ಭೂ ದಾಖಲೆ ಡಿಜಟಲೀಕರಣಕ್ಕೆ ಶಾಸಕರು ಚಾಲನೆ

MLAs drive for digitization of land records

ಭೂ ದಾಖಲೆ ಡಿಜಟಲೀಕರಣಕ್ಕೆ ಶಾಸಕರು ಚಾಲನೆ 

ಹೂವಿನಹಡಗಲಿ 16: ಪಟ್ಟಣದ ತಾಲೂಕು  ಕಚೇರಿ ಯಲ್ಲಿ ಭೂ ಸುರಕ್ಷಾ ಯೋಜನೆ ಹಾಗೂ ಭೂ ದಾಖಲೆಗಳ ಡಿಜಟಲೀಕರಣ ಬುಧವಾರ ದಾಖಲೆಯೊಂದನ್ನು ಸ್ಕ್ಯಾನ್ ಮಾಡುವ ಮೂಲಕ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.ನಂತರ  ಮಾತನಾಡಿ, ತಾಲ್ಲೂಕಿನ ಸಾರ್ವಜನಿಕರ ಹಳೆಯ ಆಸ್ತಿ, ಭೂ ದಾಖಲೆ, ಡಿಆರ್ ಪಟ್ಟಗಳು ಹಗೂ ಕೈ ಬರಹ ಪಹಣಿಗಳನ್ನು ಸ್ಕ್ಯಾನ್ ಮಾಡಿ. ಅನ್ ಲೈನ್ನಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು ಜತೆಗೆ ಜನರನ್ನು ಕಚೇರಿ ಗೆ ಅಲೆದಾಡುವ ಆಗೆ ಮಾಡಬೇಡಿ ಎಂದರು. ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ. ತಹಶಿಲ್ದಾರ ಸಂತೋಷ ಕುಮಾರ. ರಾಜ್ಯ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎ.ಕೊಟ್ರಗೌಡ .ಪರಶುರಾಮ ಇದ್ದರು.