ನಾದ, ಧ್ವನಿ, ಅರಿವಿನ ಮೇಧಾವಿ ಕವಿ ಬೇಂದ್ರೆ: ಕುಲಕಣರ್ಿ

ಧಾರವಾಡ 27: 'ಶಬ್ದ (ಮಾತು), ಅಂಕಿ-ಸಂಖ್ಯೆ ಮತ್ತು ರೇಖಾಚಿತ್ರ ಕಲೆಗಳಲ್ಲಿ ವ್ಯಕ್ತವಾಗುವ ಸಂಕೇತಾರ್ಥಗಳನ್ನು ಗಮನವಿಟ್ಟು ಗುರುತಿಸಿ ಜೀವನದ ಸತ್ಯವನ್ನು ಅಥರ್ೈಸುವ ಕಲ್ಪನೆ, ಪ್ರತಿಭೆ ವರಕವಿ ಬೇಂದ್ರೆಯವರಲ್ಲಿ ಅಗಾಧವಾಗಿತ್ತು. 'ಕೇಳಿನಡೆ, ಕಂಡುನುಡಿ' ಎಂಬುದು ಅವರ ಅನುಭವಾತ್ಮಕ ಅಭಿವ್ಯಕ್ತಿಯ ಸೂತ್ರ.  ಅಂತೆಯೇ ಜೀವನ ಮತ್ತು ಕಲೆಯ ನಡುವಿನ ಮಾಮರ್ಿಕ ಸಂಬಂಧವನ್ನು ಸೂಚಿಸಬಲ್ಲ ನಾದ, ಅರ್ಥ, ಅರಿವಿನ ಕಾವ್ಯವನ್ನು ರಚಿಸಿದ ಮೇಧಾವಿ ಕವಿಯಾಗಿದ್ದಾರೆ' ಎಂದು ನಿವೃತ್ತ ವಿಜ್ಞಾನ ಶಿಕ್ಷಕಚಿತ್ರ ಕಲಾವಿದ ಸುರೇಶ ವೆಂ. ಕುಲಕಣರ್ಿ ಅಭಿಪ್ರಾಯಪಟ್ಟರು.

ಸಾಧನಕೇರಿಯ ಬೇಂದ್ರೆ ಭವನದಲ್ಲಿ ಅ. 26ರ ಸಂಜೆ ಜರುಗಿದ ವರಕವಿ ಬೇಂದ್ರೆಯವರ ಮೂವತ್ತೇಳನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ 'ಅಂಬಿಕಾತನಯದತ್ತರ ಜೀವನ-ಕಲೆ'ಯನ್ನು ಕುರಿತು ಮಾತನಾಡಿದ ಅವರು, 'ಚೈತನ್ಯದ ಪೂಜೆ ನಡದದ ನೋಡ ತಂಗೀ ಅಭಂಗದ ಭಂಗಿ' ಹಾಡನ್ನು ವಿಶ್ಲೇಷಿಸಿ ಶಬ್ದ, ನಾದ ಮತ್ತು  ಅರಿವು ಬೇಂದ್ರೆಯವರ ಕಾವ್ಯದಲ್ಲಿ ಬೆರೆತಿರುವುದನ್ನು ಉದಾಹರಿಸಿದರು. ಅವರು ಸಾಮಾನ್ಯ ರೇಖಾಚಿತ್ರಗಳಿಂದ ಕನ್ನಡ ಅಕ್ಷರಗಳನ್ನು ಧ್ವನಿಪೂರ್ಣವಾಗಿ ರಚಿಸಬಹುದೆಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. 

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಡಾ.ಶ್ಯಾಮಸುಂದರ ಬಿದರಕುಂದಿ 'ಅಂಬಿಕಾತನಯದತ್ತ'ರು ನಡೆಸಿದ 63 ವರ್ಷಗಳ ಕಾವ್ಯೋದ್ಯೋಗದ ಸಾರ್ಥಕತೆಯನ್ನು ಬಣ್ಣಿಸಿದರು. ಇದಕ್ಕೆ ಮೊದಲು ಗಾಯಕಿ ಡಾ. ಜ್ಯೋತಿಲಕ್ಷ್ಮೀ ರವಿ ಕೂಡ್ಲಗಿ ಸಹ ಗಾಯಕಿಯರಾಗಿ ಶಿಲ್ಪಾ ಹಿರೇಮಠ ಹಾಗೂ ಅನಿತಾ ಶೆಟ್ಟರ ಬೇಂದ್ರೆ ಭಾವಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ಹಾಮರ್ೊನಿಯಂದಲ್ಲಿ ಎಂ.ಆರ್.ಭಾವಾಖಾನವರ ಹಾಗೂ ತಬಲಾದಲ್ಲಿ ಕೃಷ್ಣ ಕೂಡ್ಲಗಿ ಸಾಥ ನೀಡಿದರು.  

ಟ್ರಸ್ಟ್ ಸದಸ್ಯ ಕಾರ್ಯದಶರ್ಿ ಕೆ.ಎಚ್.ಚೆನ್ನೂರ ಆರಂಭದಲ್ಲಿ ಸ್ವಾಗತಿಸಿ ಪರಿಚಯಿಸಿದರು. ಕಾರ್ಯಕ್ರಮ ನಿರೂಪಿಸಿದ ಪ್ರಕಾಶ ಬಾಳಿಕಾಯಿ ಆಭಾರ ಮನ್ನಿಸಿದರು. ಸಭೆಯಲ್ಲಿ ಡಾ.ಎಸ್.ಎಂ.ಶಿವಪ್ರಸಾದ, ಪ್ರೊ.ಎ.ಜಿ.ಸಬರದ, ಹ.ವೆಂ.ಕಾಖಂಡಕಿ, ಆನಂದ ಪಾಟೀಲ, ಅರವಿಂದ ಯಾಳಗಿ, ನರಸಿಂಹ ಪರಾಂಜಪೆ, ಹ.ಶಿ.ಭೈರನಟ್ಟಿ, ಲಕ್ಷ್ಮೀಕಾಂತ ಇಟ್ನಾಳ, ಅನಂತ ದೇಶಪಾಂಡೆ,  ಗೋವಿಂದ ಕುಲಕಣರ್ಿ, ಜಿ.ಬಿ.ಹೊಂಬಳ, ಜ್ಯೋತಿ, ಸಾವಿತ್ರಿ ಕಡಿ, ಮಂದಾಕಿನಿ ಪುರೋಹಿತ ಮುಂತಾದ ಬೇಂದ್ರೆ ಕಾವ್ಯಾಭಿಮಾನಿಗಳು ಉಪಸ್ಥಿತರಿದ್ದರು.