ಲೋಕದರ್ಶನ ವರದಿ
ಸಿರುಗುಪ್ಪ 08: ವೈಯಕ್ತಿಕ, ಸಾಮೂಹಿಕ ಚಟುವಟಿಕೆಗಳಲ್ಲಿ ಉನ್ನತಿ ಸಾಧಿಸಲು ಪ್ರಯತ್ನಿಸಿ ದೇಶದ ಪ್ರಗತಿಗಾಗಿ ಶ್ರಮಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಕೇಂದ್ರ ಕೌನ್ಸಿಲ್ ಸಾಕ್ಷರತಾ ಮಿಷನ್ ಪ್ರಾಧಿಕಾರ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ಅಭಿಪ್ರಾಯಪಟ್ಟರು.
ಕನರ್ಾಟಕ ಸಕರ್ಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಸ್ವಚ್ಛ ಭಾರತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಸ್ಮಿಲ್ಲಾ ವಿದ್ಯಾ ಸಂಸ್ಥೆ ಸಹಯೋಗದಿಂದ ಸಕರ್ಾರಿ ಹಿರಿಯ ಉದರ್ು ಪ್ರಾಥಮಿಕ ಶಾಲೆ,ಉದರ್ು ಪ್ರೌಢಶಾಲೆ, ಆವರಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ರಾಜ್ಯಾದ್ಯಂತ 1ರಿಂದಾ19 ವರ್ಷದ 2.5ಕೋಟಿ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ವಿತರಿಸಲಾಗುತ್ತಿದೆ.
ಜಂತುಹುಳು ಸಮಸ್ಯೆಯಿಂದ ಯಾವ ಮಕ್ಕಳು ಬಳಲಬಾರದು ಎಂಬ ಉದ್ದೆಶದಿಂದ ರಾಷ್ಟ್ರೀಯ ಆಯೋಗ ಅಭಿಯಾನದಡಿ ಕನರ್ಾಟಕದ 75ಸಾವಿರ ಖಾಸಗಿ ಶಾಲೆ, 65ಸಾವಿರ ಸರಕಾರಿ ಶಾಲೆಗಳಲ್ಲಿನ 1ರಿಂದಾ19ವರ್ಷದ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗುವುದು
ಶಾಲಾ ಮುಖ್ಯ ಗುರುಗಳಾದ ಸಾಹಿರಾಬೇಗಂ ಹಾಗೂ ಮಹಮ್ಮದ್ ಅಲಿ ಭಾಗವಾನ ಮಾತನಾಡಿ ಜಂತುಹುಳು ರಹಿತ ಮಕ್ಕಳು, ಆರೋಗ್ಯವಂತ ಮಕ್ಕಳು,ಜಂತು ಹುಳದಿಂದ ಮುಕ್ತಿ ಆರೋಗ್ಯವಂತ, ಭವಿಷ್ಯ ನಮ್ಮದು ಜಂತುಹುಳು ನಿವಾರಣೆ ಮಾತ್ರೆ ಸಂಪೂರ್ಣ ಸುರಕ್ಷಿತ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಿಕತೆ ಎಂದರು.ಮುಖ್ಯ ಶಿಕ್ಷಕ ಶಿಕ್ಷಕಿಯರಾದ ಯು.ಅಯ್ಯಪ್ಪ, ಜಿ.ಶಾಹಿನಾ,ಫಜ್ಲುನ್ನಿಸಾ ಬೇಗಂ, ರಾಫಿಯಾ ಬೇಗಂ, ರಿಹಾನಾ, ಗೌಸಿಯಾ, ಪವರ್ಿನ್ ಸುಲ್ತಾನ್, ಶಾಲಾ ಮಕ್ಕಳು ಮತ್ತಿತರರು ಭಾಗವಹಿಸಿದ್ದರು.