ನಾಗನೂರ ಮೋರಾರ್ಜಿ ವಸತಿ ಶಾಲೆ ಉತ್ತಮ ಹೆಸರು : ಡಾ. ಸಾಲಿಗೌಡರ

ಲೋಕದರ್ಶನ ವರದಿ

ಮೂಡಲಗಿ 02: ಜನ ಪತ್ರಿನಿಧಿಗಳ ಸಹಕಾರದಿಂದ ನಾಗನೂರ ಮೋರಾಜರ್ಿ ವಸತಿ ಶಾಲೆ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿ ಹೆಸರುವಾಸಿಯಾಗಿದರಿಂದ ವಿದ್ಯಾಥರ್ಿಗಳ ಆಯ್ಕೆಯಲ್ಲಿ ಬಹಳ ಬೇಡಿಕೆಯಾಗಿದೆ ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ: ಉಮಾ ಸಾಲಿಗೌಡರ ಹೇಳಿದರು. 

 ಶುಕ್ರವಾರ ತಾಲೂಕಿನ ನಾಗನೂರ ಮೋರಾಜರ್ಿ ದೇಸಾಯಿ ವಸತಿ ಶಾಲೆಯ ಪ್ರಸಕ್ತ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಶಿಕ್ಷಣ, ವಾತಾವರಣದಿಂದ ಕೂಡಿರುವ ನಾಗನೂರ ವಸತಿ ಶಾಲೆಗೆ ಪ್ರಥಮ ಸುತ್ತಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಭತರ್ಿಯಾಗಿ ನಾಲ್ಕೈದು ಸುತ್ತಿನ ಆಯ್ಕೆ ಮುಗಿದರು ಸಹ ವರ್ಷವಿಡಿ  ಜನ ಪತ್ರಿನಿಧಿಗಳಿಂದ, ಸಂಘಟನೆಗಳಿಂದ, ಪಾಲಕರಿಂದ ಬೇಡಿಕೆ ಬರುತ್ತಿದೆ ಎಂದರು.  

ಜಿಲ್ಲೆಯಲ್ಲಿ 54 ವಸತಿ ಶಾಲೆಗಳು ಇದರು ಇನ್ನೂ ಬೇಡಿಕೆ ಇದ್ದು, ಎಷ್ಟೆ ಒತ್ತಡ ಬಂದರು ಸಹ ವಿದ್ಯಾಥರ್ಿಗಳ ಹಿತದೃಷ್ಠಿಯಿಂದ ಪ್ರತಿ ಶಾಲೆಗಳಿಗೆ 50 ವಿದ್ಯಾಥರ್ಿಗಳಿಗೆ ಮಾತ್ರ ಸಿಮೀತಗೋಳಿಸಲಾಗಿದೆ ಎಂದರು. 

  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸದಾಶಿವ ಬಡಿಗೇರ ಮಾತನಾಡಿ,  ರಾಜ್ಯದ 10 ಅತ್ಯುನ್ನತ ವಸತಿ ಶಾಲೆಗಳಲ್ಲಿ 7 ವಸತಿ ಶಾಲೆಗಳು ಬೆಳಗಾವಿ ಜಿಲ್ಲೆಯಗಳಾಗಿದು, ವಿದ್ಯಾಥರ್ಿಗಳು ನಿಮ್ಮ ಶಿಕ್ಷಕರನ್ನು ಸ್ಪೂತರ್ಿಯಾಗಿಸಿಕೊಂಡು ವಿದ್ಯಾರ್ಜನೆ ಮಾಡಿದರೆ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಎಂದ ಅವರು ಒಳ್ಳೆಯ ಕೆಲಸ ಮಾಡಲಿಕ್ಕೆ ದೃಡ ನಿಧರ್ಾರ ಬಹಳ ಮಹತ್ವವಾದದು ಎಂದರು. 

ನಾಗನೂರಿನ  ಕೆ.ಎ.ಎಸ್ ಅಧಿಕಾರಿಯಾಗಿ ಆಯ್ಕೆಯಾದ ಭರತೇಶ ಸಗರೆ ಮಾತನಾಡಿ, ಜೀವನದಲ್ಲಿ ಸಾಧನೆಯ ಗುರಿ ಮುಟ್ಟಲು  ಶೃಧೆ, ಕಠಿಣ ಪರಿಶ್ರಮದಿಂದ ಅಭ್ಯಸಿಸಿದರೆ ಮಾತ್ರ ಸಾಧ್ಯ ಎಷ್ಟೆ ಕಷ್ಟ ಬಂದರು ಸಾಧನೆಯಿಂದ ಹಿಂದೆ ಸರಿಯದೇ ಸಾಧಕರ ನುಡಿಗಳನ್ನು ಕೇಳಿ ಧೈರ್ಯದಿಂದ ಮುನ್ನುಗಬೇಕೆಂದರು.

ಮೂಡಲಗಿ ವಲಯದ ಬಿಇಒ ಅಜೀತ ಮನ್ನಿಕೇರಿ, ನಾಗನೂರ ಮುಖಂಡರಾದ ಪರಸಪ್ಪ ಬಬಲಿ ಮತ್ತು ವಾಯ್.ಆರ್.ಕರಬನ್ನವರ ಮಾತನಾಡಿದರು. 

   ವೇದಿಕೆಯಲ್ಲಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಗೋಕಾಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೆಶಕ ಎಸ್.ವಿ.ಕಾಡಪ್ಪನ್ನವರ, ಎಸ್.ಎಮ್.ಗೋಕಾಕ, ಮಾರುತಿ ಕರಬನ್ನವರ, ಶಂಕರ ದಳವಾಯಿ, ದುಂಡಪ್ಪ ಮುನ್ಯಾಳ, ದುಂಡಪ್ಪ ಪಡದಲ್ಲಿ, ಶಿವಾಜಿ ಯಡ್ರಾಂವಿ, ಗಂಗವ್ವಾ ಪೂಜೆರಿ, ಭಿಮನಗೌಡ ಹೊಸಮನಿ, ದುಂಡಪ್ಪ ನಂದಗಾವ, ಸಿದ್ದಪ್ಪ ಗೋಟೂರ, ಭಿಮಪ್ಪ ಗೌರೋಜಿ, ಮುತ್ತಪ್ಪ ಖಾನಪ್ಪಗೋಳ ಹಾಗೂ ವಿವಿಧ ಮೋರಾಜರ್ಿ ಶಾಲೆಯ ಮುಖ್ಯಸ್ಥರು ಇದ್ದರು. 

    ಇದೇ ವೇಳೆಯಲ್ಲಿ ಕ್ರೀಡೆ ಮತ್ತು ವಿವಿಧ ಸ್ಪಧರ್ೆಯ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಣೆ  ಹಾಗೂ ವಿಶೇಷ ಸಾಧನೆಗೈದ ಶಿಕ್ಷಕರನ್ನು ಮತ್ತು ವಿದ್ಯಾಥರ್ಿಗಳನ್ನು ಸತ್ಕರಿಸಿ ಗೌರವಿಸಲಾಯಿತು.  ನಂತರ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

  ಶಾಲೆಯ ಪ್ರಾಂಶುಪಾಲ ಕೆ.ಎಸ್.ಮಾರಾಪೂರ ಸ್ವಾಗತಿಸಿದರು, ಆರ್.ಎಸ್.ಮರಿನಾಯಿಕ ಮತ್ತು ವಿ.ವಿ.ಮಾಲಾಮರಡಿ ನಿರುಪಿಸಿದರು. ನಿಲಯಪಾಲಕ ಆರ್.ಎಮ್.ನಧಾಫ್ ವಂದಿಸಿದರು.