ರಾಷ್ಟ್ರೀಯ ಮಹಿಳಾ ಕಿಸಾನ ದಿವಸ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 17:  ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಖಾನಾಪೂರ ಕೃಷಿ ಇಲಾಖೆಯ ಸಹಯೋಗದಲ್ಲಿ ಖಾನಾಪೂರ ತಾಲೂಕಿನ ಕೇರವಾಡ (ಗುಂಡೇನಟ್ಟಿ) ದಲ್ಲಿ ರಾಷ್ಟ್ರೀಯ ಮಹಿಳಾ ಕಿಸಾನ ದಿವಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

       ಗ್ರಾಮ ಪಂಚಾಯತ ಸದಸ್ಯೆ ಗೀತಾ ಬಾನಿ ಹಾಗೂ ಶಾರದಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರುಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಮಾತನಾಡಿ ಮಹಿಳೆಯರು ಕೃಷಿಯಲ್ಲಿ ಬಿತ್ತನೆಯಿಂದ ಫಸಲು ಒಕ್ಕಣೆವರೆಗೂ ವಿವಿಧ ಹಂತಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆಇಂತಹ ಮಹಿಳೆಯರು ಗುಂಪುಗಳ ಮೂಲಕ ಕೃಷಿಯಲ್ಲಿ ತಾವು ಬೆಳೆಯುವ ಫಸಲನ್ನು ನೇರವಾಗಿ ಮಾರಾಟ ಮಾಡದೇ ಅವುಗಳಿಗೆ ಮೌಲ್ಯವರ್ಧನೆ ಮಾಡುವುದರ ಮೂಲಕ ಕೃಷಿ ಆದಾಯವನ್ನು ಹಾಗೂ ಸ್ವಸಹಾಯ ಗುಂಪುಗಳ ಉತ್ಪನ್ನವನ್ನು ಹೆಚ್ಚಿಸಬೇಕಾಗಿರುವುದು ಅವಶ್ಯಕವಾಗಿದೆ ಎಂದರುವಿವಿಧ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾಗುವ ತರಬೇತಿಗಳನ್ನು ಕೃಷಿ ವಿಜ್ಞಾನ ಕೇಂದ್ರವು ನೀಡತ್ತ್ತದೆ ಎಂದು ಕೂಡಾ ಅವರು ತಿಳಿಸಿದರು.

       ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೈಫ್ ಸಂಸ್ಥೆಯ ನಿವೃತ್ತ ಸಂಯೋಜಕರಾದ

ಡಿ.ಕೆ.ಕುಲಕಣರ್ಿಯವರು, ಗುಂಪು ರಚನೆಯ ಪರಿಕಲ್ಪನೆ, ಉದ್ಧೇಶಗಳು, ಸಂಘದ ಮೂಲಕ ಕೈಗೊಳ್ಳಬಹುದಾದ ಆದಾಯ ಉತ್ಪನ್ನ ಚಟುವಟಿಕೆಗಳು, ಮಾರುಕಟ್ಟೆ ಹಾಗೂ ಸಮಸ್ಯೆಗಳ ನಿವಾರಣಾ ಕ್ರಮಗಳ ಕುರಿತು ವಿವಿಧ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಚಚರ್ೆ ನಡೆಸಿದರು ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು.

       ಗುಂಡೇನಟ್ಟಿ ಗ್ರಾಮದ ಸಿದ್ಧಾರೂಢ ಕೃಷಿಕರ ಸಂಘದ ಅಧ್ಯಕ್ಷ ಬಿ.ಬಿ. ಕಿಲಾರಿಯವರು ಸಾವಯವ ಕೃಷಿ ಮಹತ್ವ ತಿಳಿಸಿದರುಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಸ್. ಎಂ. ವಾರದ ಮಹಿಳಾ ಸಂಘದ ಸದಸ್ಯರು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಅಳವಡಿಸಿಕೊಂಡು ಆಥರ್ಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

       ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿದ ಜಂಜವಾಡ (ಏಉ) ಗ್ರಾಮದ ಸಾಧಕ ರೈತ ಮಹಿಳೆ ಮೀನಾಕ್ಷಿ ಮಾದಾರ ಹಾಗೂ ಸಿರಿ ಧಾನ್ಯಗಳ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಸಾಧನೆ ಮಾಡಿದ ಇಟಗಿ ಗ್ರಾಮದ ಭಾರತಿ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯಗಳ ಅಡುಗೆ ಸ್ಪಧರ್ೆಯನ್ನು ಆಯೋಜಿಸಲಾಗಿತ್ತು ಹಾಗೂ ಪ್ರಶಸ್ತಿ ನೀಡಲಾಯಿತು.

   ಮಹಿಳಾ ರೈತರನ್ನು ಪ್ರೋತ್ಸಾಹಿಸಲು ಅಕ್ಟೋಬರ 15 ರಂದು ರಾಷ್ಟ್ರೀಯ ಮಹಿಳಾ ಕಿಸಾನ್ ದಿವಸ ಆಚರಣೆಯನ್ನು ಎರಡು ವರ್ಷಗಳಿಂದ ಭಾರತದಲ್ಲಿ ಆಚರಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಮಂಜುನಾಥ ಕುಸಗಲ್ಲ ತಿಳಿಸಿದರು.