ಲೋಕದರ್ಶನ
ವರದಿ
ಬೆಳಗಾವಿ
30: ಬೆಳಗಾವಿಯ ಕೆ.ಎಲ್.ಇ
ಸ್ವಾಯತ್ತ ವಿಶ್ವವಿದ್ಯಾಲಯದ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯದ ಸ್ನಾತಕೋತ್ತರ
ಹಾಗೂ ಪದವಿ ವಿದ್ಯಾಥರ್ಿಗಳು ಇತ್ತೀಚೆಗೆ
ಮಹಾರಾಷ್ಟ್ರದ ನಾಗಪೂರದಲ್ಲಿ ನಡೆದ 40ನೇ ನ್ಯಾಷಿನಲ್ ಇಂಡಿಯನ್
ಸೊಸೈಟಿ ಆಫ್ ಪಿಡೋಡಾಂಟಿಕ್ ಆ್ಯಂಡ್
ಪ್ರಿವೇಂಟಿವ್ ಡೆಂಟಿಸ್ಟ್ರಿ ಸಮಾವೇಶದಲ್ಲಿ ಬೆಸ್ಟ್ ಸೈಂಟಿಫಿಕ್ ಪೇಪರ್ ಹಾಗೂ ಪೋಸ್ಟರ್ ಪ್ರಸ್ತೂತಿ
ಹಾಗೂ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಬಂಗಾರದ ಪದಕವನ್ನು ಪಡೆದಿದ್ದಾರೆ.
2ನೇ
ಸ್ನಾತಕೋತ್ತರ ಪದವಿ ವಿದ್ಯಾಥರ್ಿ
ಡಾ.ಗೌತಮ್ ಕಣಿ ಮಂಡಿಸಿದ "ಬಾಯಿ
ರೋಗಾಣುಗಳ ಮೇಲೆ ಗ್ರೀನ್ ಕಾಫಿ
ಮೌತ್ವಾಷ್ನಿಂದ ಆಗುವ ಪರಿಣಾಮಗಳು" ವಿಷಯ
ಆಧಾರಿತ ಸೈಂಟಿಫಿಕ್ ಪತ್ರಿಕೆಗೆ ಬೆಸ್ಟ್ ಸೈಂಟಿಫಿಕ್ ಪೇಪರ್ ಅವರ್ಾಡ್ ಲಭಿಸಿದೆ.
ಪ್ರಥಮ
ವರ್ಷದ ಸ್ನಾತಕೋತ್ತರ ವಿದ್ಯಾಥರ್ಿನಿ ಡಾ.ಸಂಜನ ಸೊನಾಟಿ
ಮಂಡಿಸಿದ "ವಿಶೇಷ ಮಕ್ಕಳ ಹಲ್ಲಿನ ಚಿಕೀತ್ಸೆಯ ಬಗ್ಗೆ ವೈದ್ಯರಿಂದ ತಿಳುವಳಿಕೆ" ವಿಷಯ ಆಧಾರಿತ ಮಂಡಿಸಿದ
ಪ್ರಬಂಧಕ್ಕೆ ಬೆಸ್ಟ್ ಸೈಂಟಿಫಿಕ್ ಪೇಪರ್ ಪ್ರಶಸ್ತಿ ಲಭಿಸಿದೆ.
ಪ್ರಥಮ
ವರ್ಷದ ಸ್ನಾತಕೋತ್ತರ ವಿದ್ಯಾಥರ್ಿ ರಿದ್ದಿಜೋಷಿ "ತೀವ್ರನಿಘಾ ಘಟಕದಲ್ಲಿರುವ ಮಕ್ಕಳ ಬಾಯಿ ಆರೋಗ್ಯದ ಬಗ್ಗೆ
ದಾದಿಯರ ತಿಳುವಳಿಕೆ" ಕುರಿತ ಮಂಡಿಸಿದ ಪ್ರಭಂದಕ್ಕೆ ಬೆಸ್ಟ್ ಸೈಂಟಿಫಿಕ್ ಪೇಪರ್ ಪ್ರಶಸ್ತಿ ದೊರೆತಿದೆ.
ಪದವಿ
ವಿದ್ಯಾಥರ್ಿನಿ ಡಾ.ಅರೋಷಿ ಅಗರವಾಲ
ಇವರು ರಾಷ್ಟ್ರಮಟ್ಟದಲ್ಲಿ ಪಿಡೊಡಾಂಟಿಕ್ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನ
ಪಡೆದಿದ್ದಾಕ್ಕಾಗಿ ಬಂಗಾರದ ಪದಕವನ್ನ ಪಡೆದಿದ್ದಾರೆ.
ಮಕ್ಕಳ
ದಂತಚಿಕೀತ್ಸಾ ವಿಭಾಗದ ಡಾ.ಶಿವಯೋಗಿ ಹೊಗಾರ,
ಡಾ.ಚಂದ್ರಶೇಕರ ಬಡಕರ, ಡಾ.ನೀರಜ್ ಗೋಖಲೆ
ಇವರುಗಳು ವಿದ್ಯಾಥರ್ಿಗಳಿಗೆ ಮಾರ್ಗದರ್ಶಕರಾಗಿದ್ದರು.
ಪ್ರಾಂಶುಪಾಲ
ಡಾ.ಅಲ್ಕಾ ಕಾಳೆ, ಉಪಪ್ರಾಂಶುಪಾಲ ಡಾ.ಅಂಜನ ಬಾಗೇವಾಡಿ
ಇವರುಗಳು ವಿದ್ಯಾಥರ್ಿಗಳ ಈ ಸಾಧನೆಗೆ ಮತ್ತು
ಮಾರ್ಗದರ್ಶಕರಿಗೆ ಅಭಿನಂದಿಸಿದ್ದಾರೆ.