ಲೋಕದರ್ಶನ ವರದಿ
ಚಿಕ್ಕೋಡಿ 06: ಮಹಾ ಮಳೆ ಹಾಗೂ ವಿವಿಧ ಡ್ಯಾಂಗಳಿಂದ ಹರಿದು ಬರುವ ನೀರಿನಿಂದ ಗಡಿ ಭಾಗದ ನದಿಗಳಲ್ಲಿ ಪ್ರವಾಹ ಎದುರಾಗಿ ರೈತರು ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಮಾಂಜರಿ, ಯಡೂರ, ಹೊಸ ಯಡೂರ, ಇಂಗಳಿ ಗ್ರಾಮಗಳಲ್ಲಿ ಕೃಷ್ಣಾ ನದಿಯಲ್ಲಿ ಉಂಟಾದ ನೆರೆ ಪರಿಸ್ಥಿತಿಯನ್ನು ಅವಲೋಕಿಸಿ ಅವರು ಮಾತನಾಡಿದರು. ಇದೇ ರೀತಿ 2005ರಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿತ್ತು. ಈ ವರ್ಷವು ಕೂಡಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುವುದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಮಳೆಗಾಲದಲ್ಲಿ ಹರಿದು ಹೋಗುವ ನೀರಿನ್ನು ತಡೆದು ಮಡ್ಡಿ ಪ್ರದೇಶಗಳಿಗೆ ಹರಿಸುವ ಅನೇಕ ನೀರಾವರಿ ಯೋಜನೆ ಅನುಷ್ಠಾನ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಮುಖ್ಯಮಂತ್ರಿಗಳು ಸಕಾರಾತ್ಮಕ ಒಪ್ಪಿಗೆ ನೀಡಿದ್ದಾರೆ. ಬೇಸಿಗೆಯಲ್ಲಿ ಉಂಟಾಗುವ ಬರಗಾಲ ನಿವಾರಣೆಗೆ ಮಹಾರಾಷ್ಟ್ರದ ಜೊತೆ ಶಾಶ್ವತ ಒಪಂಧ ಮಾಡಿಕೊಳ್ಳುವುದಕ್ಕೆ ನಮ್ಮ ಸಕರ್ಾರ ಪ್ರಯತ್ನ ಮಾಡುತ್ತದೆ ಎಂದರು.
ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವದುರಿಂದ ಜಿಲ್ಲಾಡಳಿತ ಸಾಕಷ್ಟು ನೆರೆ ನಿರ್ವಹಣೆ ಮಾಡಲು ಪ್ರಯತ್ನ ಪಡುತ್ತಿದೆ. ನದಿ ಭಾಗದ ಜನರು ಸಹಕಾರ ನೀಡಬೇಕು. ದನಕರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ಡಾ|ಸಂತೋಷ ಬಿರಾದಾರ, ಡಿಕೆಎಸ್ಎಸ್ಕೆ ನಿದರ್ೇಶಕರಾದ ಅಜೀತ ದೇಸಾಯಿ, ಬಬನ ಬಿಲ್ವಾಡೆ, ಅಣ್ಣಾಸಾಹೇಬ ಯಾಧವ, ಅಮರ ಯಾಧವ, ಮಲ್ಲಪ್ಪ ಮೈಶಾಳೆ, ಬಾಳಗೌಡ ರೇಂದಾಳೆ, ಮೋಹನ ಲೋಕರೆ, ಶಂಕರ ಕೋರೆ, ಶಂಕರ ಪವಾರ, ಅಣ್ಣಾಸಾಹೇಬ ಚೌಗಲೆ, ಅಶೋಕ ಪಾಟೋಳೆ, ಅಶೋಖ ಡೋಣವಾಡೆ, ಗುಂಡಾ ಅಲಾಸೆ, ಅಜೀತ ಚಿಗರೆ, ಮನಜ ಕಿಚಡೆ, ಮಹಾವೀರ ಮಂಗಸೂಳೆ, ನರಸಗೌಡ ಪಾಟೀಲ, ಸಚೀನ ಪಾಟೀಲ ಮುಂತಾದವರು ಇದ್ದರು