ಮುತ್ಸದ್ದೀ ರಾಜಕಾರಣೀ ಎಸ್.ಎಂ. ಕೃಷ್ಣ ಇನ್ನೂ ಅಮರ : ಖಾದ್ರಿ
ಶಿಗ್ಗಾವಿ 11 : ಪಟ್ಟಣದ ಕಿತ್ತೂರರಾಣಿ ಚೆನ್ನಮ್ಮನ ವೃತ್ತದ ಬಳಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಮತ್ತು ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಂ.ಕೃಷ್ಣಾ ಅವರಿಗೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ನೇತೃತ್ವದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಿಸಲಾಯಿತು.
ಶ್ರದ್ದಾಂಜಲಿ ಅರ್ಿಸಿ ಮಾತನಾಡಿದ ಅವರು ನಮ್ಮ ಗುರುಗಳು, ರಾಜ್ಯದ ಅಜಾತಶತ್ರು ಮತ್ತು ಕರುನಾಡಿನ ಐಟಿ ಪಿತಾಮಹ ಅಲ್ಲದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ರಾಜಕೀಯ ದ್ರುವತಾರೇ, ಮುತ್ಸದ್ದೀ ರಾಜಕಾರಣೀ ಎಸ್.ಎಂ. ಕೃಷ್ಣ ಅವರ ಅಗಲಿಕೇ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಆದರೂ ಸಹಿತ ಅವರು ಬೆಂಗಳೂರನ್ನು ಸಿಲಿಕಾನ ಸಿಟಿ ಹಾಗೂ ವಿಶ್ವದಲ್ಲಿ ಐಟಿ ಹಬ್ಬ ಮಾಡುವ ಮೂಲಕ ಅಮರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕ ಕಾಂಗ್ರೇಸ ಪ್ರಚಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಕುರುಬ ಸಮಾಜ ಅಧ್ಯಕ್ಷ ಪಕ್ಕೀರ್ಪ ಕುಂದೂರ, ಮುಖಂಡರಾದ ಶಿವಾನಂದ ಬಾಗೂರ, ಮಂಜುನಾಥ ಮಣ್ಣಣ್ಣವರ, ನ್ಯಾಯವಾದಿ ಸಲೀಂ ಪರೋಖಿ, ಮುನ್ನಾ ಬಿಸ್ತಿ, ಸುರೇಶ ಹರಿಜನ ಸೇರಿದಂತೆ ಎಸ್.ಎಂ. ಕೃಷ್ಣ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.