ಸೌಜನ್ಯಗೆ ಕನರ್ಾಟಕ ನಾಟ್ಯ ಮಯೂರಿ ಪ್ರಶಸ್ತಿ ಪ್ರದಾನ


ಬಾಗಲಕೋಟೆ  ಃ ಭರತ ನಾಟ್ಯ ಕಲಾವಿದೆ, ಬಾಗಲಕೋಟೆಯ ಯುವ ಪ್ರತಿಭೆ ಸೌಜನ್ಯ ಮೋಹರೆ ಅವರಿಗೆ ಕನರ್ಾಟಕ ನಾಟ್ಯ ಮಯೂರಿ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಭಾರತ ರತ್ನ ಸರ್ ಎಂ. ವಿಶೆ್ವೀಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ಹಮ್ಮಿಕೊಂಡ ನೆಲ-ಜಲ-ಭಾಷೆ ಸಾಂಸ್ಕೃತಿಕ ಹಬ್ಬದಲ್ಲಿ ಕಾರ್ಯಕ್ರಮದಲ್ಲಿ ಸೌಜನ್ಯ ಮೋಹರೆ ಅವರು ಪ್ರದರ್ಶನ ನೀಡಿ ಗಮನ ಸೆಳೆದರಲ್ಲದೇ ಅವರ ಭರತ ನಾಟ್ಯ ಪ್ರತಿಭೆ ಗಮನಿಸಿ ಕನರ್ಾಟಕ ನಾಟ್ಯ ಮಯೂರಿ ಪ್ರಶಸ್ತಿಯನ್ನು ಸೌಜನ್ಯ ಅವರಿಗೆ ವಿಶ್ವ ಒಕ್ಕಲಿಗರ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮಿಗಳು, ವಿವಿಧ ಮಠಾಧೀಶರಾದ ಶ್ರೀ ಶಿವಾನಂದ ಶಿವಾಚಾ0ರ್ು ಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು,ಪಾಂಡೋಮಟ್ಟಿ,ದಾವಣಗೆರೆ ಜಿಲ್ಲೆ,

ಶ್ರೀ ಬಸವರಮಾನಂದ ಸ್ವಾಮಿಗಳು, ಶ್ರೀ ಕಲ್ಮೇಶ್ವರ ಸ್ವಾಮಿಗಳು, ಮಾಜಿ ಸಚಿವ ರಾಮಚಂದ್ರಗೌಡ, ಸಾಹಿತಿ ಕುಂ. ವೀರಭದ್ರಪ್ಪ, ಚಲನಚಿತ್ರ ಕಲಾವಿದೆ ಶ್ರೀಮತಿ ಮೀನಾ, ಡಿ.ವಿ. ಸೌಜನ್ಯ, ಶಾಸಕ ಟಿ. ರಘುಮೂತರ್ಿ, ಡಾ. ಶಮರ್ಾ ಸುರೇಶ, ಡಾ. ನೆ.ಲ. ನರೇಂದ್ರ ಬಾಬು ಅವರುಗಳು ನೀಡಿ

ಗೌರವಿಸಿದರು.