ನ್ಯಾಯಾಲಯದಲ್ಲಿ ನನ್ನ ಪರ ತೀರ್ಪು : ಅನರ್ಹ ಶಾಸಕ ಶ್ರೀಮಂತ ಪಾಟೀಲ

ಕಾಗವಾಡ 01: ವಿಧಾನಸಭೆ ಮಾಜಿ ಸಭಾಪತಿ ರಮೇಶಕುಮಾರ ಇವರು ನನ್ನನ್ನು ಅನರ್ಹ ಮಾಡಿದ್ದು ಸಂಪೂರ್ಣವಾಗಿ ತಪ್ಪಾಗಿದೆ. ನ್ಯಾಯಾಲಯದಲ್ಲಿ ನನ್ನ ವಾದ ಮಂಡಿಸಿದ್ದು, ನನ್ನ ಪರ ತೀರ್ಪು ಬರಲಿದೆಯೆಂದು ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಹೇಳಿದರು.

ಸೋಮವಾರ ರಂದು ಕಾಗವಾಡದಲ್ಲಿ 1.22 ಕೋಟಿ ರೂ. ವೆಚ್ಚಗಳ ಅಭಿವೃದ್ಧಿ ಕಾಮಗಾರಿಗಳ ಪೂಜೆ ಕಾರ್ಯಕ್ರಮ ನಿಮಿತ್ಯ ಆಗಮಿಸಿದಾಗ ಅವರು ತಮ್ಮ ಅಭಿಪ್ರಾಯ ಹೇಳಿದರು.

ನಾನು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಉಪಚಾರ ತೆಗೆದುಕೊಳ್ಳುತ್ತಿದ್ದೆ. ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಸವಿಸ್ಥಾರ ಮಾಹಿತಿ ನೀಡಿದ್ದರೂ ನನ್ನನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿದ್ದಾರೆ.

ಬರು ತಿಂಗಳಿನಲ್ಲಿ ಜರುಗುವ ಉಪಚುನಾವಣೆಯಲ್ಲಿ ನಿಮಗೆ ಬಿಜೆಪಿ ಪಕ್ಷದ ಟಿಕೇಟ್ ನೀಡಬಾರದಂತೆ ಮಾಜಿ ಸಚಿವ ಉಮೇಶ ಕತ್ತಿ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ, ನ್ಯಾಯಾಲಯದಲ್ಲಿ ವಾದ ಪ್ರಾರಂಭವಿದ್ದು. ಈ ಬಗ್ಗೆ ಹೇಳುವುದು ತಪ್ಪು ಎಂದು ಹೇಳಿ, ನನ್ನ ಶಾಸಕ ಸ್ಥಾನದ ಅನರ್ಹತೆಗೆ ನ್ಯಾಯಾಲಯ ನ್ಯಾಯ ನೀಡುವ ಆಸೆಯಿದಿದ್ದರಿಂದ ಚುನಾವಣೆಗೆ ಸ್ಪರ್ದಿಸುವ ಸನ್ನಿವೇಶ ಬರಲಾರದು ಎಂದು ಹೇಳಿದರು.

ನಾನು ಯಾರೂ ಹತ್ತಿರ ಪಕ್ಷದ ಟಿಕೇಟ್ ನೀಡಿರಿ ಎಂದು ಕೇಳೆಯಿಲ್ಲಾ. ಇಷ್ಟರಲ್ಲಿ ನನಗೆ ಟಿಕೇಟ್ ನೀಡಬಾರದೆಂದು ಹೇಳುತ್ತಿರುವುದು ಅನಾವಶ್ಯಕ ಎಂದರು.

ಈ ವೇಳೆ ಅವರ ಸುಪುತ್ರ ಶ್ರೀನಿವಾಸ ಪಾಟೀಲ, ಸುಭಾಷ ಕಠಾರೆ, ಸುಧಾಕರ ಭಗತ್, ಸುಭಾಷ ಮೋನೆ, ಅಜೀತ ಕರವ, ರಮೇಶ ಚೌಗುಲೆ, ಪ್ರಕಾಶ ಚೌಗುಲೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು