ್ಷರಾದ ಶಾರದ ರೋಡಗಿ, ಕಾರ್ಯದರ್ಶಿ ವಿನಯ ರುನ್ವಾಲ್, ಜಂಟಿ ಕಾರ್ಯದರ್ಶಿ ಸಚಿನ್ ಎಸ್‌. ಬೊಂಬಲೆ, ಖಜಾಂಚಿ, ಅಂಕಿತ ಪರೇಖ್, ಸದಸ್ಯರಾದ ಅನಿಲ ಅವಳೆ, ಸೌರಭ್ ರುನ್ವಾಲ್ ಮುಂತಾದವರು ಪಾಲ್ಗೊಂಡಿದ್ದರು.  

ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ದಿಗಾಗಿ ವಿಜಯಪುರ ಜಿಲ್ಲಾ ಘಟಕದಿಂದ ಮುಂದೆ ಕೈಕೊಳ್ಳಬಹುದಾದ ಯೋಜನೆಗಳ ರೂಪರೇಷಗಳ ಕುರಿತು ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದು ಕ್ರೇಡೈ ಜಿಲ್ಲಾಧ್ಯಕ್ಷ  ಶಾರದಾ ರೋಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.