ನಾರಾಯಣ ಗುರಗಳು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ: ಆಚಾರ್

ಲೋಕದರ್ಶನ ವರದಿ

ಯಲಬುರ್ಗಾ 15: ಸಮಾಜದಲ್ಲಿ ಹುಟ್ಟಿದ ನಾರಾಯಣ ಗುರಗಳ ಜೀವನ ಹಾಗೂ ಅವರು ಆದರ್ಶಗಳು ಎಲ್ಲ ಜಾತಿ ಸಮುದಾಯಕ್ಕೂ ಮಾದರಿಯಾಗಿವೆ, ಅವರ ತತ್ವಾದರ್ಶಗಳಲ್ಲಿ ನಾವೆಲ್ಲರೂ ಸಾಗೋಣವೆಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

            ಪಟ್ಟಣದ ತಾಲೂಕಿನ ಈಡಿಗ ಸಮಾಜದ ವತಿಯಿಂದ ಹಮ್ಮಿಕೊಂಡ 164ನೇ ಬ್ರಹ್ಮ ನಾರಾಯಣ ಗುರುಗಳು ಭಾವಚಿತ್ರ ಮೆರವಣಿಗೆ  ಕಳಶದೊಂದಿಗೆ ಹಳೆ ಸಂತೆ ಬಜಾರ, ಟಿಪ್ಪು ಸುಲ್ತಾನ ವೃತ್ತ, ಕನಕದಾಸ,ಅಂಬೇಡ್ಕರ್, ಕ್ರಿಯಾ ಸಮಿತಿ, ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಬುದ್ದ ಬಸವ ಅಂಬೇಡ್ಕರ ಭವನದಲ್ಲಿ ತಲುಪಿತು ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

            ಈಡಿಗ ಸಮಾಜದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಡಾ,ರಾಜ್ ಕುಮಾರ್, ನೆಟ್ಟಕಲ್ಲಪ್ಪ, ಎಚ್,ಜಿ, ರಾಮುಲೂ, ಪಿ,ವೆಂಕಟಸ್ವಾಮಿ, ಇತರರು,ರಾಕೂಡಾಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮದೆ ಆದ ಸೇವೆ ಸಲ್ಲಿಸಿದ್ದಾರೆ ಈಡಿಗರ ಸಮಾದಯ ಅನಾಧಿ ಕಾಲದಿಂದಲೂ ಸಮಾಜದ ಅವಕೃಪೆಗೆ ಒಳಗಾಗುತ್ತಾ ಬಂದಿದೆ ಆದರೂ ನಮ್ಮ ಸಮುದಾಯದಲ್ಲಿ ಹುಟ್ಟೆದ ಮಾನವತಾವಾದಿ ನಾರಾಯಣ ಗುರುಗಳು ಎಲ್ಲಾ ಜಾತಿ ಸಮುದಾಯಗಳು ಅಭಿವೃದ್ಧಿಗಾಗಿ ಆ ಮೂಲಕ ದೇಶದಲ್ಲಿ ಜಾತಿ ಪದ್ಧತಿ ಹಾಗೂ ಕಂದಾಚಾರಗಳನ್ನು ನಿಮರ್ೂಲನೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು ಆದರೆ ನಾರಾಯಣ ಗುರುಗಳಿಗೆ ಜನ್ಮಕೊಟ್ಟ ಈಡಿಗರ ಸಮಾಜವು ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಅವಕೃಪೆಗೆ ಒಳಗಾಗಿರುವುದು ಶೋಚನೀಯ ಸಂಗತಿಯಾಗಿದೆ.

            ತಾಪಂ ಸದಸ್ಯರಾದ ಶರಣಪ್ಪ ಈಳಿಗರ್ ನಮ್ಮ ಸಮಾಜದರು ತಾಲೂಕಿನಲ್ಲಿ 5ರಿಂದ 6ಸಾವಿರ ಜನಸಂಖ್ಯೆ ಹೊಂದಿದ್ದು ತಾಲೂಕಿನಲ್ಲಿ ಸಮುದಾಯ ಭವನವನ್ನು ನಿಮರ್ಿಸಿಕೊಡಬೇಕು ನಮ್ಮ ಸಮಾಜ ಆಥರ್ಿಕವಾಗಿ ಹಿಂದೆ ಉಳಿದಿದ್ದು ಶೈಕ್ಷಣಿಕ,ರಾಜಕಿಯಾ,ಆಥರ್ಿಕವಾಗಿ ಮುಂದೆಬರಬೇಕು ಅಂದಾಗೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದರು ನಮ್ಮ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಿಕ್ಷಣವಂತರನ್ನಾಗಿ ಮಾಡಬೇಕು ಇದಕ್ಕಾಗಿ ಸಮಾಜ ಬಾಂಧವರೆಲ್ಲರೂ ಚಟುವಟಿಕಯಿಂದ ಕಾರ್ಯ ನಿರ್ವಹಿಸಲು ಮುಂದಾಗಬೇಕು ಹಾಗೂ   ಈಡಿಗ ಸಮಾಜವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಜೊತೆಗೆ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಬ್ರಹ್ಮ ನಾರಾಯಣ ಗುರಗಳ ಜಯಂತಿಯನ್ನು ಸರಕಾರಿ ಜಯೊಂತೋತ್ಸವ ಕಾರ್ಯಕ್ರಮವನ್ನಾಗಿ ಆಚರಿಸಲು ಶಾಸಕ ಹಾಲಪ್ಪ ಆಚಾರ್ ಮುಖಾಂತರ  ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಿಬೇಕು ಎಂದರು.

ಈ  ಸಂದರ್ಭದಲ್ಲಿ ಪೂಜ್ಯ ಮಹದೇವ ದೇವರು, ಬಿಜೆಪಿ ತಾಲೂಕಾದ್ಯಕ್ಷ ರತನ ದೇಸಾಯಿ ವಕ್ತಾರ ವೀರಣ್ಣ ಹುಬ್ಬಳ್ಳಿ,ಮುಖಂಡರಾದ ಬಸವಲಿಂಗಪ್ಪ ಭೂತೆ ಸಿ ಎಚ್ ಪೋಲಿಸ್ ಪಾಟೀಲ, ಎ ಜಿ ಭಾವಿಮನಿ, ಅಂದಾನಗೌಡ ಪೋಲಿಸ್ ಪಾಟೀಲ್, ಈಡಿಗ ಸಮಾಜದ ತಾಲೂಕಾಧ್ಯಕ್ಷ ರವೀಂದ್ರ ಈಳಗೇರ, ಮಹಾಂತೆಶ ಹಾನಗಲ್, ದೊಡ್ಡಯ್ಯ,ಪಪಂ ಮುಖ್ಯಾಧಿಕಾರಿ ನಾಗೇಶ, ರುದ್ರೇಶ್  ಹಾಗೂ ಇನ್ನೀತರರು ಹಾಜರಿದ್ದರು.