ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರ

ಲೋಕದರ್ಶನ ವರದಿ

ಬೈಲಹೊಂಗಲ 24:  ವಿದ್ಯಾರ್ಥಿಗಳು ಅಧ್ಯಯನ ಮಾಡಿ ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಗಣಾಚಾರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಡಾ. ಚಂದ್ರಶೇಖರ ಗಣಾಚಾರಿ ಹೇಳಿದರು. 

        ಅವರು ಪಟ್ಟಣದ  ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಈರಮ್ಮ ಗಣಾಚಾರಿ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಬರೆದ "ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ" ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ,       ಬಸವ ಸಮಿತಿಯಿಂದ ನೆರವೇರಿಸಿಕೊಂಡು ಬರುತ್ತಿರುವ "ಕಾಲೇಜಿನಿಂದ ಕಾಲೇಜಿಗೆ  ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ" ಕಾರ್ಯಕ್ರಮ ಜನಪ್ರಿಯವಾಗಿದ್ದು ಯುವಜನತೆಯನ್ನು ಉತ್ತಮ ಸಂಸ್ಕೃತಿಯ ಕಡೆಗೆ ತಿರುಗಿಸುವ ಪ್ರಾಮಾಣಿಕ ಪ್ರಯತ್ನವಾಗಿದ್ದು ಅರವಿಂದ ಜತ್ತಿ ಅವರ ಈ ಗ್ರಂಥ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು. 

      ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ, ಜೀವನದ ಅಮೂಲ್ಯ ಆಸ್ತಿಗಳಾದ ಆರೋಗ್ಯಯುತ ದೇಹ, ಮನಸ್ಸು ಹಾಗೂ ಅಪಾರ ಜ್ಞಾನ ಹೊಂದಿದರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ಬಸವ ಸಮಿತಿ ಕಾರ್ಯಕಾರಿ ಸದಸ್ಯ ಮೋಹನ ಬಸನಗೌಡ ಪಾಟೀಲ,    ಮಹಾಂತೇಶ ರಾಜಗೋಳಿ ಮಾತನಾಡಿದರು.

      ಮರಕುಂಬಿಯ ಬಿ.ಬಿ. ಗಣಾಚಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಂ ಅಂಬರಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು.

      ಉದ್ಯಮಿ ಸುಧಾಕರ ಶೆಟ್ಟಿ. ಪ್ರಾಚಾರ್ಯ ಎಸ್.ವಿ ಬಡಿಗೇರ, ಉಪನ್ಯಾಸಕರಾದ ಎಸ್. ಆರ್ ಕಲಹಾಳ, ಆರ್.ಎಸ್ ಇಂಗಳಗಿ, ವಿ.ಎಲ್ ಅಂಚಿ, ಜೆ.ಬಿ ಪೂಜೇರಿ ಉಪಸ್ಥಿತರಿದ್ದರು.

       ಸುಧಾ ಕೋಡಿ ನಿರೂಪಿದದರು. ಚೈತ್ರಾ ಗಾಡದ ಸ್ವಾಗತಿಸಿದರು. ಸವಿತಾ ಚಿಕ್ಕವೀರನ್ನವರ ವಂದಿಸಿದರು.