ಬೆಟಗೇರಿ 04 :ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿಗೆ ಡಿ.4ರಂದು ನಡೆದ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಮುತ್ತವ್ವ ಮಾರುತಿ ಬಡಿಗೇರ ಅವಿರೂಧವಾಗಿ ಆಯ್ಕೆಯಾದರು.
ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಇಲ್ಲಿಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಮುತ್ತವ್ವ ಬಡಿಗೇರ ನೂತನ ಅಧ್ಯಕ್ಷರಾಗಿ ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಮದಾಪೂರ ಜೆಆರ್‌ಬಿಸಿ ಉಪವಿಭಾಗ ನಂ-14ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಘುರಾಮ ಎಸ್.ಬಿ. ಅವರು ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯ ಗ್ರಾಪಂ ಪಿಡಿಒ ಎಂ.ಎಲ್.ಯಡ್ರಾಂವಿ, ಮಾರುತಿ ಸಾಯನ್ನವರ, ಲಕ್ಷ್ಮಣ ಅರಬನ್ನವರ, ಯಮನಪ್ಪ ವಾಳದ, ವಿಠಲ ಕೌಜಲಗಿ, ಶಂಕರ ಭರಮನ್ನವರ, ಮಾರುತಿ ಬಣಜಿಗೇರ, ಗುರುನಾಥ ಕುರೇರ, ಮಾರ್ತಂಡಪ್ಪ ವಗ್ಗರ, ಬಸನಗೌಡ ಪಾಟೀಲ, ಪರಗೌಡ ಪಾಟೀಲ, ಮಹಾದೇವ ಗೌಡರ, ನಾಗಪ್ಪ ದುಂಡಾನಟ್ಟಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು, ರಾಜಕೀಯ ಮುಖಂಡರು, ಗ್ರಾಮಸ್ಥರು ಇದ್ದರು.
ಬೆಟಗೇರಿ:ಸಮೀಪದ ತಪಸಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮುತ್ತವ್ವ ಮಾರುತಿ ಬಡಿಗೇರ ಅವಿರೂಧವಾಗಿ ಆಯ್ಕೆಯಾದರು.