ಪುಣೆಯಿಂದ ಗೋವಾಗೆ ಟೆಸ್ಟ್ ಕಿಟ್ ಗಳನ್ನು ಸಾಗಿಸಿದ ನೌಕಾಪಡೆಯ ವಿಮಾನ

ಪಣಜಿ, ಏ7,  ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನೌಕಾಪಡೆ ಸರ್ಕಾರದೊಂದಿಗೆ ಕೈಜೋಡಿಸಿದೆ. ದಕ್ಷಿಣ ಗೋವಾದ ಡಬೋಲಿಯಂನ ಐಎನ್ ಎಸ್ ಹಂಸದಿಂದ ನೌಕಾಪಡೆಯ ಡೋರ್ನಿಯರ್ ವಿಮಾನ ಪುಣೆಗೆ ಹಾರಾಟ ನಡೆಸಿ, ಅಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ(ಎನ್ ಐವಿ) ಡಾ.ದಿಲೀಪ್ ಹಿಂಗೆ ಅವರನ್ನು ಗೋವಾಗೆ ಕರೆತಂದಿದೆ.ಇದರೊಂದಿಗೆ ಅನೇಕ ಕೋವಿಡ್-19 ಪರೀಕ್ಷಾ ಕಿಟ್ ಗಳನ್ನು ಕೂಡ ಕರೆತರಲಾಗಿದೆ. ಡಾ.ಹಿಂಗೆ ಅವರು ಗೋವಾ ವೈದ್ಯಕೀಯ ಕಾಲೇಜಿನ ವೈರಾಲಜಿ ಪ್ರಯೋಗಾಲಯದ ಮೈಕ್ರೋ ಬಯೋಲಜಿಸ್ಟ್ ಗಳಿಗೆ ತರಬೇತಿ ನೀಡುವ ನಿರೀಕ್ಷೆಯಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.