ನಾಗೇಶ್ ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಬೈಲಹೊಂಗಲ 26: ತಾಲೂಕಿನ ಉಡಿಕೇರಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ ನಾಗೇಶ್ ಜೆ. ನಾಯಕಗೆ 2017ರ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬೆಳಗಾವಿಯ ಐಎಂಇಆರ್ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧಾರವಾಡದ ಖ್ಯಾತ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ ಅವರು ನಾಗೇಶ್ ನಾಯಕಗೆ 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗೇಶ್ ಸ್ಥಳೀಯ ದಿನಪತ್ರಿಕೆಗಳೇ ನನ್ನನ್ನು ಒಬ್ಬ ಅಂಕಣಕಾರನನ್ನಾಗಿಸಿದ್ದು, ಅದರ ಫಲವೇ ನಾನಿಂದು ರಾಜ್ಯದ ಪ್ರಮುಖ ಬರಹಗಾರನಾಗಿ ಗುರುತಿಸಿಕೊಂಡಿದ್ದೇನೆ ಎಂದರು. ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಲಾಯಿತು. ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಮ್. ಕುಲಕಣರ್ಿ, ಉಪಾಧ್ಯಕ್ಷೆ ರಂಜನಾ ನಾಯಕ, ಕಾರ್ಯದಶರ್ಿ ನೀರಜಾ ಗಣಾಚಾರಿ, ಸುಭಾಷ ಕುಲಕಣರ್ಿ, ವಾಮನ ಹುಯಿಲಗೋಳ ಉಪಸ್ಥಿತರಿದ್ದರು