ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆ
ಬಿದರಕುಂದಿ 10: ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆರ್ ಬಿ ಎಸ್ ಕೆ ವೈದ್ಯರಾದ ಡಾ.ಭಾಗ್ಯಶ್ರೀ.ಬಿರಾದಾರ, ಒಂದರಿಂದ 19 ವರ್ಷದ ವಯೋಮಾನದ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಜಂತು ಹುಳು ನಿವಾರಣ ಮಾತ್ರೆಯನ್ನು ಸರಕಾರದ ಆದೇಶದಂತೆ ನೀಡಬೇಕಾಗಿದೆ ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿ ಆಗುವುದು ಎಂದರು ಶಾಲೆಯ ಮುಖ್ಯೋಪಾಧ್ಯರಾದ ಅನಿಲ್ ಕುಮಾರ್ ರಾಥೋಡ್, ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.