ಲೋಕದರ್ಶನ ವರದಿ
ಗೋಕಾಕ, 8: ನಧಾಫ್ ಪಿಂಜಾರ ಸಮುದಾಯ ಶೈಕ್ಷಣಿಕ, ಆಥರ್ಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶೈಕ್ಷಣಿಕ, ಆಥರ್ಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ತರಲು ಶ್ರಮಿಸಬೇಕೆಂದು ಕನರ್ಾಟಕ ರಾಜ್ಯ ನಧಾಫ್ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಮ್ ಎಮ್ ನದಾಫ್ ಹೇಳಿದರು.
ಅವರು, ನಗರದ ಬ್ಯಾಳಿ ಕಾಟಾದಲ್ಲಿರುವ ಸಮಾಜದ ಕಾಯರ್ಾಲಯದಲ್ಲಿ ಜರುಗಿದ ನಧಾಫ್ ಪಿಂಜಾರ ಸಮಾಜದ ಸೌಹಾರ್ದ ಸಭೆಯನ್ನುದ್ಧೇಶಿಸಿ ಮಾತನಾಡಿ, ನಧಾಫ್ ಪಿಂಜಾರ ಸಮುದಾಯವು ಎಲ್ಲ ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ಸನಮಾಜ ಬಾಂಧವರು ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದರು.
ಅಲ್ಪ ಸಂಖ್ಯಾತರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನದಾಫ್ ಸಮುದಾಯದ ಜನರಿದ್ದರೂ ಸಹ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ ಎಂದು ಪರಿಗಣಿಸಲ್ಪಡುತ್ತಿದೆ. ದೇಶದ ಉದ್ದಗಲಕ್ಕೂ ನದಾಫ್, ಪಿಂಜಾರ, ಪಿಂಜಾರಿ, ದೊದೆಕೊಲ, ಲದಾಫ್ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕಿದೆ ಎಂದರು.
ನಮ್ಮ ಸಮಾಜಕ್ಕಾಗಿ ಹಗಲಿರುಳು ಶ್ರಮಿಸಿದ ದಿ. ಎಚ್ ಇಬ್ರಾಹಿಂಸಾಬ ಅವರ ಉತ್ತಮ ನಾಯಕತ್ವದಿಂದ ನಮಗೆ ಮಿಸಲಾತಿಯಲ್ಲಿ ಪ್ರವರ್ಗ -1 ದೊರಕಿದೆ. ಸಮಾಜಕ್ಕಾಗಿ ಅವರ ಪರಿಶ್ರಮ ಹೋರಾಟ ಇಂದು ನೆನೆಪಿಸಿಕೊಳ್ಳುವ ಅವಶ್ಯಕವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಧಾಫ್ ಪಿಂಜಾರ ಸಂಘದ ತಾಲೂಕಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ನಧಾಫ್ ಪಿಂಜಾರ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಪಿ ಜಿ ನದಾಫ್, ರಾಜ್ಯ ಪದಾಧಿಕಾರಿಗಳಾದ ಎಮ್ ಎಚ್ ನದಾಫ, ಎಫ್ ಡಿ ಹಳಮನಿ, ನಧಾಫ್ ಪಿಂಜಾರ ಸಂಘದ ತಾಲೂಕಾಧ್ಯಕ್ಷ ಮೀರಾಸಾಬ ನದಾಫ್, ಉಪಾಧ್ಯಕ್ಷ ಗಜಬರಸಾಬ ನದಾಫ್, ಮುಸ್ತಾಕ ನದಾಫ್, ಯೂನುಸ್ ನದಾಫ್, ಖಾಲೀದ ಶೇಖ, ಇಕ್ಬಾಲ ನದಾಫ, ಮಹ್ಮದಲಿ ನದಾಫ್, ಹುಸೇನಸಾಬ ನದಾಫ, ಮಲ್ಲಿಕಜಾನ ನದಾಫ, ಅಬ್ಬಾಸಲಿ ನದಾಫ್, ಮುಕಬಾಲ್ ನದಾಫ್, ದಸ್ತಗೀರ ನದಾಫ, ಇಬ್ರಾಹಿಂ ನದಾಫ್, ಮಲ್ಲಿಕ ನದಾಫ್, ಸೋಹೆಲ್ ನದಾಫ್ ಸೇರಿದಂತೆ ನಧಾಫ್ ಪಿಂಜಾರ ಸಮುದಾಯದ ಬಾಂಧವರು ಇದ್ದರು.