ವೃದ್ಧಾಶ್ರಮ ರಹಿತ ಸಮಾಜವೇ ನನ್ನ ಗುರಿ : ಎಂ.ಎಸ್.ತೆಗ್ಗಿನಮಠ

ಲೋಕದರ್ಶನ ವರದಿ

ಮಹಾಲಿಂಗಪುರ 17:ಇಂದಿನ ವೈಜ್ಞಾನಿಕ ಯುಗದಲ್ಲಿ ಸಂಬಂಧಗಳನ್ನು ಅದರಲ್ಲಿಯೂ ತಂದೆ-ತಾಯಿಯರ ಮಹತ್ವವನ್ನು ಮರೆತು , ಸಂಸ್ಕಾರವನ್ನು ತೊರೆದು  ಬದುಕುತ್ತಿದ್ದಾರೆ. ಇದು ನಮ್ಮ ದೇಶದ ದೊಡ್ಡ ದೌಭರ್ಾಗ್ಯ ಎಂದು ಭಾರತೀಯ ತೋಟಗಾರಿಕಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಸಂಗಮ್ಮ ಹೇಳಿದರು.

ಅವರು ಸಮೀಪದ ರನ್ನಬೆಳಗಲಿಯ ತೆಗ್ಗಿನಮಠ ಜ್ಞಾನ ಗುರುಕುಲ ಹಮ್ಮಿಕೊಂಡಿದ್ದ ಗುರುಕುಲ ಸಂಭ್ರಮ -2019 ರ  ತಾಯಂದಿರ ಹಬ್ಬ ಕಾರ್ಯಕ್ರಮದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡುತ್ತಿದ್ದರು.

ತಾಯಂದಿರ ಹಬ್ಬ : ಜ್ಞಾನ ಗುರುಕಲವು ಕಳೆದ ಆರು ವರ್ಷಗಳಿಂದ  ಪ್ರತೀ ವರ್ಷ ತನ್ನ ಗುರುಕುಲ ಸಂಭ್ರಮದ ಕಾರ್ಯಕ್ರಮದಲ್ಲಿ ತಾಯಂದಿರ ಹಬ್ಬವನ್ನು ಆಚರಿಸುತ್ತಾ ಬರುತ್ತಿದೆ. ಅದರಂತೆ  ಈ ವರ್ಷವೂ ಸಹ ಗುರುಕುಲದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಹತ್ತನೇ ತರಗತಿಯ ವಿದ್ಯಾಥರ್ಿಗಳ ಎಲ್ಲಾ ತಾಯಂದಿರನ್ನೂ ವೇದಿಕೆಯ ಮೇಲೆ ಕೂಡಿಸಿ, ಅವರ ಮಕ್ಕಳಿಂದ ಪಾದಪೂಜೆ ಮಾಡಿಸಿ, ಮಕ್ಕಳಿಂದಲೇ ತಾಯಂದಿರ ಮೇಲೆ ಪುಷ್ಪವೃಷ್ಠಿ ಮಾಡಿಸಲಾಯಿತು. ಪಾದ ಪೂಜೆ ಮತ್ತು ಪುಷ್ಪವೃಷ್ಠಿಯ ಸಮಯದಲ್ಲಿ ಮಕ್ಕಳಿಗೆ ತಾಯಿಯ ಮಹತ್ವ ಸಾರುವ ಹಲವಾರು ಹಾಡುಗಳನ್ನು ಹಾಡಿ, ತಾಯಿಯ ಮಹತ್ವ ಮತ್ತು ಅವರ ಅವಿರತ ದುಡಿಮೆ, ತ್ಯಾಗ, ಸಾಟಿಯಿಲ್ಲದ ಅವರ ಸ್ಥಾನ ಮಾನಗಳ ಬಗ್ಗೆ ಅರಿವು ಮೂಡಿಸಲಾಯಿತು, ಆಗ ನೆರೆದ ತಾಯಂದಿರು, ಪಾಲಕರು, ಮಕ್ಕಳು ಎಲ್ಲರೂ ಇಡೀ ಸಭಾಂಗಣವೇ ಗದ್ಗದಿತರಾಗಿ, ಭಾವುಕರಾಗಿ ಕಣ್ಣೀರು ಹಾಕಿದರು. ಆ ಕ್ಷಣ ಇಡೀ ಆವರಣ ಪ್ರತಿ ಮನಗಳಲ್ಲಿಯೂ ಮಾತೃ ಭಕ್ತಿ ಆವರಿಸಿ ಮಾತೃ ಭಕ್ತಿಯ ಭಾವದಲ್ಲಿ ಲೀನವಾಗಿತ್ತು. ನಂತರ ವೇದಿಕೆಯ ಮೇಲಿದ್ದ ಕೆಲವು ತಾಯಂದಿರು ಪ್ರತೀ ದಿನ ನಮ್ಮ ಮಕ್ಕಳು ಶಾಲೆಗೆ ಬರುವಾಗ ನಮ್ಮ ಪಾದಗಳಿಗೆ ನಮಸ್ಕರಿಸಿ ಬರುತ್ತಿದ್ದಾರೆ, ಇಂಥಾ ಸಂಸ್ಕಾರಯುತ ಶಿಕ್ಷಣವನ್ನು ತಮ್ಮ ಮಕ್ಕಳು  ಪಡೆಯುತ್ತಿರವುದು ನಮ್ಮ ಭಾಗ್ಯ, ಇದು ನಮಗೆಲ್ಲಾ ತೃಪ್ತಿ ನೀಡಿದೆ ಹಾಗೂ ಇಂತಹ ಶಿಕ್ಷಣ ನೀಡುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ , ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನೆರೆದ ತಾಯಂದಿರು ಹೃದಯ ತುಂಬಿ ಹಾರೈಸಿದರು. ನಂತರ ಸಂಸ್ಥೆಯ ವತಿಯಿಂದ ಎಲ್ಲಾ ತಾಯಂದಿರಿಗೂ ಬಾಗೀನ ಅಪರ್ಿಸಲಾಯಿತು. ನೆರೆದವರೆಲ್ಲಾ ಸಂಸ್ಥೆಯ ಸಂಸ್ಕಾರಯುತ ಶಿಕ್ಷಣವನ್ನು ಮನದುಂಬಿ ಕೊಂಡಾಡಿದರು.

ವೃದ್ಧಾಶ್ರಮ ರಹಿತ ಸಮಾಜ ನಿಮರ್ಾಣಕ್ಕೆ ಬದ್ಧರಾಗಿ : ಕಾರ್ಯಕ್ರಮ ಆಯೋಜಿಸಿದ್ದ ಸಂಸ್ಥೆಯ ಸಂಸ್ಥಾಪಕ ತೆಗ್ಗಿನಮಠ ಮಾತನಾಡಿ ಇಂದು ಸಾಕಷ್ಟು ಉನ್ನತ ಹುದ್ದೆ, ಅಧಿಕಾರ, ಹಣ, ಅಂತಸ್ತುಗಳಿದ್ದರೂ ಇಳಿ ವಯಸ್ಸಿನ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಹೀನ ಸಂಸ್ಕೃತಿಗೆ ಇಂದು ಸಮಾಜ ಬಲಿಯಾಗುತ್ತಿರುವುದು ದುರಂತ . ಇದು ನಮ್ಮ ಸಂಸ್ಕೃತಿಯ ಅವನತಿಯ ದ್ಯೋತಕ ಆದ್ದರಿಂದ ನಿಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ, ಜಗತ್ತಿನಲ್ಲಿ ಏನು ಕಳೆದುಕೊಂದರೂ ಮತ್ತೆ ಪಡೆಯಬಹುದು ಆದರೆ ಹೆತ್ತವರನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಇಂದಿನ ಮಕ್ಕಳಿಗೆ ಇಂತಹ ತಿಳುವಳಿಕೆಯ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ಹೆತ್ತವರನ್ನು ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುವ ಅವಶ್ಯಕತೆಯಿದೆ ಎಂದು ಹೇಳಿ ಪ್ರತಿಜ್ಞೆ ಮಾಡಿಸಿ.  ವೃದ್ಧಾಶ್ರಮ ರಹಿತ ಸಮಾಜ ನಿಮರ್ಾಣಕ್ಕೆ ಬದ್ಧರಾಗಿ ಸಹಕರಿಸಲು ಕೋರಿದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುದ್ದೇಬಿಹಾಳದ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ನೀಲಮ್ಮ ತೆಗ್ಗಿನಮಠ ಮಾತನಾಡಿ ನಾನು ಈ ಕಾರ್ಯಕ್ರಮಕ್ಕೆ ಬರುವಾಗ ಬಹಳಷ್ಟು ಮಾತನಾಡಲು ಸಿದ್ಧತೆ ಮಾಡಿಕೊಂಡು ಬಂದಿದ್ದೆ ಆದರೆ ಈ ಕಾರ್ಯಕ್ರಮ ಮಾತುಗಳ ಅವಶ್ಯಕತೆಯೇ ಇಲ್ಲದಷ್ಟು ಪರಿಪೂರ್ಣವಾಗಿ ನೆರವೇರಿತು ಎಂದು ಶ್ಲಾಘಿಸಿ ಇಂದಿನ ಮಕ್ಕಳು ಮೊಬೈಲ್ ಸಂಸ್ಕೃತಿಗೆ ಬಲಿಯಾಗಿದ್ದು, ಬದುಕನ್ನು ದುರಂತಮಯವಾಗಿಸಿಕೊಂಡಿದ್ದಾರೆ. ಈ ದುರಂತದಿಂದ ಹೊರಬಂದು ಹೆತ್ತವರರನ್ನು ಗೌರವಿಸುತ್ತ್ತಾ ಅವರ ಪ್ರೀತಿ, ಆಶೀವರ್ಾದ ಗಳಿಸಬೇಕಾಗಿದೆ ಏಕೆಂದರೆ ತಂದೆ ತಾಯಿಯರ ಆಶೀವರ್ಾದದಿಂದ ಜಗತ್ತನ್ನು ಗೆಲ್ಲಲು ಸಾಧ್ಯ. ಹೆತ್ತವರ ಮನ ನೋಯಿಸಿ ಉದ್ಧಾರವಾಗಲು ಸಾಧ್ಯವಿಲ್ಲ. ನೀವು ವೃದ್ಧಾಶ್ರಮ ಸೇರಬಾರದೆಂದಾದರೆ ನಿಮ್ಮ ಹೆತ್ತವರನ್ನು ಪ್ರೀತಿ, ಭಕ್ತಿಯಿಂದ ನೋಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುರುಕುಲ ಮಕ್ಕಳ ಸ್ವರಚಿತ ಕವನ ಝರಿ, ರಂಗೋಲಿ ಗುಚ್ಛ ಚಿತ್ರಕಲಾ ಪುಷ್ಪ ಕೈಪಿಡಿ ಬಿಡುಗಡೆಯಾದವು. ನಮ್ಮ ಮಕ್ಕಳು ನಮ್ಮ ಪ್ರತಿಭೆ ಕಾರ್ಯಕ್ರಮ ಶೈಕ್ಷಣಿಕ ಸಾಧನೆಗೈದ ಮಕ್ಕಳಿಗೆ ಮತ್ತು ಸಂಭ್ರಮ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡೆಗಳಲ್ಲಿ ವಿಜಯಿಯಾದ ಪಾಲಕರಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಿತು. ಡೊಳ್ಳು ಕುಣಿತದೊಂದಿಗೆ ಸತ್ಕಾರ : ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಗುರುಕುಲದ ಮಕ್ಕಳು ಹಾಗೂ ಶಿಕ್ಷಕರೇ ಡೊಳ್ಳು ಕುಣಿತ ಕುಣಿಯುವುದರೊಂದಿಗೆ ಬರಮಾಡಿಕೊಳ್ಳುತ್ತಿದ್ದದ್ದು ಬಹಳ ವಿಶಿಷ್ಠವಾಗಿತ್ತು ವಿಶ್ರಾಂತ ಮುಖ್ಯೋಪಾಧ್ಯಾಯ ಜಿ.ಕೆ.ಹಿರೇಮಠ ಒಂದನೇ ಗೋಷ್ಠಿಯ ಹಾಗೂ ಸಂಸ್ಥೆಯ ಕಾರ್ಯದಶರ್ಿ ಸವಿತಾ ತೆಗ್ಗಿನಮಠ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಕೆ.ಜಿ.ಐ.ಡಿ. ಅಧೀಕ್ಷಕ ಎಸ್.ಕೆ.ಹಿರೇಮಠ ಸ್ಥಳೀಯ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಅಶೋಕ ಸಿದ್ಧಾಪುರ, ಸದಸ್ಯೆ ಕಸ್ತೂರಿ ಬಡ್ಲಿಂಗೋಳ,  ಪಿ.ಕೆ.ಪಿ.ಎಸ್. ನಿದರ್ೇಶಕ ಸಿ.ಎಸ್.ಲಾಲಿಬುಡ್ಡಿ, ಖಜಾಂಚಿ ಎಸ್. ಕೆ ಹಿರೇಮಠ, ಸಂಜಯಕುಮಾರ ತೆಗ್ಗಿನಮಠ, ಪತ್ರಕರ್ತ ಮೀರಾ ತಟಗಾರ, ಲಕ್ಷ್ಮಣ ಕಿಶೋರಿ ಮುಂತಾದವರು ಉಪಸ್ಥಿತರಿದ್ದರು. ಗೋಷ್ಠಿಗಳ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು