ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 19 : ಇಂದಿನ ತಂತ್ರಜ್ಞಾನ ಯುಗದಲ್ಲೂ ಸಹ ಪುಸ್ತಕಗಳಿಂದ ಸಿಗುವಷ್ಟು ಜ್ಞಾನ ಬೇರೆಯಾವ ಮೂಲಗಳಿಂದಲೂ ಸಿಗುವುದಿಲ್ಲ. ಆದ್ದರಿಂದ ಮಕ್ಕಳಾದಿಯಾಗಿ ಎಲ್ಲರೂ ಪುಸ್ತಕ, ನಿಯತಕಾಲಿಕೆಗಳು, ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿದರ್ೇಶಕರಾದ ರಾಮಯ್ಯ ಅವರು ಅಭಿಪ್ರಾಯಪಟ್ಟರು. ನಗರದ ಕೇಂದ್ರಗ್ರಂಥಾಲಯದ ವತಿಯಿಂದ ಪೊಲೀಸ್  ಹೆಡ್ಕ್ವಾರ್ಟರ್ಸ ಸೇವಾಕೇಂದ್ರ ಗ್ರಂಥಾಲಯದಲ್ಲಿ, ಪೊಲೀಸ್ ಹೆಟ್ಕ್ವಾರ್ಟರ್ಸ ಸರಕಾರಿ ಮಾದರಿಕನ್ನಡ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಆಚರಿಸಲಾದ 'ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ' ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಕನ್ನಡ- ಇಂಗ್ಲೀಷ್ ಶಾಲೆ ಎಂದು ಚಿಂತಿಸುತ್ತ ಕೂರದೇ, ಎಲ್ಲರೂ ಶಿಸ್ತಿನಿಂದ ಶ್ರಮಪಟ್ಟು ಓದಿದರೆ ಉನ್ನತ ಹುದ್ದೆಗೇರಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಗುರುಮಾತೆ ಶ್ರೀಮತಿ ಆರ್.ಡಿ.ಬೋಗಾರ ಇವರು ಮಾತನಾಡುತ್ತ ನಮ್ಮ ಶಾಲಾ ಆವರಣದಲ್ಲೇ ಬಂದಿರುವ ಗ್ರಂಥಾಲಯದ ಸದುಪಯೋಗವನ್ನು ಮಕ್ಕಳು ಯಾವ ರೀತಿಯಾಗಿ ಪಡೆದುಕೊಳ್ಳತ್ತಿದ್ದಾರೆ ಎಂಬುದನ್ನು ವಿವರಿಸಿ, ಸಂತೋಷ ವ್ಯಕ್ತಪಡಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಭಾಷಣ ಸ್ಪಧರ್ೆ, ನಿಬಂಧ ಬರಹ ಸ್ಪಧರ್ೆ, ಚಿತ್ರಕಲೆ ಮತ್ತುಇತರೆಆಟೋಟ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ, ಪುಸ್ತಕಗಳ ಜೊತೆಗೆ ಸಿಹಿಯನ್ನು ವಿತರಿಸಿ ಸನ್ಮಾನಿಸಲಾಯಿತು. ಮುದ್ದುಮಕ್ಕಳು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಮತ್ತು ನಗರ ಹಾಗೂ ಜಿಲ್ಲಾಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿಗಳಿಂದ ಶಾಲಾ ಆವರಣ ತುಂಬಿ ತುಳುಕುತ್ತಿತ್ತು.

ಪ್ರಕಾಶ ಇಚಲಕರಂಜಿ ಇವರು ಎಲ್ಲರನ್ನು ಸ್ವಾಗತಿಸುತ್ತ, ಶಾಲೆಯ - ಶಾಖೆಯ ಸಿಬ್ಬಂದಿಯ ಸಹಕಾರವನ್ನು ನೆನೆದರು, ಡಿ.ಎಚ್.ಜಮಾದಾರ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು. ಈ .ಎನ್. ಅಂಬೇಕರ ಆಭಾರ ಮನ್ನಿಸಿದರು. ಈ ಸಂದರ್ಭದಲ್ಲಿ ಸುಮಿತ ಕಾವಳೆ, ಜೊಡಳ್ಳಿ, ಅನ್ನಪೂರ್ಣ, ಸೀಮಿಮಠ, ಕಾಂಬಳೆ, ಸಂಗೋಳ್ಳಿ, ಎನ್.ವಾಯ್ ಪಾಟೀಳ ಸಹಿತಿ ನಗರ ಜಿಲ್ಲಾಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ, ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.ಈ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.