ಲೋಕದರ್ಶನ ವರದಿ
ಬೆಳಗಾವಿ,7: ನಗರದ ಸದಾಶಿವ ನಗರದ ಡಾ. ಅಂಬೇಡ್ಕರ ಭವನದಲ್ಲಿ ಜರುಗಿದ ಚಲವಾದಿ ಮಹಾಸಭಾ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದವರು ಈ ದೇಶದಲ್ಲಿ ಹಿಂದುಳಿದ ದಲಿತ ಹಾಗೂ ಅಲ್ಪ ಸಂಖ್ಯಾತರು ಜನರ ಏಳ್ಗಿಗೆಗಾಗಿ ನಾನು ಅಧಿಕಾರದಲ್ಲಿದ್ದಾಗ ಹಾಗೂ ಅಧಿಕಾರದಲ್ಲಿ ಇಲ್ಲದೆ ಇದ್ದಾಗ ನನ್ನ ಸಮಾಜ ಸೇವೆಯನ್ನು ದೇವರ ಸೇವೆಕ್ಕಿಂತ ಹೆಚ್ಚಾಗಿ ಮಾಡಿದ್ದೇನೆ.
ಬಡ್ತಿ ಮೀಸಲಾತಿಯಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಬಡ್ತಿ ಆಗಿಲ್ಲ. ಆದರೆ ಕನರ್ಾಟಕ ರಾಜ್ಯದಲ್ಲಿ ನಾನು ಸಚಿವನಾಗಿದ್ದಾಗ ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಕಳೆದ 2017ರ ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಪರಿಣಾಮಕಾರಿ ಮೀಸಲಾತಿಯನ್ನು ಸದನದಲ್ಲಿ ಜಾರಿಗೆ ತಂದಿದ್ದೇನೆ. ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡುವ ಕನಸು ಹೊತ್ತು ನಡೆದಿದ್ದೇನೆ ಎಂದೆಂದಿಗೂ ನನ್ನ ಸಮಾಜದ ಸೇವೆಯನ್ನು ನನ್ನ ಜೀವ ಇರುವವರೆಗೂ ಮಾಡುತ್ತೇನೆ ಎಂದು ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಸಮಾಜದ ಒಳ್ಳೆಯದಕ್ಕಾಗಿ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಐ.ಎಸ್. ಅಧಿಕಾರಿ ಸಿದ್ಧಯ್ಯ ಮಾತನಾಡಿ ಬರುವಂತಹ ದಿನಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಒಂದಾಗಿ ತಮ್ಮ ಸಮಾಜದ ಚಳುವಳಿಯನ್ನು ಯಾವ ರೀತಿಯಲ್ಲಿ ನಡೆಯಬೇಕು ಮತ್ತು ಬರುವಂತಹ ದಿನಗಳಲ್ಲಿ ಬೆಳಗಾವಿ ಮತ್ತು ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡಿ ದೊಡ್ಡ ಸಮಾವೇಶ ಮಾಡಿ ಸರಕಾರ ಕಣ್ಣು ತೆರೆಯುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಎಚ್.ಕೆ. ಬಸವರಾಜು ಸಿ.ಎಮ್.ಎಸ್. ರಾಜ್ಯಾಧ್ಯಕ್ಷ ಕುಮಾರ ಸಿ.ಎಮ್.ಎಸ್. ರಾಜ್ಯ ಕಾರ್ಯದಶರ್ಿ ಜಿಲ್ಲಾ ಪದಾಧಿಕಾರಿಗಳಾದ ಕೆ.ಡಿ. ಮಂತ್ರೇಶಿ, ಸುರೇಶ ತಳವಾರ, ಮಹಾವೀರ ಮೊಹೀತೆ, ದುಗರ್ೆಶ ಮೇತ್ರಿ, ಅಶೋಕ ಅಸೋಧೆ, ದುಗರ್ೆಶ ದೇವರಮನಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಲ್ಲೇಶ ಚೌಗಲೆ ವಂದನಾರ್ಪಣೆಯನ್ನು ನೆರವೇರಿಸಿದರು.