ಮೈಸೂರು ದಸರಾ ಕವಿಗೋಷ್ಠಿಗೆ ನಾಗೇಶ್ ನಾಯಕ

ಲೋಕದರ್ಶನ ವರದಿ

ಬೈಲಹೊಂಗಲ 10: ತಾಲೂಕಿನ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ ನಾಗೇಶ್ ಜೆ. ನಾಯಕ ಮೈಸೂರು ದಸರಾದಲ್ಲಿ ನಡೆಯುವ ಯುವ ಕವಿಗೋಷ್ಠಿಗೆ ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. 13. ಶನಿವಾರದಂದು 10-30 ಕ್ಕೆ ಮೈಸೂರಿನ ರಾಣಿ ಬಹಾದ್ದೂರ ಅಡಿಟೋರಿಯಮ್ನಲ್ಲಿ ಖ್ಯಾತ ಕವಯಿತ್ರಿ ಕೆ. ಷರೀಫಾ ಉದ್ಘಾಟಿಸಲಿರುವ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಲಿದ್ದಾರೆ. ನಾಗೇಶ್ ನಾಯಕ ಈಗಾಗಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರು ಉತ್ಸವ, ರನ್ನ ಉತ್ಸವ, ಹಂಪಿ ಉತ್ಸವ, ಬೀದರ ಉತ್ಸವ, ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚನ ಮಾಡಿ ಕಾವ್ಯ ಪ್ರತಿಭೆ ಮೆರೆದಿದ್ದಾರೆ.